logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tantalization
ನಾಮವಾಚಕ
ಪ್ರಲೋಭನೆ; ಆಸೆ ತೋರಿಸಿ–ಪೀಡಿಸುವುದು, ಕಾಡುವುದು, ಗೋಳುಗುಟ್ಟಿಸುವುದು.

tantalize
ಸಕರ್ಮಕ ಕ್ರಿಯಾಪದ
  • ಸಿಕ್ಕದಿರುವುದರ ಆಸೆ ತೋರಿಸಿ–ಪೀಡಿಸು, ಕಾಡು, ಗೋಳುಗುಟ್ಟಿಸು.
  • ಏನನ್ನಾದರೂ ಆಸೆ ತೋರಿಸಿ, ಆಮೇಲೆ ಅದು ಕೈಗೆ ಸಿಕ್ಕದೆ ನುಣುಚಿ ಹೋಗುವಂತೆ ಮಾಡಿ ಗೋಳಾಡಿಸು.

  • tantalizer
    ನಾಮವಾಚಕ
    ಪ್ರಲೋಭಕ; ಆಸೆ ತೋರಿಸಿ ಗೋಳುಗುಟ್ಟಿಸುವವನು.

    tantalizingly
    ಕ್ರಿಯಾವಿಶೇಷಣ
  • ಆಸೆ ತೋರಿಸಿ ಆಮೇಲೆ–ಪೀಡಿಸಿ, ಕಾಡಿಸಿ, ಗೋಳಾಡಿಸಿ.
  • ಆಸೆ ತೋರಿಸಿದ ಮೇಲೆ ಕೈಗೆ ಸಿಕ್ಕದಂತೆ ಮಾಡಿ.

  • tantalum
    ನಾಮವಾಚಕ
    (ರಸಾಯನವಿಜ್ಞಾನ) ಟ್ಯಾಂಟಲಂ; ಗಟ್ಟಿಯಾದ, ಬಿಳಿಯ, ಶಾಖನಿರೋಧಕವೂ ಆಮ್ಲನಿರೋಧಕವೂ ಆದ, ಸ್ವಾಭಾವಿಕವಾಗಿ ಟ್ಯಾಂಟಲೈಟ್‍ ಖನಿಜದಲ್ಲಿ ಸಿಕ್ಕುವ, ಶಸ್ತ್ರಚಿಕಿತ್ಸೆ, ಇಲೆಕ್ಟ್ರಾನಿಕ್‍ ಘಟಕಗಳಲ್ಲಿ ಬಳಸುವ, ಒಂದು ವಿರಳವಾದ ಲೋಹಧಾತು, ಸಂಕೇತ Ta.

    tantalus
    ನಾಮವಾಚಕ
  • (ಮದ್ಯಪಾತ್ರೆಗಳ) ನುಣುಚು ನಿಲವು; ಬಿಡಿಬಿಡಿಯಾಗಿ ತೆಗೆದುಕೊಳ್ಳಬಹುದೆಂದು ತೋರುವ, ಆದರೆ ಕೀಲಿಕೈಯಿಲ್ಲದೆ ತೆಗೆಯಲಾಗದ, ಮದ್ಯಪಾತ್ರೆಗಳ ನಿಲವು, ‘ಸ್ಟ್ಯಾಂಡು’
  • ಮರಕೊಕ್ಕರೆ; (ಕೊಕ್ಕರೆ ಜಾತಿಯ) ಮಿಕ್ಟಿರಿಯ ಅಮೆರಿಕಾನ ಕುಲದ, ಐಬಿಸ್‍ ಹಕ್ಕಿ.

  • tantamount
    ಆಖ್ಯಾತಕ ಗುಣವಾಚಕ
    ಅದಕ್ಕೆ ಸರಿಯಾದ; ಸಮನಾದ; ಅಷ್ಟೇ ಆದ: his message was tantamount to a flat refusal ಅವನು ಕಳುಹಿಸಿದ ಉತ್ತರ ನಿರಾಕರಣೆಯೇ ಆಗಿತ್ತು. the queen’s request was tantamount to a command ರಾಣಿಯ ಬೇಡಿಕೆಯು ಆಜ್ಞೆಗೆ ಸಮನಾಗಿತ್ತು.

    tantivy
    ನಾಮವಾಚಕ ಪದಗುಚ್ಛ
    (ಪ್ರಾಚೀನ ಪ್ರಯೋಗ) the tantivy (ಚರಿತ್ರೆ) 1600–88ರ ಅವಧಿಯ ಇಂಗ್ಲಿಷ್‍ ಹೈಚರ್ಚಿನವನು ಯಾ ಟೋರಿ.
  • ಬೇಟೆಗಾರರ ಕೂಗು.
  • ತ್ವರಿತ ಚಲನೆ; ನಾಗಾಲೋಟ ಯಾ ದೌಡು.

  • tantivy
    ಗುಣವಾಚಕ
    (ಪ್ರಾಚೀನ ಪ್ರಯೋಗ)
  • ವೇಗವಾದ; ತ್ವರಿತ ಚಲನೆಯ.
  • ಟೋರಿಗಳಿಗೆ ಸಂಬಂಧಿಸಿದ.

  • tantra
    ನಾಮವಾಚಕ
    (ಹಿಂದೂಧರ್ಮ) ತಂತ್ರ; ಧಾರ್ಮಿಕ ಪ್ರಕ್ರಿಯೆಗಳು, ಯೋಗಸಾಧನೆ, ತಪಸ್ಸು, ಮೊದಲಾದ ರಹಸ್ಯ ವಿಚಾರಗಳನ್ನು ಕುರಿತ ಹಿಂದೂ ಯಾ ಬೌದ್ಧ ಗ್ರಂಥಗಳು.


    logo