logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

effluxion
ನಾಮವಾಚಕ
ಹೊರಸೂಸುವಿಕೆ; ನಿಷ್ಕ್ರಮಣ; ನಿಷ್ಕಾಸ; ಬಹಿರ್ಗಮನ; ಹೊರ ಹರಿಯುವಿಕೆ.

effort
ನಾಮವಾಚಕ
  • ಯತ್ನ; ಪ್ರಯತ್ನ; ಉದ್ಯಮ; ಶ್ರಮ; ಪ್ರಯಾಸ; ತೊಡಕು.
  • (ಬಳಸಿದ, ಪ್ರಯೋಗಿಸಿದ) ಶಕ್ತಿ; ಬಲ.
  • ವಿಶೇಷ ಚಟುವಟಿಕೆಗಳು, ಕಾರ್ಯಾಚರಣೆಗಳು.
  • (ಆಡುಮಾತು) ಸಾಧನೆ; ಏಕಾಗ್ರತೆಯಿಂದ ಯಾ ವಿಶೇಷ ಶ್ರಮವಹಿಸಿ ಪಡೆದದ್ದು, ಸಾಧಿಸಿದ್ದು, ನಿರ್ವಹಿಸಿದ್ದು: that is a pretty good effort ಅದೊಂದು ಬಹಳ ಒಳ್ಳೆಯ ಸಾಧನೆ.

  • effortful
    ಗುಣವಾಚಕ
    ಪ್ರಯಾಸದ; ಶ್ರಮಸಹಿತವಾದ; ಪ್ರಯತ್ನಪೂರ್ಣವಾದ; ಕಷ್ಟಪಟ್ಟು ಸಾಧಿಸಿದ.

    effortless
    ಗುಣವಾಚಕ
  • ಅಪ್ರಯತ್ನದ; ಪ್ರಯತ್ನವಿಲ್ಲದ; ಶ್ರಮಪಡದ; ಪ್ರಯತ್ನ ರಹಿತವಾದ.
  • ಸುಲಭವಾದ; ಸಲೀಸಾದ; ಅನಾಯಾಸವಾದ; ನಿರಾಯಾಸವಾದ; ಪ್ರಯಾಸವಲ್ಲದ; ಶ್ರಮರಹಿತ; ಪ್ರಯತ್ನಪೂರ್ವಕವಲ್ಲದ: she walked with effortless grace ಅವಳು ಪ್ರಯತ್ನಪೂರ್ವಕವಾಗಿರದ ಸೊಬಗಿನಿಂದ ನಡೆದಳು. effortless singing ಅನಾಯಾಸ ಗಾಯನ; ಶ್ರಮವಿಲ್ಲದ ಹಾಡುಗಾರಿಕೆ.
  • (ಪ್ರಾಚೀನ ಪ್ರಯೋಗ) ಪ್ರಯತ್ನ ಮಾಡದ; ಅಪ್ರತ್ತ; ನಿಷ್ಕ್ರಿಯ.

  • effortlessly
    ಕ್ರಿಯಾವಿಶೇಷಣ
    ಅನಾಯಾಸವಾಗಿ; ಸರಾಗವಾಗಿ; ಸಲೀಸಾಗಿ; ಶ್ರಮವಿಲ್ಲದೆ.

    effortlessness
    ನಾಮವಾಚಕ
    ಸುಲಭತೆ; ಅನಾಯಾಸೆ; ನಿರಾಯಾಸ; ಸರಾಗ; ಸಲೀಸು; ಶ್ರಮರಾಹಿತ್ಯ.

    effrontery
    ನಾಮವಾಚಕ
    ನಾಚಿಗೆಟ್ಟ ಧಾಷ್ಟ; ಮಾನಗೆಟ್ಟತನ; ನಾಚಿಕೆಯಿಲ್ಲದ ಉದ್ಧಟತನ; ನಿರ್ಲಜ್ಜ ಔದ್ಧತ್ಯ.

    effulgence
    ನಾಮವಾಚಕ
    ಪ್ರಭೆ; ತೇಜಸ್ಸು; ಕಾಂತಿ; ಉಜ್ಜ್ವಲತೆ; ಪ್ರಕಾಶ.

    effulgent
    ಗುಣವಾಚಕ
    ಹೊಳೆಯುವ; ದೇದೀಪ್ಯಮಾನವಾದ; ಉಜ್ಜ್ವಲವಾದ; ಪ್ರಕಾಶಮಾನವಾದ; ಕಾಂತಿಯುಕ್ತ; ಪ್ರಭಾಪೂರ್ಣ; ತೇಜಃಪೂರ್ಣ.

    effulgently
    ಕ್ರಿಯಾವಿಶೇಷಣ
    ಪ್ರಕಾಶಮಾನವಾಗಿ; ಕಾಂತಿಯುತವಾಗಿ; ಥಳಥಳಿಸುತ್ತ.


    logo