logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

efficiently
ಕ್ರಿಯಾವಿಶೇಷಣ
  • ಕಾರ್ಯಕಾರಿಯಾಗಿ; ಫಲದಾಯಕವಾಗಿ.
  • ದಕ್ಷತೆಯಿಂದ; ಸಮರ್ಥವಾಗಿ; ಕಾರ್ಯಪಟುತ್ವದಿಂದ.

  • effigy
    ನಾಮವಾಚಕ ಪದಗುಚ್ಛ
    ಬೊಂಬೆ; ಭಾವಚಿತ್ರ; ಪ್ರತಿಮೆ; ವಿಗ್ರಹ; ಪ್ರತಿತಿ. hang (or burn) a person in effigy ಒಬ್ಬನ ಪ್ರತಿಮೆಯನ್ನು ನೇಣುಹಾಕು (ಯಾ ಸುಡು).

    effloresce
    ಅಕರ್ಮಕ ಕ್ರಿಯಾಪದ
  • (ರೂಪಕವಾಗಿ ಸಹ) ಹೂವಾಗು; ಹೂವರಳು; ಹೂಬಿರಿ; ಹೂಬಿಡು; ಪುಷ್ಪಿಸು.
  • (ರಸಾಯನವಿಜ್ಞಾನ) (ನೀರಿನ ಅಣುಗಳೊಂದಿಗೆ ಸ್ಪಟಿಕೀಕರಿಸಿರುವ ಲವಣಗಳ ವಿಷಯದಲ್ಲಿ) ಸ್ಫುಟಿಸು; ಅರಳು; ನೀರನ್ನು ಕಳೆದುಕೊಂಡು ಪುಡಿಯಾಗು.
  • (ರಸಾಯನವಿಜ್ಞಾನ) (ಲವಣಗಳ ವಿಷಯದಲ್ಲಿ) ಸ್ಫುಟಿಸು; ಮೇಲ್ಮೈಗೆ ಬಂದು ಸ್ಫಟಿಕೀಕರಿಸು, ಹರಳಾಗು.
  • (ನೆಲ, ಗೋಡೆಗಳ ವಿಷಯದಲ್ಲಿ) ಹರಳುಗಟ್ಟು; ಉಪ್ಪುಗಟ್ಟು; ಉಪ್ಪಿನ ಕಣಗಳಿಂದ ಮುಚ್ಚಿಕೊ.

  • efflorescence
    ನಾಮವಾಚಕ
  • (ರೂಪಕವಾಗಿ ಸಹ) ಹೂವಾಗುವಿಕೆ; ಹೂಬಿಡುವಿಕೆ; ಪುಷ್ಪವಿಕಸನ: the efflorescence of his mature genius ಅವನ ಪಕ್ವ ಪ್ರತಿಭೆಯ ವಿಕಸನ.
  • (ರೂಪಕವಾಗಿ ಸಹ) ಹೂಗಾಲ; ಪುಷ್ಪಕಾಲ; ಹೂಬಿಡುವ ಅವಧಿ; ಪುಷ್ಪವಿಕಸನ ಸಮಯ.
  • (ನೀರಿನ ಅಣುಗಳೊಂದಿಗೆ ಸ್ಫಟಿಕೀಕರಿಸಿರುವ ಲವಣಗಳ ವಿಷಯದಲ್ಲಿ) ಸ್ಫುಟನ; ಅರಳುವಿಕೆ; ವಿಕಸನ; ನೀರನ್ನು ಕಳೆದುಕೊಂಡು ಪುಡಿಯಾಗುವುದು.
  • (ರಸಾಯನವಿಜ್ಞಾನ) (ಲವಣಗಳ ವಿಷಯದಲ್ಲಿ) ಸ್ಫುಟನ; ಮೇಲ್ಮೈಗೆ ಬಂದು ಸ್ಫಟಿಕೀಕರಿಸುವುದು, ಹರಳಾಗುವುದು.
  • (ನೆಲ, ಗೋಡೆಗಳ ವಿಷಯದಲ್ಲಿ) ಹರಳುಗಟ್ಟಿಕೆ; ಉಪ್ಪುಗಟ್ಟಿಕೆ; ಉಪ್ಪಿನ ಕಣಗಳಿಂದ ಮುಚ್ಚಿಕೊಳ್ಳುವಿಕೆ.
  • (ರಸಾಯನವಿಜ್ಞಾನ) ಸ್ಫುಟನದಿಂದ ಉಂಟಾದ ಪುಡಿ ಯಾ ಹರಳುಗಟ್ಟುವಿಕೆ.

  • efflorescent
    ಗುಣವಾಚಕ
  • ಹೂಬಿಡುವಂಥ; ಅರಳುವಂಥ; ಬಿರಿಯುವಂಥ.
  • (ರಸಾಯನವಿಜ್ಞಾನ) (ನೀರಿರುವ ಲವಣಗಳ ವಿಷಯದಲ್ಲಿ) ಸ್ಫುಟಿಸುವ; ಅರಳುವ; ನೀರನ್ನು ಕಳೆದುಕೊಂಡು ಪುಡಿಯಾಗುವ.
  • (ರಸಾಯನವಿಜ್ಞಾನ) ಸ್ಫುಟಿಸುವ; (ಲವಣಗಳ ವಿಷಯದಲ್ಲಿ) ಮೇಲ್ಮೈಗೆ ಬಂದು ಹರಳಾಗುವ.
  • (ನೆಲ, ಗೋಡೆಗಳ ವಿಷಯದಲ್ಲಿ) ಹರಳುಗಟ್ಟುವ; ಉಪ್ಪುಗಟ್ಟುವ; ಉಪ್ಪಿನ ಕಣಗಳಿಂದ ಮುಚ್ಚಿಕೊಳ್ಳುವ.

  • effluence
    ನಾಮವಾಚಕ
  • (ರೂಪಕವಾಗಿ ಸಹ) (ಬೆಳಕು, ವಿದ್ಯುತ್ತು, ಮೊದಲಾದವುಗಳ) ಹೊರಸೂಸಿಕೆ; ನಿಷ್ಕಾಸ; ನಿಷ್ಕ್ರಮಣ; ಬಹಿರ್ಗಮನ; ಹೊರಹೊಮ್ಮಿಕೆ.
  • ಸೂಸಲು; ಪ್ರವಾಹ; ಹೊರಸೂಸಿ ಬಂದುದು; ಹೊರಹೊಮ್ಮಿದುದು.

  • effluent
    ಗುಣವಾಚಕ
    ಹೊರಸೂಸುವ; ಹೊರಹರಿಯುವ; ನಿಷ್ಕ್ರಮಿಸುವ; ಹೊರ ಪ್ರವಹಿಸುವ; ಹೊರಹೊಮ್ಮುವ; ಬಹಿರ್ಗಮಿಸುವ.

    effluent
    ನಾಮವಾಚಕ
    (ದೊಡ್ಡಹೊಳೆ, ಸರೋವರ, ರೊಚ್ಚುನೀರಿನ ಕಟ್ಟೆ, ಮೊದಲಾದವುಗಳಿಂದ ಹರಿಯುವ) ಹಳ್ಳ; ಹೊಳೆ; ಪ್ರವಾಹ; ಹರಿವು.

    effluvium
    ನಾಮವಾಚಕ
  • (ಶ್ವಾಸಕೋಶಗಳಿಗೂ ಘ್ರಾಣೇಂದ್ರಿಯಕ್ಕೂ ಕೆಡಕು ಮಾಡುವ) ದುರ್ಗಂಧದ ಹಬೆ; ದುರ್ಗಂಧ; ನಾತ.
  • ಅಯಸ್ಕಾಂತ ಮೊದಲಾದವುಗಳಿಂದ ಹೊರಬರುವುದೆಂದು ನಂಬಲಾಗಿದ್ದ ಸೂಕ್ಷ್ಮಕಣಗಳು.

  • efflux
    ನಾಮವಾಚಕ
  • (ರೂಪಕವಾಗಿ ಸಹ) (ದ್ರವ, ಅನಿಲಗಳ) ಹೊರಸೂಸಿಕೆ; ನಿಷ್ಕಾಸ; ನಿಷ್ಕ್ರಮಣ.
  • ಹೊರಸೂಸಿದ್ದು; ಬಹಿಃಪ್ರವಾಹ.


  • logo