ಹಕ್ಕಿಜುಟ್ಟು; ಪಕ್ಷಿಶಿಖೆ; ಹಕ್ಕಿಯ ತಲೆಯ ಮೇಲೆ ಟೋಪಿಯಿಂದ ಕಾಣುವ ಶಿಖೆ.
(ವಾಸ್ತುಶಿಲ್ಪ)
ಗುಮ್ಮಟದ ನೆತ್ತಿ.
ಸಣ್ಣ ಗುಮ್ಮಟ.
ಜೋಡಿಗುಮ್ಮಟದ ಒಳಗುಮ್ಮಟ.
calque
ನಾಮವಾಚಕ
(ಭಾಷಾಶಾಸ್ತ್ರ) ಅನುವಾದಿತ ಸ್ವೀಕೃತಪದ; ಇನ್ನೊಂದು ಭಾಷೆಯಿಂದ ಅಕ್ಷರಶಃ ಭಾಷಾಂತರ ಮಾಡಿ ತೆಗೆದುಕೊಂಡ ಎರವಲು ಪದ: gospel ಸುವಾರ್ತೆ. warm feeling ಬೆಚ್ಚನೆಯ ಭಾವ.
Caltech
ನಾಮವಾಚಕ
(ಅಮೆರಿಕನ್ ಪ್ರಯೋಗ) California Institute of Technology ಎನ್ನುವುದರ ಸಂಕ್ಷಿಪ್ತ.
caltrap
ನಾಮವಾಚಕ
=caltrop.
caltrop
ನಾಮವಾಚಕ
(ಚರಿತ್ರೆ) ನಾಲ್ದಸಿ ಗುಂಡು; ನಾಲ್ಮೊಳೆಗುಂಡು; ಕುದುರೆ ಗೊರಸಿಗೆ ಚುಚ್ಚಿಕೊಂಡು ಗಾಯಗೊಳಿಸಲು ನಾಲ್ಕು ಕಡೆ ಮೊಳೆಗಳನ್ನು ಜೋಡಿಸಿದ, ಶತ್ರುಗಳ ಅಶ್ವದಳದ ಮುನ್ನಡೆಯನ್ನು ತಡೆಯಲು ನೆಲದ ಮೇಲೆ ಹಾಕಿರುವ, ಮುಳ್ಳುಗುಂಡು.
(ವಂಶಲಾಂಛನ ವಿದ್ಯೆ) ನಾಲ್ದಸಿಗುಂಡು; ಈ ಗುರುತಿನ ಲಾಂಛನ.
(ಸಸ್ಯವಿಜ್ಞಾನ) ಸಣ್ಣನೆಗ್ಗಿಲು; ಪಾದಗಳಿಗೆ ಚುಚ್ಚುವ ಯಾ ಸಿಕ್ಕಿಕೊಳ್ಳುವ ಮುಳ್ಳುಗಳಿರುವ, ಮುಳ್ಳು ಗುಂಡಿನಂಥ ಹೂಗೊಂಡೆ ಯಾ ಹಣ್ಣುಗಳನ್ನು ಬಿಡುವ ಒಂದು ಗಿಡ.