(ತನ್ನ ಕೈ, ಕತ್ತಿ, ಮೊದಲಾದವನ್ನು ರಕ್ತದಿಂದ, ಕೊಲೆಯಿಂದ) ಕಲೆಗೊಳಿಸು; ಕಳಂಕಗೊಳಿಸು; ಕಲುಷಿತಗೊಳಿಸು; ಕಳಂಕಿತ ಮಾಡು: these hands in murder are imbrued ಈ ಕೈಗಳು ಕೊಲೆಯಿಂದ ಕಳಂಕಿತವಾಗಿವೆ.
ತೋಯಿಸು; ನೆನಸು; ಸಿಕ್ತಗೊಳಿಸು: a nation imbrued with the blood of executed men ಗಲ್ಲಿಗೇರಿಸಲ್ಪಟ್ಟ ಜನರ ರಕ್ತದಿಂದ ತೊಯ್ದುಹೋದ ರಾಷ್ಟ್ರ.
imbrute
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪಾಶವೀಕರಿಸು; ಮೃಗವಾಗಿಸು; ಪಶುಪ್ರಾಯ ಮಾಡು; ಪಶುವಿನ ಮಟ್ಟಕ್ಕೆ ಇಳಿಸು: to indulge his love of pleasure so as to imbrute himself ತನ್ನನ್ನು ಪಶುವಿನ ಮಟ್ಟಕ್ಕೆ ಇಳಿಸಿಕೊಳ್ಳುವಷ್ಟು ಭೋಗಾಸಕ್ತಿಯಲ್ಲಿ ತಲ್ಲೀನನಾಗು. ಪಶುಪ್ರಾಯವಾಗು.
imbue
ಸಕರ್ಮಕ ಕ್ರಿಯಾಪದ
ಊರಿಸು; ಪರ್ಯಾಪ್ತಗೊಳಿಸು; ಪೂರ್ತಿ ನೆನಸು; ಪೂರ್ತಿ ವ್ಯಾಪನಗೊಳಿಸು.
ಬಣ್ಣ ಹಾಕು; ಬಣ್ಣಕಟ್ಟು; ರಂಗು ಹತ್ತಿಸು.
(ಭಾವನೆ ಮೊದಲಾದವುಗಳಿಂದ) ತುಂಬು; ವ್ಯಾಪಿಸು: imbued with national pride ಆಳವಾದ ರಾಷ್ಟ್ರೀಯ ಅಭಿಮಾನದಿಂದ ತುಂಬಿದ.