logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

odalisque
ನಾಮವಾಚಕ
(ಚರಿತ್ರೆ) (ಮುಖ್ಯವಾಗಿ ತುರ್ಕಿಯ ಸುಲ್ತಾನನ ಜನಾನಾದಲ್ಲಿನ) ಬಾಂದಿ; ಏಷ್ಯಾ ದೇಶದ ಗುಲಾಮಳು ಯಾ ಉಪಪತ್ನಿ.

odd
ಗುಣವಾಚಕ ಪದಗುಚ್ಛ
  • ವಿಚಿತ್ರವಾದ; ವಿಲಕ್ಷಣವಾದ; ವಕ್ರವಾದ; ಅಚ್ಚರಿಯ; ಅಚ್ಚರಿ ಹುಟ್ಟಿಸುವಂಥ; ಅಸಾಮನ್ಯವಾದ; ಅಸಾಧಾರಣವಾದ; ಸಾಮಾನ್ಯ ರೀತಿ ಬಿಟ್ಟು ತನ್ನದೇ ಆದ ರೀತಿಯುಳ್ಳ: oddest creature I have ever seen ನಾನು ನೋಡಿರುವವರಲ್ಲೆಲ್ಲ ಅತ್ಯಂತ ವಿಚಿತ್ರ ಪ್ರಾಣಿ.
  • ಅನಿಯತ; ನಿಯತವಲ್ಲದ; ಅನಿಶ್ಚಿತ; ಸಾಂದರ್ಭಿಕ ; ಗೊತ್ತುವಳಿಯಿಲ್ಲದ: picks up odd jobs ಯಾವುದೋ ಅನಿಯತ ಕೆಲಸಗಳನ್ನು ಸಂಪಾದಿಸಿಕೊಳ್ಳುತ್ತಾನೆ.
  • ಸಾಮಾನ್ಯವಾಗಿ ಯಾರೂ ಗಮನಿಸದ ಯಾ ಪರಿಗಣಿಸದ: in some odd corner ಯಾರೂ ಗಮನಿಸದ ಒಂದು ಮೂಲೆಯಲ್ಲಿ. picks up odd bargains ಎಲ್ಲೋ ಮೂಲೆಯಲ್ಲಿರುವ ಅಗ್ಗದ ಸರಕನ್ನು ಕೊಳ್ಳುತ್ತಾನೆ.
  • ಬಿಡುವಿನ; ಕೆಲಸವಿಲ್ಲದ: odd moments ಬಿಡುವಿನ, ಕ್ಷಣಗಳು, ಕಾಲ.
  • ಊಹಿಸಲಾಗದ; ನೆಚ್ಚಿಕೆಯಿಲ್ಲದ; ಅನಿಶ್ಚಿತ.
  • ಹೆಚ್ಚಿಗೆಯ; ಅಧಿಕ; ಲೆಕ್ಕಕ್ಕಿಂತ ಹೆಚ್ಚಿನ: swept up the odd bits left on the floor ನೆಲದ ಮೇಲೆ ಉಳಿದಿದ್ದ ಹೆಚ್ಚಿನ ಚೂರುಗಳನ್ನು ಗುಡಿಸಿ ಎತ್ತಿಕೊಂಡ. earned the odd rupee ಮಾಮೂಲಿಗಿಂತ ಹೆಚ್ಚಿನ ರೂಪಾಯಿಯನ್ನು ಗಳಿಸಿದ.
    1. (3, 5 ಮೊದಲಾದವುಗಳಂಥ ಸಂಖ್ಯೆಗಳ ವಿಷಯದಲ್ಲಿ) ಬೆಸ; ವಿಷಮ; ಮಿಗಿಲು; ಎರಡು ಸಮ ಸಂಖ್ಯೆಯ ಗುಂಪಾಗಿ ವಿಭಾಗಿಸಿದ ಮೇಲೆ ಉಳಿದ ಯಾ ಎರಡರಿಂದ ನಿಶ್ಶೇಷವಾಗಿ ಭಾಗವಾಗದ.
    2. (ಅನುಕ್ರಮವಾಗಿ ಎಣಿಕೆ ಮಾಡುವಂತೆ ಜೋಡಿಸಿರುವ ವಸ್ತುಗಳಲ್ಲಿ ಯಾ ವ್ಯಕ್ತಿಗಳಲ್ಲಿ) ಬೆಸ ಸಂಖ್ಯೆಯ; ವಿಷಮ ಅಂಕೆಯ: no parking on odd dates ಬೆಸಸಂಖ್ಯೆಯ ದಿನಗಳಲ್ಲಿ ವಾಹನಗಳ ನಿಲುಗಡೆ ಇಲ್ಲ.
  • (ಇತರ ಎಲ್ಲವನ್ನೂ ವಿತರಣೆ ಮಾಡಿದ ನಂತರ ಇಲ್ಲವೆ ಜೋಡಿಗಳಾಗಿ ವಿಭಾಗಿಸಿದ ನಂತರದ) ಶೇಷ; ಉಳಿಕೆಯ; ಉಳಿದ: have got an odd sock ಒಂದು ಕಾಲುಚೀಲ ಉಳಿದಿದೆ.
  • (ನಿಯತ ಕಾಲಿಕೆಗಳು, ಗ್ರಂಥಮಾಲೆ, ಮೊದಲಾದವುಗಳ ವಿಷಯದಲ್ಲಿ) ಬಿಡಿ; ಕ್ರಮವಿಲ್ಲದ; ಸಂಬಂಧವಿಲ್ಲದ; ಒಂದು ಶ್ರೇಣಿ ಯಾ ಒಂದು ವರ್ಗದಿಂದ ಬೇರೆಯಾಗಿರುವ: a few odd volumes ಕೆಲವು ಬಿಡಿ ಸಂಪುಟಗಳು. odd numbers (ಶ್ರೇಣಿಗೆ ಕ್ರಮ ಬದ್ಧವಾಗಿ ಸೇರದ) ಬಿಡಿ ಸಂಚಿಕೆಗಳು.
  • (ಸಂಖ್ಯೆ, ಮೊತ್ತ, ತೂಕ, ಮೊದಲಾದವುಗಳ ಸೂಚ್ಯ ಪದಕ್ಕೆ ಸೇರಿಸಿದಾಗ) -ಕ್ಕಿಂತ ಸ್ವಲ್ಪ ಹೆಚ್ಚಿನ; ಅಧಿಕ ಚಿಲ್ಲರೆಯ: forty odd ನಲವತ್ತೂ ಚಿಲ್ಲರೆ; ನಲವತ್ತರ ಮೇಲೆ ಐವತ್ತರೊಳಗೆ. sixty thousand odd ಅರುವತ್ತು ಸಾವಿರ ಮತ್ತು ಕೆಲವು ನೂರುಗಳು, ಹತ್ತುಗಳು ಯಾ ಬಿಡಿಗಳು. sixty odd thousand ಅರುವತ್ತು ಚಿಲ್ಲರೆ ಸಾವಿರ; ಅರುವತ್ತು ಸಾವಿರದ ಮೇಲೆ ಎಪ್ಪತ್ತು ಸಾವಿರದ ಒಳಗೆ. forty-odd people ನಲವತ್ತು ಚಿಲ್ಲರೆ ಜನಗಳು; ನಲವತ್ತಕ್ಕಿಂತ ಹೆಚ್ಚು, ಐವತ್ತಕ್ಕಿಂತ ಕಡಮೆ ಜನ.
  • ಹೆಚ್ಚಳ; ಉಳಿಕೆ; ಮೇಲಿನ ಚಿಲ್ಲರೆಯ; ಪೂರ್ಣ ಸಂಖ್ಯೆಗಿಂತ ಯಾ ಹೆಸರಿಸಿದ ಮೊಬಲಗಿಗಿಂತ ಎಷ್ಟು ಹೆಚ್ಚೋ ಅಷ್ಟರ: here is a ten-rupee note; pay the bill and keep the odd money ಇಗೋ ಈ ಹತ್ತು ರೂಪಾಯಿನ ನೋಟು ತೆಗೆದುಕೊ; ಬಿಲ್ಲನ್ನು ಪಾವತಿ ಮಾಡಿ ಉಳಿಕೆಯನ್ನು, ಹೆಚ್ಚಿನದನ್ನು, ಚಿಲ್ಲರೆಯನ್ನು ನೀನೇ ಇಟ್ಟುಕೊ. we have 102; what shall we do with the odd 2? ನಮ್ಮ ಹತ್ತಿರ 102 ಇದೆ. ಈ ಚಿಲ್ಲರೆ ಎರಡನ್ನು ಏನು ಮಾಡೋಣ?

  • odd
    ನಾಮವಾಚಕ
  • (ಗಾಲ್‍) ಹೆಚ್ಚಿನ ಪಟ್ಟು ಯಾ ವರಿಸೆ; ಎದುರಾಳಿಯು ಗಳಿಸುದುದಕ್ಕಿಂತ ಹೆಚ್ಚಾದ ಒಂದು ಹೊಡೆತ.
  • (ಪ್ರತಿ ಗುಳಿಗೂ ಕೊಡುವ) ಹೆಚ್ಚಿನ ಹೊಡೆತ(ದ ಸೌಲಭ್ಯ).
  • = odds.

  • odd job
    ನಾಮವಾಚಕ
    ಚಿಲ್ಲರೆ ಕೆಲಸ; ಅನಿಯತವಾದ, ಯಾವಾಗಲೋ ಒಮ್ಮೊಮ್ಮೆ ದೊರಕುವ ಕೆಲಸ.

    odd job man
    ನಾಮವಾಚಕ
    = odd jobber.

    odd jobber
    ನಾಮವಾಚಕ
    ಚಿಲ್ಲರೆ ಕೆಲಸಗಾರ; ಅನಿಯತವಾಗಿ ಯಾವಾಗಲೋ ಒಮ್ಮೊಮ್ಮೆ ಸಿಕ್ಕುವ ಕೆಲಸ ಮಾಡುವವ.

    oddball
    ನಾಮವಾಚಕ
    (ಆಡುಮಾತು)
  • ವಿಚಿತ್ರ ಯಾ ವಿಲಕ್ಷಣ ವ್ಯಕ್ತಿ; ವಕ್ರ.
  • (ವಿಶೇಷಣವಾಗಿ) ವಿಚಿತ್ರವಾದ; ವಿಕಟ; ವಿಲಕ್ಷಣ.

  • Oddfellow
    ನಾಮವಾಚಕ
    ಅಡ್‍ಹೆಲೋ; ಹ್ರೀಮೆಸನ್‍ ಸಂಘವನ್ನು ಹೋಲುವ ಆಡ್‍ ಹೆಲೋಸ್‍ ಎಂಬ ಮಿತ್ರಮಂಡಲಿಯ ಸದಸ್ಯ.

    oddish
    ಗುಣವಾಚಕ
    ಸ್ವಲ್ಪ ವಕ್ರ; ತುಸು ವಿಚಿತ್ರ ರೀತಿಯ.

    oddity
    ನಾಮವಾಚಕ
    (ಬಹುವಚನ oddities)
  • ವಿಚಿತ್ರ–ವ್ಯಕ್ತಿ, ಪುರುಷ, ವಸ್ತು, ವಿಷಯ, ಘಟನೆ, ಸಂಗತಿ.
  • ವಿಚಿತ್ರ–ಲಕ್ಷಣ, ಗುಣ, ಸ್ವಭಾವ.
  • ವೈಚಿತ್ರ್ಯ; ವಿಲಕ್ಷಣತೆ; ವಿಚಿತ್ರತೆ; ವಿಚಿತ್ರವಾದ ಸ್ಥಿತಿ.


  • logo