(ಅಂಗದ) ದುಂಡುಬ್ಬು: ball of the thumb ಹೆಬ್ಬೆರಳಿನ ಬುಡದ ಉಬ್ಬು. ball of the foot ಕಾಲಿನ ಹೆಬ್ಬೆರಳಿನ ಬುಡದ ಉಬ್ಬು.
(ಬಹುವಚನದಲ್ಲಿ ಅಶಿಷ್ಟ) ತರಡು; ವೃಷಣ.
(ರೂಪಕವಾಗಿ) ಯಶಸ್ವಿಯಾಗದ ಪ್ರಯತ್ನ.
ಕಣ್ಣುಗುಡ್ಡೆ.
ball
ನಾಮವಾಚಕ
ನುಡಿಗಟ್ಟು
ನರ್ತನಕೂಟ; ನೃತ್ಯಗೋಷ್ಠಿ.
open the ball
ನೃತ್ಯ ಆರಂಭಿಸು.
(ರೂಪಕವಾಗಿ) ಕೆಲಸ ಶುರುಮಾಡು; ಕಾರ್ಯ ಪ್ರಾರಂಭಿಸು; ಕಾರ್ಯಾಚರಣೆ ಆರಂಭಿಸು.
give a ball (ಮನರಂಜನೆಯನ್ನು ಏರ್ಪಡಿಸುವವನ ವಿಷಯದಲ್ಲಿ) ನೃತ್ಯಕೂಟವನ್ನು ಏರ್ಪಡಿಸು.
have (oneself) a ball (ಅಶಿಷ್ಟ) ಮಜಾ ಮಾಡು; ಖುಷಿಪಡು; ಸಂತೋಷಪಡು.
ball
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ನುಡಿಗಟ್ಟು
ಚೆಂಡು ಸುತ್ತು; ಉಂಡೆಕಟ್ಟು; ಮುದ್ದೆ ಮಾಡು. ಚೆಂಡಾಗು; ಉಂಡೆಯಾಗು; ಮುದ್ದೆಯಾಗು. ball up (ಅಶಿಷ್ಟ) ತೊಡಕು, ಗೋಜಲು – ಮಾಡು.
ball and chain
ನಾಮವಾಚಕ
ಸರಪಣಿ ಗುಂಡು; ಕೈದಿಯ ಕಾಲಿಗೆ ಸರಪಣಿಯಿಂದ ಕಟ್ಟಿದ ಭಾರವಾದ ಕಬ್ಬಿಣದ ಗುಂಡು.
(ಹೊರೆಯೆನಿಸುವ) ಅಡ್ಡಿ; ತಡೆ; ಪ್ರತಿಬಂಧ: the accumulation of small debts was ball to his progress ಸಣ್ಣಪುಟ್ಟ ಸಾಲಗಳು ಸೇರಿಕೊಂಡು ಅವನ ಪ್ರಗತಿಗೆ ಅಡ್ಡಿಯಾದವು.
(ಅಶಿಷ್ಟ) ಹೆಂಡತಿ.
ball and socket joint
ನಾಮವಾಚಕ
ಒರಳುಗುಂಡು ಕೀಲು; ಗುಳಿ ಯಾ ಸಾಕೆಟ್‍ನಲ್ಲಿ ಗುಂಡನೆಯ ತುದಿಯನ್ನು ಇಟ್ಟಿರುವ, ಎಲ್ಲ ಕಡೆಗಳಲ್ಲಿಯೂ ಚಲನೆಗೆ ಅವಕಾಶ ಕೊಡುವ ಕೀಲು.
ball bearing
ನಾಮವಾಚಕ
(ಯಂತ್ರಶಾಸ್ತ್ರ) ಬಾಲ್‍ಬೇರಿಂಗ್; ಗುಂಡುಹೊರಳು; ಯಂತ್ರಗಳಲ್ಲಿ ಚಲಿಸುವ ಎರಡು ಭಾಗಗಳು ಒಂದಕ್ಕೊಂದು ಉಜ್ಜುವಾಗ ಆಗುವ ಘರ್ಷಣೆಯನ್ನು ಕಡಮೆ ಮಾಡುವುದಕ್ಕಾಗಿ ಆ ಭಾಗಗಳ ನಡುವೆ ಸೇರಿಸುವ ಉಕ್ಕಿನ ಗೋಲಿಗಳು.