logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

immaculately
ಕ್ರಿಯಾವಿಶೇಷಣ
  • ಪರಿಶುದ್ಧವಾಗಿ; ನಿರ್ಮಲವಾಗಿ; ನಿಷ್ಕಳಂಕ ರೀತಿಯಲ್ಲಿ.
  • ದೋಷರಹಿತವಾಗಿ; ನಿರ್ದುಷ್ಟವಾಗಿ; ಕುಂದಿಲ್ಲದೆ.
  • ಚೊಕ್ಕವಾಗಿ; ಶುಭ್ರವಾಗಿ; ಸ್ವಚ್ಛವಾಗಿ.

  • immaculateness
    ನಾಮವಾಚಕ
    = immaculacy.

    immanence
    ನಾಮವಾಚಕ
  • ಅಂತರ್ಗತತೆ; ಅಂತಸ್ಥತ್ವ; ಒಳಗೆ ನೆಲಸಿರುವಿಕೆ.
  • ಅಂತರ್ವ್ಯಾಪಿತ್ವ; ಸರ್ವಾಂತರ್ಗತತ್ವ; ವಿಶ್ವವ್ಯಾಪಕತೆ.

  • immanency
    ನಾಮವಾಚಕ
    = immanence.

    immanent
    ಗುಣವಾಚಕ
  • ಅಂತರ್ಗತ; ಅಂತಸ್ಥ; ಅಂತರ್ಭೂತ; ಒಳಗೆ ನೆಲಸಿರುವ: the immanent factors in social evolution ಸಮಾಜ ವಿಕಸನದಲ್ಲಿ ಅಂತರ್ಗತವಾಗಿರುವ ಅಂಶಗಳು.
  • (ದೇವರ ವಿಷಯದಲ್ಲಿ) ವಿಶ್ವವ್ಯಾಪಿಯಾದ; ಸರ್ವಾಂತರ್ಯಾಮಿ; ಜಗದಂತರ್ವ್ಯಾಪಿ(ಯಾದ): God is at once transcending and immanent in the universe ದೇವರು ಏಕಕಾಲದಲ್ಲಿ ವಿಶ್ವಾಂತರ್ವ್ಯಾಪಿಯಾಗಿಯೂ ವಿಶ್ವಾತೀತನಾಗಿಯೂ ಇರುತ್ತಾನೆ.

  • immanentism
    ನಾಮವಾಚಕ
    ವಿಶ್ವವ್ಯಾಪಿತ್ವ ವಾದ; ಸರ್ವಾಂತರ್ಯಾಮಿ ವಾದ; ಮುಖ್ಯವಾಗಿ ದೇವರು ಸರ್ವಾಂತರ್ಯಾಮಿ, ವಿಶ್ವವ್ಯಾಪಿ ಎಂಬ ನಂಬಿಕೆ.

    immanentist
    ನಾಮವಾಚಕ
    ವಿಶ್ವವ್ಯಾಪಿತ್ವವಾದಿ; ಸರ್ವಾಂತರ್ಯಾಮಿವಾದಿ; ದೇವರು ಸರ್ವಾಂತರ್ಯಾಮಿ ಎಂಬ ನಂಬಿಕೆಯುಳ್ಳವ.

    immaterial
    ಗುಣವಾಚಕ
  • ಅದ್ರವ್ಯ; ಅಮೂರ್ತ; ಅಶರೀರ; ಅಭೌತ; ದ್ಯವ್ಯವಲ್ಲದ: as immaterial as a ghost ಪ್ರೇತದಂತೆಯೇ ಅಶರೀರಿಯಾದ.
  • ಅಮುಖ್ಯ; ಅಪ್ರಧಾನ; ಗೌಣ; ಮಹತ್ವವಿಲ್ಲದ: immaterial objections ಅಮುಖ್ಯ ಆಕ್ಷೇಪಗಳು.

  • immaterialism
    ನಾಮವಾಚಕ
    ಅದ್ರವ್ಯವಾದ; ದ್ರವ್ಯಕ್ಕೆ, ಇಂದ್ರಿಯಗಳಿಗೆ ಗೋಚರವಾಗದೆ ಇರುವ ಸ್ವತಂತ್ರ ಅಸ್ತಿತ್ವವಿಲ್ಲವೆಂಬ ಸಿದ್ಧಾಂತ.

    immaterialist
    ನಾಮವಾಚಕ
    ಅದ್ರವ್ಯವಾದಿ.


    logo