logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

imitative
ಗುಣವಾಚಕ
  • ಅನುಕರಿಸುವ; ಅನುಕರಣಶೀಲ; ಯಾವುದೇ ಮಾದರಿಯನ್ನು ಯಾ ಉದಾಹರಣೆಯನ್ನು ಅನುಕರಿಸುವ: man is an imitative being ಮಾನವನ ಅನುಕರಣಶೀಲಜೀವಿ.
  • ಅನುಕರಣದ; ಅನುಕರಣಾತ್ಮಕ.
  • ಕೃತಕ; ನಕಲಿ; ಬನಾವಟಿ; ಖೋಟಾ: imitative jewellery ನಕಲಿ ಒಡವೆಗಳು.

  • imitative arts
    ನಾಮವಾಚಕ
    ಅನುಕರಣ ಕಲೆಗಳು; ಚಿತ್ರಕಲೆ ಮತ್ತು ಶಿಲ್ಪಕಲೆ.

    imitative word
    ನಾಮವಾಚಕ
    ಅನುಕರಣ ಶಬ್ದ:
  • ಯಾವುದೇ ಸ್ವಾಭಾವಿಕ ಶಬ್ದವನ್ನು ಹೋಲುವ ನಾದವುಳ್ಳ ಪದ: fizz.
  • ವರ್ಣಿಸುತ್ತಿರುವ ವಸ್ತು ಯಾ ಕ್ರಿಯೆಯ ಸ್ವರೂಪ ಮೊದಲಾದವಕ್ಕೆ ಹೋಲಿಕೆಯುಳ್ಳದ್ದೆಂದು ಭಾವಿಸಲಾದ ನಾದವಿರುವ ಪದ: blob, jag, jam, jerk.

  • imitatively
    ಕ್ರಿಯಾವಿಶೇಷಣ
  • ಅನುಕರಿಸುವಂತೆ; ಅನುಕರಣದ ರೀತಿಯಲ್ಲಿ.
  • ಅನುಕರಣಾತ್ಮಕವಾಗಿ.
  • ಕೃತಕವಾಗಿ.

  • imitativeness
    ನಾಮವಾಚಕ
    ಅನುಕರಣಶೀಲತೆ; ಅನುಕರಣ ಮಾಡುವ ಗುಣ.

    imitator
    ನಾಮವಾಚಕ
    ಅನುಕರಣಕಾರ; ಅನುಕರ್ತ.

    IMM
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) Institution of Mining and Metallurgy.

    immaculacy
    ನಾಮವಾಚಕ
  • ಪರಿಶುದ್ಧತೆ; ನಿರ್ಮಲತೆ; ನಿಷ್ಕಳಂಕತೆ.
  • ದೋಷರಹಿತತೆ; ನಿರ್ದುಷ್ಟತೆ; ಕುಂದಿಲ್ಲದಿರುವಿಕೆ.
  • ಚೊಕ್ಕತನ; ಶುಭ್ರತೆ; ಸ್ವಚ್ಛತೆ.

  • immaculate
    ಗುಣವಾಚಕ
  • ಪರಿಶುದ್ಧ; ಅನಘ; ನಿರ್ಮಲ; ನಿಷ್ಕಲ್ಮಶ; ನಿಷ್ಕಳಂಕ: an immaculate heart ಪರಿಶುದ್ಧ ಹೃದಯ.
  • (ಸಾಮಾನ್ಯವಾಗಿ ನೇತ್ಯರ್ಥದಲ್ಲಿ ಯಾ ವ್ಯಂಗ್ಯವಾಗಿ) ಕುಂದಿಲ್ಲದ; ದೋಷರಹಿತ; ನಿರ್ದುಷ್ಟ: you are not immaculate ನೀನೇನೂ ದೋಷರಹಿತನಲ್ಲ.
  • (ಜೀವವಿಜ್ಞಾನ) (ಬಣ್ಣದ) ಚುಕ್ಕೆಗಳಿಲ್ಲದ; ಕಲೆಗಳಿಲ್ಲದ.
  • ಚೊಕ್ಕ; ಶುಭ್ರ; ಸ್ವಚ್ಛ: an immaculate white suit ಶುಭ್ರವಾದ ಬಿಳಿಯ ಉಡುಪು.

  • Immaculate Conception
    ನಾಮವಾಚಕ
    (ಕನ್ಯೆ ಮೇರಿಯ ವಿಷಯದಲ್ಲಿ) ಪರಿಶುದ್ಧ ಗರ್ಭಧಾರಣೆ; ಮೂಲ ಪಾಪದ ಸೋಂಕಿಲ್ಲದೆ ಮೇರಿಕನ್ಯೆಯು ಗರ್ಭಧರಿಸಿದಳೆಂಬ ನಂಬಿಕೆ.


    logo