logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

baldric
ನಾಮವಾಚಕ
(ಚರಿತ್ರೆ) (ಕತ್ತಿ, ತುತ್ತೂರಿ, ಮೊದಲಾದವನ್ನು ತೂಗಹಾಕಲು ಬಳಸುವ) ಅಡ್ಡಬೆಲ್ಟು; ಡವಾಲಿ; ಅಡ್ಡ ಎದೆಪಟ್ಟಿ.

baldric-wise
ಕ್ರಿಯಾವಿಶೇಷಣ
ಅಡ್ಡಬೆಲ್ಟಿನಂತೆ; ಎದೆಪಟ್ಟಿಯಂತೆ.

bale
ನಾಮವಾಚಕ
(ಪ್ರಾಚೀನ ಪ್ರಯೋಗ ಮತ್ತು ಕಾವ್ಯಪ್ರಯೋಗ)
  • ಕೆಡುಕು; ಕೇಡು; ಅನಿಷ್ಟ; ಅಶುಭ; ಅಮಂಗಳ.
  • ನಾಶ; ವಿನಾಶ; ಹಾಳು; ಆಪತ್ತು; ವಿಪತ್ತು.
  • ಬೇಗುದಿ; ಸಂಕಟ; ದುಃಖ; ಯಾತನೆ; ವೇದನೆ; ವ್ಯಥೆ; ಶೋಕ.

  • bale
    ನಾಮವಾಚಕ
  • (ಕ್ಯಾನ್ವಸ್‍ ಮೊದಲಾದವುಗಳಲ್ಲಿ ಹಗ್ಗ ಮೊದಲಾದವುಗಳಿಂದ ಕಟ್ಟಿದ ಸರಕು ಯಾ ಸಾಮಾನುಗಳ) ಪಿಂಡಿ; ಮೂಡೆ; ಮೂಟೆ; ಬೇಲು; ಅಂಡಿಗೆ.
  • (ಅಳತೆಯಾಗಿ) ಬೇಲು; ಒಂದು ಪಿಂಡಿ ಯಾ ಬೇಲಿನಲ್ಲಿರುವಷ್ಟು; ಬೇಲಿನಲ್ಲಿರುವ ಪ್ರಮಾಣ (ಉದಾಹರಣೆಗೆ ಅಮೆರಿಕದಲ್ಲಿ ಹತ್ತಿಯ ಒಂದು ಬೇಲ್‍ = 500 ಪೌಂಡ್‍ ಹತ್ತಿ).

  • bale
    ಕ್ರಿಯಾಪದ
    = 6bail.

    bale
    ಸಕರ್ಮಕ ಕ್ರಿಯಾಪದ
    ಮೂಟೆಕಟ್ಟು; ಪಿಂಡಿ ಮಾಡು.

    baleen
    ನಾಮವಾಚಕ
    (ಪ್ರಾಣಿವಿಜ್ಞಾನ) ಬಲೀನ್‍; ತಿಮಿಯೆಲುಬು; ಕೆಲವು ತಿಮಿಂಗಿಲಗಳ ಮೇಲ್ದವಡೆಯಲ್ಲಿ ಹಲ್ಲುಗಳ ಜಾಗದಲ್ಲಿ ಬೆಳೆಯುವ ಮೆತುವಾದ ಚಕ್ಕೆಯಂಥ ಪದಾರ್ಥ.

    baleen
    ಗುಣವಾಚಕ
    (ಪ್ರಾಣಿವಿಜ್ಞಾನ) ತಿಮಿಯೆಲುಬಿನ.

    baleen whale
    ನಾಮವಾಚಕ
    ಬಲೀನ್‍ ತಿಮಿಂಗಿಲ; ಬಲೀನನ್ನು ಕೊಡುವ ತಿಮಿಂಗಿಲ.

    balefire
    ನಾಮವಾಚಕ
  • ಬಯಲುಬೆಂಕಿ; ಕೊಂಡ; ಹೇರುರಿ; ಹೆಬ್ಬೆಂಕಿ.
  • (ಸಾಹಿತ್ಯ ಪ್ರಯೋಗ) ಚಿತೆ; ಚಿತಾಗ್ನಿ.
  • ಸುದ್ದಿಬೆಂಕಿ; ಸಂಕೇತಾಗ್ನಿ.
  • ಉತ್ಸವಾಗ್ನಿ; ಜಯದ ಬೆಂಕಿ; ಸಂತೋಷ ಸೂಚಕ ಬೆಂಕಿ.


  • logo