logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

land-girl
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಬೇಸಾಯಗಾತಿ; ಕೃಷೀವಲೆ; (ಮುಖ್ಯವಾಗಿ ಯುದ್ಧಕಾಲದಲ್ಲಿ) ವ್ಯವಸಾಯದ ಕೆಲಸ ಮಾಡುವ ಹೆಂಗಸು.

land-grabber
ನಾಮವಾಚಕ
ಭೂಹರ; ಜಮೀನು – ಹರ, ಹಾರಿ; ಜಮೀನನ್ನು ಕಬಳಿಸುವವನು:
  • ಮುಖ್ಯವಾಗಿ ಐರ್ಲಂಡಿನಲ್ಲಿ ಉಳುವವನನ್ನು ಒಕ್ಕಲೆಬ್ಬಿಸಿ ಜಮೀನನ್ನು ಆಕ್ರಮಿಸಿದವನು.
  • ಅಕ್ರಮವಾಗಿ ಸರಕಾರಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವವನು.

  • land-grant college
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಭೂಮಾನ್ಯದ ಕಾಲೇಜು; 1862 ಮತ್ತು 1890ರ ಶಾಸನಗಳ ಪ್ರಕಾರ ಭೂಮಿಯನ್ನು ದತ್ತಿಯಾಗಿ ಪಡೆದ ಸರ್ಕಾರಿ ಕಾಲೇಜು.

    land-hunger
    ನಾಮವಾಚಕ
    ಭೂ ದಾಹ; ನೆಲದ ಹಸಿವು; ಜಮೀನು ಸಂಪಾದಿಸುವ ಅತ್ಯಾಶೆ.

    land-hungry
    ಗುಣವಾಚಕ
    ನೆಲದ ಹಸಿವುಳ್ಳ; ಜಮೀನು ಹಸಿವೆಯ; ಭೂದಾಹದ; ಜಮೀನು ಸಂಪಾದಿಸುವ ಅತ್ಯಾಶೆಯುಳ್ಳ.

    land-jobber
    ನಾಮವಾಚಕ
    ಲಾಭಬಡುಕ ಜಮೀನು ವ್ಯಾಪಾರಿ; ಅತಿ ಲಾಭಾಕಾಂಕ್ಷೆಯ ಜಮೀನು ಮಾರಾಟಗಾರ.

    land-law
    ನಾಮವಾಚಕ
    (ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) ಭೂ – ವಿಧಿ(ಗಳು), ಶಾಸನ(ಗಳು), ಕಾಯಿದೆ(ಗಳು), ಕಾನೂನು(ಗಳು).

    land-line
    ನಾಮವಾಚಕ
    ನೆಲಸಂಪರ್ಕ, ಭೂಸಂಪರ್ಕ (–ಸಾಧನ); ನೆಲದ ಮೇಲೆ ಸಮಾಚಾರ ಒಯ್ಯುವ ದೂರಸಂಪರ್ಕ ಸಾಧನ.

    land-locked
    ಗುಣವಾಚಕ
    ಭೂವೇಷ್ಟಿತ; ನೆಲಾವೃತ; (ಬಹುಮಟ್ಟಿಗೆ ಯಾ ಸಂಪೂರ್ಣವಾಗಿ) ನೆಲ ಸುತ್ತುವರಿದ.

    land-lubber
    ನಾಮವಾಚಕ
  • ನೆಲವಾಸಿ; ಭೂವಾಸಿ; ಜೀವಮಾನವನ್ನೆಲ್ಲ ನೆಲದ ಮೇಲೆಯೇ ಕಳೆಯುವವನು.
  • (ನೌಕಾಯಾನ) ನೆಲದ ದಡ್ಡ; ಸಮುದ್ರದ ಯಾ ಹಡಗುಗಳ ವಿಷಯ ಏನೂ ತಿಳಿಯದವನು.


  • logo