ವೇಗವರ್ಧನ; ಗತಿವೃದ್ಧಿ; ತ್ವರಣ; ವೇಗ ಹೆಚ್ಚಿಸುವ, ತ್ವರಿತಗೊಳಿಸುವ ಕ್ರಿಯೆ ಯಾ ಪ್ರಕ್ರಿಯೆ.
ತ್ವರಿತ ಸ್ಥಿತಿ; ವೇಗ ಹೆಚ್ಚಿಸಿದ ಸ್ಥಿತಿ.
(ವಾಹನದ ವಿಷಯದಲ್ಲಿ) ವೇಗಸಾಮರ್ಥ್ಯ; ವೇಗವನ್ನು ಹೆಚ್ಚಿಸಿಕೊಳ್ಳುವ ಶಕ್ತಿ.
(ಭೌತವಿಜ್ಞಾನ) ವೇಗೋತ್ಕರ್ಷ; ವೇಗವು ವ್ಯತ್ಯಾಸಹೊಂದುವ ದರ.
(ಅರ್ಥಶಾಸ್ತ್ರ) ಬಂಡವಾಳ ಸರಕು ಬೇಡಿಕೆ ಉತ್ಕರ್ಷ; ಕೈಗಾರಿಕೆಗಳ ಯಾವುದೇ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾದರೆ ಅದರ ಉತ್ಪಾದನೆಗೆ ಬೇಕಾಗುವ ಬಂಡವಾಳ ಸರಕುಗಳಿಗೆ ಬೇಡಿಕೆ ಅದಕ್ಕೆ ಅನುಗುಣವಾಗಿ ಹೆಚ್ಚುತ್ತದೆ ಎಂಬ ಅರ್ಥಶಾಸ್ತ್ರೀಯ ತತ್ತ್ವ.
acceleration of gravity
ನಾಮವಾಚಕ
(ಭೌತವಿಜ್ಞಾನ) ಗುರುತ್ವದ ವೇಗೋತ್ಕರ್ಷ; ಶೂನ್ಯದಲ್ಲಿ ಒಂದು ಕಾಯವು ಗುರುತ್ವದ ಪ್ರಭಾವಕ್ಕೊಳಗಾಗಿ ಬೀಳುವಾಗ ಅದು ಹೊಂದುವ ವೇಗೋತ್ಕರ್ಷ (ಸಂಕ್ಷಿಪ್ತ g.)
acceleration of tides
ನಾಮವಾಚಕ
ಉಬ್ಬರ ತ್ವರಿತ; ಸಮುದ್ರದ ಏರಿಳಿತದಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಲೆಕ್ಕಹಾಕಿದ ಕಾಲಕ್ಕಿಂತ ಎಷ್ಟು ಮುಂಚೆ ಉಬ್ಬರ ಉಂಟಾಗುವುದೋ ಆ ಕಾಲ ಪರಿಮಿತಿ.
acceleration principle
ನಾಮವಾಚಕ
(ಅರ್ಥಶಾಸ್ತ್ರ) ಉತ್ಕರ್ಷಾಪಕರ್ಷ ತತ್ತ್ವ; ವರಮಾನವು ಹೆಚ್ಚು ಯಾ ಕಡಮೆಯಾದಂತೆ ಬಂಡವಾಳ ಹೂಡಿಕೆಯೂ ಹೆಚ್ಚು ಯಾ ಕಡಮೆಯಾಗುವುದೆಂಬ ತತ್ತ್ವ.
accelerative
ಗುಣವಾಚಕ
= accelerating.
accelerator
ನಾಮವಾಚಕ
ವೇಗವರ್ಧಕ:
(ರಸಾಯನವಿಜ್ಞಾನ) ಯಾವುದಾದರೂ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಕರ್ತೃ, ಉದಾಹರಣೆಗೆ ಛಾಯಾ ಚಿತ್ರ ಸ್ಫುಟೀಕರಣವನ್ನು ತ್ವರಿತಗೊಳಿಸಬಲ್ಲ ರಾಸಾಯನಿಕ.
ದೇಹಕ್ರಿಯೆಗಳನ್ನು ತ್ವರಿತಗೊಳಿಸುವ ನರಗಳು ಯಾ ಸ್ನಾಯು.
(ಮುಖ್ಯವಾಗಿ) ಮೋಟಾರು ವಾಹನದ ವೇಗವನ್ನು ಹೆಚ್ಚಿಸಲು ಬಳಸುವ ಸಾಧನ.
(ಭೌತವಿಜ್ಞಾನ) ವೇಗೋತ್ಕರ್ಷಕ; (ಇಲೆಕ್ಟ್ರಾನ್, ಪ್ರೋಟಾನ್, ಮೊದಲಾದ) ವಿದ್ಯುದಾವಿಷ್ಟ ಕಣಗಳನ್ನು ಉತ್ಪತ್ತಿ ಮಾಡಿ ಅವುಗಳನ್ನು ನಿಯಂತ್ರಿತ ಪಥದಲ್ಲಿ ವೇಗೋತ್ಕರ್ಷಕ್ಕೊಳಪಡಿಸಿ ಅವು ಅತ್ಯಧಿಕ ವೇಗಪೂರಿತ ಕ್ಷೇಪಕಗಳಾಗಿ ಹೊರಡುವಂತೆ ಮಾಡುವ ಸಾಧನ.
accelerometer
ನಾಮವಾಚಕ
ವೇಗೋತ್ಕರ್ಷಮಾಪಕ; ಚಲಿಸುತ್ತಿರುವ ವಾಹನದ ವೇಗದ ವರ್ಧನೆಯನ್ನು ಅಳೆಯುವ ಸಾಧನ.
ಕಂಪನಮಾಪಕ; ಯಂತ್ರದ ಕಂಪನವನ್ನು ಅಳೆಯುವ ಸಾಧನ.
accent
ನಾಮವಾಚಕ
ಒತ್ತು; ಬಲ; ಘಾತ; ಪದೋಚ್ಚಾರಣೆಯಲ್ಲಿ ಒಂದು ವರ್ಣಕ್ಕೆ ಕೊಡುವ ಪ್ರಾಧಾನ್ಯ.
(ಛಂದಸ್ಸು) ಒತ್ತು ಚಿಹ್ನೆ; ಘಾತಚಿಹ್ನೆ; ($’$).
(ವ್ಯಕ್ತಿಯ, ಪ್ರದೇಶದ ಯಾ ರಾಷ್ಟ್ರದ) ಉಚ್ಚಾರಣಾ–ರೀತಿ, ಶೈಲಿ.
ವಿವಿಧ ಭಾವಗಳನ್ನು ಪ್ರಕಟಪಡಿಸಲು ಉಚ್ಚಾರಣೆಯಲ್ಲಿ ಮಾಡುವ ಏರಿಳಿತ.
(ಬಹುವಚನ) (ಕಾವ್ಯಪ್ರಯೋಗ) ಭಾಷೆ : accents yet unknown ಇನ್ನೂ ಹುಟ್ಟಿಲ್ಲದ ಭಾಷೆಗಳು; ಮುಂದೆ ಹುಟ್ಟುವ ಭಾಷೆಗಳು.
(ಬಹುವಚನ) ಮಾತು; ನುಡಿ; ಮಾತಿನ ರೀತಿ: in the tender accents of lover ಪ್ರೇಮದ ಮೃದುನುಡಿಗಳಲ್ಲಿ.
(ಲಯಾನುಸಾರವಾಗಿ ಪದ್ಯದಲ್ಲಿ ಯಾ ಗದ್ಯದಲ್ಲಿ ಉಚ್ಚಾರಾಂಶಗಳ ಮೇಲೆ ಹಾಕುವ) ಒತ್ತು; ಘಾತ.
(ಸಂಗೀತ) (ನಿಯತವೋ ಅನಿಯತವೋ ಆದ ಅವಧಿಗಳಲ್ಲಿ ಆವರ್ತನವಾಗುವ) ಒತ್ತು; ಘಾತ.
ತೀವ್ರತೆ; ತೀಕ್ಷ್ಣತೆ: the accent of the blow ಏಟಿನ ತೀವ್ರತೆ.
ವೈಶಿಷ್ಟ್ಯ; ವಿಶಿಷ್ಟತೆ: these are the accents of honour in the German services ಜರ್ಮನಿಯ ಸೇನಾ ಖಾತೆಗಳಲ್ಲಿ ಇವು ಗೌರವದ ವೈಶಿಷ್ಟ್ಯಗಳು.
ಪ್ರಾಧಾನ್ಯ; ಪ್ರಾಮುಖ್ಯ; ಮಹತ್ವ: the accent of practical work in teaching science ವಿಜ್ಞಾನದ ಬೋಧನೆಯಲ್ಲಿ ಪ್ರಯೋಗಕ್ಕೆ ಕೊಡುವ ಪ್ರಾಮುಖ್ಯ.
(ಕಲೆ) ವೈದೃಶ್ಯ; ವಿಲಕ್ಷಣಾಂಶ; ವೈಲಕ್ಷಣ್ಯ; ಹೋಲಿಕೆಯಿಲ್ಲದಿರುವ ವಿವರ; ಒಂದು ರಚನೆಯ ಆಕಾರ ವಿಶೇಷಗಳನ್ನು ಎತ್ತಿ ತೋರಿಸುವ ಯಾ ವರ್ಣ ವಿನ್ಯಾಸವೊಂದರಲ್ಲಿ ಭೇದ ತೋರಿಸುವ ಬಣ್ಣದ ಯಾ ಬೆಳಕಿನ ಅಂಶ: an accent of light on the neck ಕತ್ತಿನ ಮೇಲೆ ಎದ್ದು ಕಾಣುವ ಬೆಳಕಿನ ವಿವರ. an eye which discerns at a glance where the accents of a building lie ಕಟ್ಟಡದ ವಿಲಕ್ಷಣಾಂಶಗಳು ಎಲ್ಲಿವೆ ಎಂಬುದನ್ನು ಒಂದು ನೋಟದಲ್ಲಿ ಗ್ರಹಿಸುವ ಕಣ್ಣು.
(ರೂಪಕವಾಗಿ) ಛಾಯೆ; ರುಚಿ; ವಾಸನೆ; ಎಲೆ; ಸ್ಪಷ್ಟವಾಗಿ ಗೋಚರಿಸುವ ಆದರೆ ಗೌಣವಾಗಿರುವ ವಿನ್ಯಾಸ, ಬಣ್ಣ, ರುಚಿ, ಮೊದಲಾದವು: the salad dressing had an accent of garlic ಕೋಸಂಬರಿಯಲ್ಲಿ ಬೆಳ್ಳುಳ್ಳಿಯ ವಾಸನೆ ಇತ್ತು.
accent
ಸಕರ್ಮಕ ಕ್ರಿಯಾಪದ
(ಪದವನ್ನು ಉಚ್ಚಾರಾಂಶವನ್ನು) ಎತ್ತರಿಸು; ಒತ್ತಿ ಉಚ್ಚರಿಸು.
ಒತ್ತು ಚಿಹ್ನೆ ಹಾಕು; ಘಾತಚಿಹ್ನೆ ಹಾಕು.
(ರೂಪಕವಾಗಿ) ಎದ್ದು ಕಾಣುವಂತೆ ಮಾಡು; ಸ್ಫುಟಗೊಳಿಸು: the brown colour accents mountains on the map ಕಂದು ಬಣ್ಣವು ನಕ್ಷೆಯಲ್ಲಿ ಪರ್ವತಗಳನ್ನು ಎದ್ದು ಕಾಣುವಂತೆ ಮಾಡಿದೆ.
ಹೆಚ್ಚಿಸು; ತೀವ್ರಗೊಳಿಸು; ಅಧಿಕಗೊಳಿಸು: the incident accented the antagonism between the two countries ಆ ಘಟನೆ ಎರಡು ದೇಶಗಳ ನಡುವಣ ವೈಷಮ್ಯವನ್ನು ತೀವ್ರಗೊಳಿಸಿತು.
ಪ್ರಾಮುಖ್ಯ ನೀಡು; ಮಹತ್ವ ಕೊಡು: the development programme accents rural electrification ಅಭಿವೃದ್ಧಿ ಯೋಜನೆಯು ಗ್ರಾಮಾಂತರ ಪ್ರದೇಶಗಳ ವಿದ್ಯುದೀಕರಣಕ್ಕೆ ಮಹತ್ವಕೊಡುತ್ತದೆ.
accentor
ನಾಮವಾಚಕ
ಬೇಲಿಗುಬ್ಬಿ; ಪ್ರೊನೆಲಾ ಕುಲಕ್ಕೆ ಸೇರಿದ, ಮುಖ್ಯವಾಗಿ ಯುರೋಪಿನ ಪಕ್ಷಿಜಾತಿ.