(ಬ್ರಿಟಿಷ್ ಪ್ರಯೋಗ) Advisory, Conciliation, and Arbitration Service.
acatalectic
ನಾಮವಾಚಕ
(ಛಂದಸ್ಸು) ಪೂರ್ಣಪಾದ; ಅನ್ಯೂನಪಾದ.
acatalectic
ಗುಣವಾಚಕ
(ಛಂದಸ್ಸು) ಅನ್ಯೂನಪಾದದ; ಒಂದು ಮಾತ್ರೆಯೂ ಲೋಪವಿಲ್ಲದ ಪಾದದ.
acatalepsy
ನಾಮವಾಚಕ
(ತರ್ಕಶಾಸ್ತ್ರ) (ವಸ್ತುಗಳ ವಿಷಯದಲ್ಲಿ) ಅಜ್ಞೇಯತೆ; ವಸ್ತುಗಳ ಅರಿಯಲಾಗದ ಗುಣ, ಲಕ್ಷಣ.
acataleptic
ಗುಣವಾಚಕ
(ತರ್ಕಶಾಸ್ತ್ರ) ಅಜ್ಞೇಯತೆಯ; ಅಜ್ಞೇಯತೆಗೆ ಸಂಬಂಧಪಟ್ಟ.
ನಿಷ್ಕೃಷ್ಟವಾಗಿ ಅರಿಯಲಾಗದ.
acataleptic
ನಾಮವಾಚಕ
(ತರ್ಕಶಾಸ್ತ್ರ) ಅಜ್ಞೇಯತ್ವವಾದಿ; ನಿಷ್ಕೃಷ್ಟವಾಗಿ ಯಾವುದನ್ನೇ ಅರಿಯಲು ಸಾಧ್ಯವಿಲ್ಲ ಎಂಬ ನಂಬಿಕೆಯಿಂದ ಯಾವುದರ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲು ತತ್ತ್ವಶಃ ನಿರಾಕರಿಸುವ ವ್ಯಕ್ತಿ.
acaulescent
ಗುಣವಾಚಕ
(ಸಸ್ಯವಿಜ್ಞಾನ) ಅಸ್ಪಷ್ಟಕಾಂಡದ; ತಾಳು ಸ್ಪಷ್ಟವಾಗಿ ಕಾಣಿಸದ.