logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acaulous
ಗುಣವಾಚಕ
= acaulescent.

Accadian
ನಾಮವಾಚಕ
= 1Akkadian.

Accadian
ಗುಣವಾಚಕ
= 2Akkadian.

accede
ಅಕರ್ಮಕ ಕ್ರಿಯಾಪದ
  • ಅಧಿಕಾರಕ್ಕೆ ಬರು; ಅಧಿಕಾರ ವಹಿಸಿಕೊ: he acceded to the governorship ಆತನು ಗವರ್ನರ್‍ ಪದವಿ ವಹಿಸಿಕೊಂಡನು. acceded to the throne ಸಿಂಹಾಸನಕ್ಕೆ ಬಂದ; ಸಿಂಹಾಸನವನ್ನು ಏರಿದ.
  • ರಾಜನಾಗು; ದೊರೆಯಾಗು: the king acceded in 1918 ಅವನು 1918ರಲ್ಲಿ ರಾಜನಾದ.
  • (ಒಂದು ಪಕ್ಷಕ್ಕೆ) ಸೇರು; ಸೇರಿಕೊ.
  • (ಅಭಿಪ್ರಾಯ, ನೀತಿ, ಮೊದಲಾದವನ್ನು) ಒಪ್ಪು; ಒಪ್ಪಿಕೊ; ಅಂಗೀಕರಿಸು: he acceded to my request ಅವನು ನನ್ನ ಕೋರಿಕೆಗೆ ಒಪ್ಪಿದನು.
  • (ನ್ಯಾಯಶಾಸ್ತ್ರ) (ಒಂದು ಜನಾಂಗ ಯಾ ಭೂಭಾಗವು ರಾಜಕೀಯವಾಗಿ) ಸೇರಿಕೊಳ್ಳು: Kashmir acceded to India ಕಾಶ್ಮೀರವು ಭಾರತಕ್ಕೆ ಸೇರಿಕೊಂಡಿತು.
  • (ವಿಧ್ಯುಕ್ತವಾಗಿ ಕೌಲು, ಕರಾರು, ಒಪ್ಪಂದ, ಮೊದಲಾದವಕ್ಕೆ) ಒಪ್ಪಿಗೆ ಕೊಡು; ಸಮ್ಮತಿಸು.

  • accelerando
    ಕ್ರಿಯಾವಿಶೇಷಣ
    (ಸಂಗೀತ ನಿರ್ದೇಶನವಾಗಿ) ಕ್ರಮೇಣ ದ್ರುತಗೊಳಿಸಿ; ಕ್ರಮೇಣ ಗತಿಯನ್ನು ತೀವ್ರಗೊಳಿಸಿ.

    accelerando
    ನಾಮವಾಚಕ
    (ಸಂಗೀತ) ಕ್ರಮೇಣದ್ರುತಿ; ಕ್ರಮೇಣವಾಗಿ ದ್ರುತಗೊಳಿಸುವಿಕೆ.

    accelerando
    ಗುಣವಾಚಕ
    Italian (ಸಂಗೀತ) ಕ್ರಮೇಣ ದ್ರುತವಾಗುವ, ದ್ರುತಗೊಳ್ಳುವ.

    accelerate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ವೇಗಹೆಚ್ಚಿಸು; ತ್ವರೆಗೊಳಿಸು.
  • (ಬೆಳವಣಿಗೆ, ಪ್ರಗತಿ, ಕೆಲಸ, ಪ್ರಕ್ರಿಯೆ, ಮೊದಲಾದವುಗಳನ್ನು) ಚುರುಕುಗೊಳಿಸು; ತ್ವರಿತಗೊಳಿಸು; ಬೇಗ ಆಗುವಂತೆ ಮಾಡು: the course of lectures was accelerated ಉಪನ್ಯಾಸ ಮಾಲೆಯನ್ನು ತ್ವರಿತಗೊಳಿಸಲಾಯಿತು.
  • (ಭೌತವಿಜ್ಞಾನ) ವೇಗೋತ್ಕರ್ಷಿಸು; ಒಂದು ಕಾಯದ ವೇಗವನ್ನು ಅಧಿಕಗೊಳಿಸು.

  • accelerated
    ಗುಣವಾಚಕ
  • ವೇಗ ಹೆಚ್ಚುತ್ತಾ ಹೋದ.
  • ತ್ವರಿತಗೊಳಿಸಿದ.
  • (ಭೌತವಿಜ್ಞಾನ) ವೇಗೋತ್ಕರ್ಷಕ್ಕೊಳಪಟ್ಟ.

  • accelerating
    ಗುಣವಾಚಕ
  • ವೇಗವರ್ಧಕ; ವೇಗ ಹೆಚ್ಚಿಸುವ.
  • ಚುರುಕುಗೊಳಿಸುವ; ತ್ವರಿತಗೊಳಿಸುವ.
  • (ಭೌತವಿಜ್ಞಾನ) ವೇಗೋತ್ಕರ್ಷಕ; ವೇಗವೃದ್ಧಿಯುಂಟುಮಾಡುವ.


  • logo