logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

land office
ನಾಮವಾಚಕ
(ಅಮೆರಿಕನ್‍ ಪ್ರಯೋಗ) ಭೂಕಚೇರಿ; ಭೂ ನೋಂದಣಿ ಕಚೇರಿ; ಸಾರ್ವಜನಿಕರ ಜಮೀನು ಮೊದಲಾದವುಗಳನ್ನು ನೋಂದಣಿ ಮಾಡುವ ಸರ್ಕಾರಿ ಕಚೇರಿ.

land yacht
ನಾಮವಾಚಕ
ನೆಲದೋಣಿ; ಭೂನಾವೆ; ಸಮುದ್ರತೀರ ಮೊದಲಾದವುಗಳಲ್ಲಿ ವಿಹಾರಕ್ಕಾಗಿ ಬಳಸುವ, ಗಾಲಿಗಳೂ ಹಾಯಿಪಟಗಳೂ ಇರುವ ವಾಹನ, ಓಡುದೋಣಿ.

Land's End
ನಾಮವಾಚಕ
ಲ್ಯಾಂಡ್ಸ್‍ ಎಂಡ್‍; ಇಂಗ್ಲೆಂಡಿನ ಕಾರ್ನ್‍ವಾಲ್‍ ಪ್ರದೇಶದ ಪಶ್ಚಿಮದ ತುದಿ.

land-agency
ನಾಮವಾಚಕ
  • (ಯಜಮಾನ ನೇಮಿಸಿರುವ) ಜಮೀನು – ವಹಿವಾಟು, ಮೇಲ್ವಿಚಾರಣೆ.
  • ಭೂಮಿಕಾಣಿ ಏಜೆನ್ಸಿ; ಭೂಸ್ವತ್ತು ಮೊದಲಾದವುಗಳ ಮಾರಾಟ, ವಹಿವಾಟು ನಡೆಸುವ ಸಂಸ್ಥೆ.

  • land-agent
    ನಾಮವಾಚಕ
  • (ಯಜಮಾನನು ನೇಮಿಸಿರುವ) ಜಮೀನುಗಳ ಮೇಲ್ವಿಚಾರಕ.
  • ಜಮೀನು ಏಜೆಂಟು; ಭೂಮಿ ಏಜೆಂಟು; ಭೂಸ್ವತ್ತು ಮಾರಾಟ ಮೊದಲಾದವುಗಳ ಏಜೆಂಟು, ವಹಿವಾಟುದಾರ.

  • land-bank
    ನಾಮವಾಚಕ
    ಭೂ ಬ್ಯಾಂಕು; ಜಮೀನು ಆಧಾರದ ಬ್ಯಾಂಕು; ಅಡಮಾನ ಬ್ಯಾಂಕು; ಜಮೀನಿನ ಆಧಾರದ ಮೇಲೆ ಅದರ ವೆಚ್ಚಗಳಿಗೆ ಹಣ ಒದಗಿಸುವ ಬ್ಯಾಂಕು.

    land-bridge
    ನಾಮವಾಚಕ
    ನೆಲಸೇತುವೆ; ಭೂಸೇತುವೆ; ಎರಡು ಭಾರಿ ಭೂಪ್ರದೇಶಗಳನ್ನು ಕೂಡಿಸುವ ಕಿರಿದಾದ ಭೂಭಾಗ.

    land-carriage
    ನಾಮವಾಚಕ
    ನೆಲಸಾರಿಗೆ; ಭೂಸಾಗಣೆ; ಭೂಮಾರ್ಗವಾಗಿ ಸಾಮಾನು ಮೊದಲಾದವುಗಳ ಸಾಗಾಣಿಕೆ.

    land-crab
    ನಾಮವಾಚಕ
    ನೆಲನಳ್ಳಿ; ಕಾರ್ಡಿಸೋಮ ಗ್ವಾನ್‍ಹ್ಯೂಮಿ ಕುಲದ, ಭೂಮಿಯ ಬಿಲಗಳಲ್ಲಿ ವಾಸಿಸುವ ಮತ್ತು ಸಂತಾನೋತ್ಪತ್ತಿಗಾಗಿ ಅಧಿಕ ಸಂಖ್ಯೆಯಲ್ಲಿ ಸಮುದ್ರಕ್ಕೆ ವಲಸೆ ಹೋಗುವ ನಳ್ಳಿ ಯಾ ಏಡಿ.

    land-form
    ನಾಮವಾಚಕ
    ಭೂರೂಪ; ಭೂಮಿಯ ಮೇಲ್ಮೈಯ ಸಹಜ ಲಕ್ಷಣ.


    logo