logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

effuse
ಗುಣವಾಚಕ
  • (ಸಸ್ಯವಿಜ್ಞಾನ) (ಹೂಗಳ ವಿಷಯದಲ್ಲಿ) ವಿರಳವಾಗಿ ಹರಡುವ.
  • (ಪ್ರಾಣಿವಿಜ್ಞಾನ) (ಚಿಪ್ಪುಗಳು, ಶಂಖಗಳು, ಮೊದಲಾದವುಗಳ ವಿಷಯದಲ್ಲಿ) ಬಿಡುತುಟಿಯ; ವಿಭಕ್ತಾಧರದ; ವಿಶ್ಲಿಷ್ಟಾಧರದ; ವಿಲಗ್ನಾಧರದ; ತುಟಿಗಳು ಗೀರಿನಿಂದ, ಸಂದುಗೆರೆಯಿಂದ ಬೇರ್ಪಟ್ಟಿರುವ.

  • effuse
    ಸಕರ್ಮಕ ಕ್ರಿಯಾಪದ
    (ರೂಪಕವಾಗಿ ಸಹ) (ದ್ರವ, ಗಾಳಿ, ಬೆಳಕು, ವಾಸನೆ, ಮೊದಲಾದವುಗಳನ್ನು) ಎರಚು; ಹಬ್ಬಿಸು; ಹರಡಿಸು; ಹೊರಸೂಸು.

    effusion
    ನಾಮವಾಚಕ ಪದಗುಚ್ಛ
    effusion of blood ರಕ್ತಪಾತ; ರಕ್ತಪ್ರವಾಹ.
  • ಪ್ರವಾಹ; ಹರಿವು; ತಡೆಯಿಲ್ಲದ, ನಿರರ್ಗಳವಾದ, ಸಂತತವಾದ ಹರಿವು.
  • (ಸಾಹಿತ್ಯತಿಯ ವಿಷಯದಲ್ಲಿ, ಅನೇಕವೇಳೆ ತುಚ್ಛವಾಗಿ ಹೇಳುವಾಗ) ವಾಕ್ಪ್ರವಾಹ; ವಾಗ್ಧಾರೆ; ನಿರರ್ಗಳವಾದ ಮಾತು.
  • (ರೋಗಶಾಸ್ತ್ರ) ನಿಸ್ರಾವ; ಸಂಚಯ; ತನ್ನ ಸ್ವಾಭಾವಿಕ ಸ್ಥಳವನ್ನು ಬಿಟ್ಟು ಅಂಗಾಂಶಗಳಲ್ಲಿ ಯಾ ಯಾವುದೇ ಟೊಳ್ಳಿನಲ್ಲಿ ದ್ರವ ತುಂಬಿಕೊಳ್ಳುವುದು.
  • (ರೋಗಶಾಸ್ತ್ರ) ಅಂಥ ದ್ರವ.

  • effusive
    ಗುಣವಾಚಕ
  • (ಭಾಷಣ, ಮಾತು, ಭಾವಗಳ ವಿಷಯದಲ್ಲಿ) ಉಕ್ಕುವ; ತುಂಬಿತುಳುಕುವ; ಹೊಮ್ಮಿಹರಿಯುವ; ಉಕ್ಕಿಹರಿಯುವ.
  • (ಭೂವಿಜ್ಞಾನ) (ಅಗ್ನಿಶಿಲೆಯ ವಿಷಯದಲ್ಲಿ) ಸ್ರುತ; ದ್ರವಸ್ಥಿತಿಯಲ್ಲಿ ಹರಿದು ಬಂದು ಘನೀಕರಿಸಿರುವ.

  • effusively
    ಕ್ರಿಯಾವಿಶೇಷಣ
    (ಭಾವಗಳ ವಿಷಯದಲ್ಲಿ) ತುಂಬಿತುಳುಕುವಂತೆ; ಉಕ್ಕಿಹರಿಯುವಂತೆ.

    effusiveness
    ನಾಮವಾಚಕ
    (ಭಾವಗಳ ವಿಷಯದಲ್ಲಿ) ತುಂಬಿತುಳುಕುವಿಕೆ; ಉಕ್ಕಿಹರಿಯುವಿಕೆ; ಹೊಮ್ಮುಹರಿವು; ಪೂರ್ಣಪ್ರವಾಹ.

    eft
    ನಾಮವಾಚಕ
    ನ್ಯೂಟ್‍; ಹಲ್ಲಿಯ ಆಕಾರದ ಒಂದು ಉಭಯಚರ ಜೀವಿ.

    Efta
    ನಾಮವಾಚಕ
    = EFTA.

    EFTA
    ಸಂಕ್ಷಿಪ್ತ
    European Free Trade Association.

    eftsoons
    ಕ್ರಿಯಾವಿಶೇಷಣ
  • (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಕೂಡಲೆ; ಬೇಗನೆ; ತತ್‍ಕ್ಷಣ.
  • ಒಮ್ಮೊಮ್ಮೆ; ಆಗಾಗ; ಆಗೀಗ.


  • logo