logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oculated
ಗುಣವಾಚಕ
= oculate.

oculist
ನಾಮವಾಚಕ
ನೇತ್ರ–ವೈದ್ಯ ಚಿಕಿತ್ಸಕ, ತಜ್ಞ; ಕಣ್ಣಿನ ಬೇನೆಗಳನ್ನು ಗುಣಪಡಿಸುವುದರಲ್ಲಿ, ದೋಷಗಳನ್ನು ಸರಿಪಡಿಸುವುದರಲ್ಲಿ ನಿಪುಣ.

oculistic
ಗುಣವಾಚಕ
ನೇತ್ರವೈದ್ಯದ; ನೇತ್ರ ಚಿಕಿತ್ಸಕ, ಚಿಕಿತ್ಸೆಯ.

oculo-
ಸಮಾಸ ಪೂರ್ವಪದ
ಕಣ್ಣು, ನೇತ್ರ ಎಂಬರ್ಥದ ಸಮಾಸ ಪೂರ್ವಪದ: oculo-nasal ಕಣ್ಣುಮೂಗಿನ; ನೇತ್ರ ನಾಸಿಕದ; ನೇತ್ರ ನಾಸಿಕೀಯ.

OD
ಸಂಕ್ಷಿಪ್ತ
ordnance datum.

OD
ನಾಮವಾಚಕ
(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಅಶಿಷ್ಟ) (ಮುಖ್ಯವಾಗಿ ಮಾದಕ ವಸ್ತುವಿನ) ಅತಿಯಾದ ಪ್ರಮಾಣ.

OD
ಅಕರ್ಮಕ ಕ್ರಿಯಾಪದ
(ಮುಖ್ಯವಾಗಿ ಮಾದಕ ವಸ್ತುವಿನ) ಅತಿಯಾದ ಪ್ರಮಾಣವನ್ನು ತೆಗೆದುಕೊ, ಸೇವಿಸು.

od
ನಾಮವಾಚಕ
ಆಡ್‍; ನಿಸರ್ಗದಲ್ಲೆಲ್ಲ ವ್ಯಾಪಿಸಿ ಕಾಂತತ್ವ, ಸ್ಫಟಿಕೀಭವನ, ರಾಸಾಯನಿಕ ಕ್ರಿಯೆ, ಸಂಮೋಹನ, ಮೊದಲಾದವುಗಳಿಗೆ ಕಾರಣವಾಗಿದೆಯೆಂದು ಊಹಿಸಲಾಗಿದ್ದ ಒಂದು ಶಕ್ತಿವಿಶೇಷ.

od
ನಾಮವಾಚಕ
( ಭಾವಸೂಚಕ ಅವ್ಯಯವಾಗಿ ಯಾ ಅಣೆ ಇಡುವಲ್ಲಿ) (ಪ್ರಾಚೀನ ಪ್ರಯೋಗ) = God (od rot it ದೇವರು ನಾಶ ಮಾಡಲಿ).

odal
ನಾಮವಾಚಕ
udal ಪದದ ರೂಪಾಂತರ.


logo