logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tantric
ಗುಣವಾಚಕ
ತಂತ್ರದ; ತಂತ್ರಶಾಸ್ತ್ರದ.

tantrism
ನಾಮವಾಚಕ
ತಂತ್ರಶಾಸ್ತ್ರ.

tantrist
ನಾಮವಾಚಕ
ತಾಂತ್ರಿಕ; ತಂತ್ರಶಾಸ್ತ್ರ ಪರಿಣತ.

tantrum
ನಾಮವಾಚಕ
ಸಿಡುಕು; ಮುನಿಸು; ರೇಗಾಟ; ಕೂಗಾಟ–ಹಾರಾಟ; ಕೋಪೋದ್ರೇಕ; ರಂಪಾಟ: is in a tantrum ಕೋಪೋದ್ರೇಕದಲ್ಲಿದ್ದಾನೆ. went into her tantrums ಅವಳ ಕೂಗಾ–ಹಾರಾಟ ಪ್ರಾರಂಭವಾಯಿತು.

Taoiseach
ನಾಮವಾಚಕ
ಐರಿಷ್‍ ರಿಪಬ್ಲಿಕ್‍ನ ಪ್ರಧಾನ ಮಂತ್ರಿ.

Taoism
ನಾಮವಾಚಕ
ಟಾವೊ ತತ್ತ್ವ; (ಸುಮಾರು ಕ್ರಿಸ್ತಪೂರ್ವ 500ರಲ್ಲಿದ್ದ) ನಮ್ರತೆ, ಧರ್ಮಶ್ರದ್ಧೆಗಳನ್ನು ಸಾರುವ, ಚೀಣಿ ದಾರ್ಶನಿಕ ಲಾಒಟ್ಸ್‍ನ ಧರ್ಮತತ್ತ್ವಗಳು.

Taoist
ನಾಮವಾಚಕ
ಟಾವೋ ತತ್ತ್ವಜ್ಞ ಯಾ ಅನುಯಾಯಿ.

Taoistic
ಗುಣವಾಚಕ
ಟಾವೋ ತತ್ತ್ವದ, ಅದಕ್ಕೆ ಸಂಬಂಧಿಸಿದ.

tap
ನಾಮವಾಚಕ ಪದಗುಚ್ಛ
  • ನಲ್ಲಿ; ಕೊಳಾಯಿ.
  • (ಪೀಪಾಯಿನ) ತಿರುಪು ಬಿರುಡೆ.
  • (ಅದರ ಗುಣಕ್ಕೆ ಸಂಬಂಧಿಸಿದಂತೆ) ನಿರ್ದಿಷ್ಟ ಬಟ್ಟಿಯ ಮದ್ಯ.
  • (ಬ್ರಿಟಿಷ್‍ ಪ್ರಯೋಗ) ಮದ್ಯ (ಮಾರುವ ಯಾ ಕುಡಿಯುವ) ಕೋಣೆ.
  • ಟೆಲಿಹೋನ್‍ನಲ್ಲಿ ಕದ್ದಾಲಿಕೆ; (ಸಂಪರ್ಕವನ್ನು ಅಡ್ಡ ತಿರುಗಿಸಿ)ಕದ್ದು ಕೇಳುವುದು.
  • ಒಳ ತಿರುಪು ಕೊರಕ; ಒಳತಿರುಪಿನ ಸುತ್ತುಗೆರೆ ಕೊರೆಯುವ ಬೈರಿಗೆ, ಸಲಕರಣೆ.

  • tap
    ಸಕರ್ಮಕ ಕ್ರಿಯಾಪದ
  • (ಪೀಪಾಯಿಗೆ) ತಿರುಪು ಬಿರಡೆ ಹಾಕು.
  • (ಒಳಗಿನ ದ್ರವ ತೆಗೆಯುವುದಕ್ಕಾಗಿ) (ಪೀಪಾಯಿ ಮೊದಲಾದವಕ್ಕೆ) ತೂತುಮಾಡು; ಕಂಡಿ ಕೊರೆ; ತೂತು ಮಾಡಿ ಈಚೆಗೆ ಬಿಡು.
  • (ಶಸ್ತ್ರವೈದ್ಯ) ಶರೀರದೊಳಗೆ ಕೂಡಿಕೊಂಡ ದ್ರವವನ್ನು ಕಂಡಿ ಮಾಡಿ ಹೊರಬಿಡು, ಈಚೆಗೆ ತೆಗೆ.
  • ಹೀಗೆ ಹೊರಬಿಡಲು (ವ್ಯಕ್ತಿ ಮೊದಲಾದವರ ಮೇಲೆ) ಕಂಡಿ ಶಸ್ತ್ರಚಿಕಿತ್ಸೆ ನಡೆಸು.
  • ಕೊರೆದು, ಕಚ್ಚುಮಾಡಿ ಮರದ ರಸ ತೆಗೆ, ಇಳಿಸು.
  • (ಒಂದು ಜಿಲ್ಲೆ, ಪ್ರಾಂತ, ಮೊದಲಾದವುಗಳೊಡನೆ) ಸಂಪರ್ಕ ಸ್ಥಾಪಿಸು; ವ್ಯವಹಾರ ಬೆಳೆಸು; ವ್ಯಾಪಾರ ಹೂಡು.
  • (ಚಂದಾ ಸಂಗ್ರಹಣೆ ಮೊದಲಾದ ವಿಷಯಕ್ಕಾಗಿ ಒಬ್ಬ ವ್ಯಕ್ತಿಯನ್ನು) ಕೇಳು; ಕೋರು.
  • (ಒಬ್ಬನಿಂದ) ಮಾಹಿತಿ ಯಾ ಅಗತ್ಯ ವಸ್ತುಗಳು ಯಾ ಸಂಪನ್ಮೂಲಗಳನ್ನು–ಸಂಗ್ರಹಿಸು, ಪಡೆದುಕೊ.
  • (ದೂರವಾಣಿಯ ಕರೆ ಯಾ ತಂತಿ ಸಮಾಚಾರವನ್ನು ಕದ್ದಾಲಿಸಲು ದೂರವಾಣಿ, ವಾಹಕ ತಂತಿ, ಮೊದಲಾದವುಗಳಿಗೆ) ಗ್ರಾಹಕ ಸಲಕರಣೆ ಯಾ ಕೇಳಿಸಿಕೊಳ್ಳುವ ಸಾಧನವನ್ನು ಅಳವಡಿಸು, ಜೋಡಿಸು.
  • ಒಳತಿರುಪು ಕೊರೆ; ಒಳತಿರುಪು ಸುತ್ತುಗಳನ್ನು ಮಾಡು.


  • logo