logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calumet
ನಾಮವಾಚಕ
  • (ಉತ್ತರ ಅಮೆರಿಕದ ಇಂಡಿಯನ್ನರ) ರಾಜಿಚಿಲುಮೆ; ಶಾಂತಿಚುಂಗಾಣಿ; ಧಾರ್ಮಿಕ ಸಂದರ್ಭಗಳಲ್ಲಿ ಮುಖ್ಯವಾಗಿ ಶಾಂತಿಸೂಚಕವಾಗಿ, ಮಣ್ಣಿನ ಕುಡಿಕೆಗೆ ತಂಬಾಕು ತುಂಬಿ ಸೇದುವ ಚುಂಗಾಣಿ. Figure: calumet
  • ಶಾಂತಿಸಂಕೇತ; ರಾಜಿ ಸಂಕೇತ.

  • calumniate
    ಸಕರ್ಮಕ ಕ್ರಿಯಾಪದ
    ಹಳಿ; ಮಿಥ್ಯಾಪವಾದ ಹೊರಿಸಿ–ಹೆಸರು ಕೆಡಿಸು, ಕಳಂಕ ಹಚ್ಚು; ಚಾಡಿ ಹೇಳಿ ಅಪನಿಂದೆ ಮಾಡು.

    calumniation
    ನಾಮವಾಚಕ
  • ಹಳಿಯುವಿಕೆ; ಚಾಡಿ ಹೇಳುವಿಕೆ; ಅಪನಿಂದನೆ; ಅಪವಾದ ಹೊರಿಸಿ ಹೆಸರು ಕೆಡಿಸುವಿಕೆ.
  • ನಿಂದೆ; ಅಪವಾದ; ಹೆಸರು ಕೆಡಿಸುವ ಹೇಳಿಕೆ.

  • calumniator
    ನಾಮವಾಚಕ
    ಚಾಡಿಕೋರ; ಪಿಸುಣ; ಹಳಿಯುವವ; (ಅಪ)ನಿಂದಕ; ಚಾಡಿ ಹೇಳಿ ಹೆಸರು ಕೆಡಿಸುವವ.

    calumniatory
    ಗುಣವಾಚಕ
    ಚಾಡಿತನದ; ಹಳಿಯುವಿಕೆಯ; ನಿಂದಾತ್ಮಕ; ಅಪನಿಂದೆಯ; ಅಪವಾದವನ್ನೊಳಗೊಂಡಿರುವ; ಚಾಡಿ ತುಂಬಿದ.

    calumnious
    ಗುಣವಾಚಕ
    =calumniatory.

    calumniously
    ಕ್ರಿಯಾವಿಶೇಷಣ
    ಚಾಡಿಹೇಳುವಂತೆ; ಅಪನಿಂದೆಗೂಡಿ; ಹಳಿಯುವಂತೆ; ನಿಂದಾತ್ಮಕವಾಗಿ.

    calumny
    ನಾಮವಾಚಕ
  • ದ್ವೇಷಪೂರಿತವಾದ ಸುಳ್ಳು; ದುರುದ್ದೇಶದಿಂದ ಮಾಡಿದ ತಪ್ಪು ನಿರೂಪಣೆ.
  • ಸುಳ್ಳು–ಆಪಾದನೆ, ಆರೋಪ; ಮಿಥ್ಯಾಪವಾದ.
  • ಚಾಡಿ; ಅಪನಿಂದೆ.

  • calumny
    ಸಕರ್ಮಕ ಕ್ರಿಯಾಪದ
    ಅಪನಿಂದೆ ಮಾಡು; ಚಾಡಿ ಹೇಳು; ಮಿಥ್ಯಾರೋಪ ಹೊರಿಸು.

    calvados
    ನಾಮವಾಚಕ
    ಸೇಬುಬ್ರಾಂದಿ; ಸೇಬುಹಣ್ಣುಗಳಿಂದ ಬಟ್ಟಿಯಿಳಿಸಿದ ಕಂದುಬಣ್ಣದ ಬ್ರಾಂದಿ.


    logo