logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unburden
ಸಕರ್ಮಕ ಕ್ರಿಯಾಪದ
  • ಹೊರೆಯಿಳಿಸು; ಭಾರವಿಳಿಸು.
  • (ಆತ್ಮಾರ್ಥಕ) (ಒಪ್ಪಿಕೊಳ್ಳುವುದು, ಹೇಳಿಕೊಳ್ಳುವುದು, ಮೊದಲಾದವುಗಳ ಮೂಲಕ) ಹೃದಯದ ಭಾರಯಿಳಿಸಿಕೊ; ಮನಸ್ಸು ಹಗುರ ಮಾಡಿಕೊ: unburden oneself of a secret ಬಚ್ಚಿಟ್ಟ ಗುಟ್ಟನ್ನು ಬಯಲುಮಾಡಿ ಹೃದಯದ ಭಾರಯಿಳಿಸಿಕೊ.

  • unburdened
    ಗುಣವಾಚಕ
    (ಮನಸ್ಸು ಮೊದಲಾದವುಗಳ) ಭಾರವಿಳಿಸಿದ; ಹಗುರಗೊಳಿಸಿದ; ಹೊರೆಯಿಳಿಸಿದ.

    unburied
    ಗುಣವಾಚಕ
    ಹೂಳದ; ಸಮಾಧಿ ಮಾಡದ.

    unbury
    ಸಕರ್ಮಕ ಕ್ರಿಯಾಪದ
  • (ಹೂತ ಮೇಲೆ, ಹೂತಿಟ್ಟದ್ದನ್ನು) ಅಗೆದು ತೆಗೆ; ಭೂಮಿಯಿಂದ ಮೇಲಕ್ಕೆತ್ತು.
  • (ಗುಟ್ಟು ಮೊದಲಾದವನ್ನು) ಬೆಳಕಿಗೆ, ಬಯಲಿಗೆ ತರು; ಹೊರಹಾಕು.

  • unbusinesslike
    ಗುಣವಾಚಕ
    ವ್ಯವಹಾರ ರೀತಿಯಲ್ಲದ; ಅವ್ಯಾವಹಾರಿಕ; ವ್ಯವಹಾರಜ್ಞಾನವಿಲ್ಲದ; ಅದಕ್ಷ.

    unbutton
    ಸಕರ್ಮಕ ಕ್ರಿಯಾಪದ
    1. (ಅಂಗಿ ಮೊದಲಾದವುಗಳ) ಗುಂಡಿ – ಬಿಚ್ಚು, ತೆಗೆ; (ಕಾಜ ಮೊದಲಾದವುಗಳಿಂದ) ಗುಂಡಿ – ಕಳಚು, ತೆಗೆ.
    2. (ವ್ಯಕ್ತಿಯ) ಉಡುಪುಗಳ ಗುಂಡಿ – ಬಿಚ್ಚು, ತೆಗೆ.
  • (ಆಡುಮಾತು)
    1. (ಒತ್ತಡ, ಔಪಚಾರಿಕತೆ, ಮೊದಲಾದವುಗಳಿಂದ) ಬಿಡಿಸು; ಸಡಿಲ ಮಾಡಿಕೊ; ಕಡಿಮೆ ಮಾಡಿಕೊ; ಹೊರಬರು.
    2. ಮನಸ್ಸು ಬಿಚ್ಚಿ ಮಾತನಾಡು.

  • unbuttoned
    ಗುಣವಾಚಕ
  • ಗುಂಡಿ – ಹಾಕದ, ಬಿಚ್ಚಿದ.
  • (ರೂಪಕವಾಗಿ) (ಆಡುಮಾತು)
    1. ಅನೌಪಚಾರಿಕ; ಮುಚ್ಚುಮರೆಯಿಲ್ಲದ.
    2. ಮನಸ್ಸು ತೆರೆದು ಮಾತನಾಡುವ.

  • uncage
    ಸಕರ್ಮಕ ಕ್ರಿಯಾಪದ
  • ಪಂಜರದಿಂದಾಚೆಗೆ, ಬೋನಿನಿಂದಾಚೆಗೆ – ಬಿಡು.
  • ಸೆರೆಯಿಂದ ಬಿಡು; ಬಿಡುಗಡೆ ಮಾಡು; ಸ್ವತಂತ್ರವಾಗಿಸು.

  • uncalled
    ಗುಣವಾಚಕ
    ಕರೆದಿಲ್ಲದ; ಕರೆಯದ; ಆಹ್ವಾನವಿಲ್ಲದ; ಅನಾಹೂತ.

    uncalled-for
    ಗುಣವಾಚಕ
    ಕೇಳದ; ಅನಾವಶ್ಯಕವಾದ; ಅಧಿಕಪ್ರಸಂಗಿತನದ: such comments are uncalled-for ಇಂಥ ಟೀಕೆಗಳು ಅಧಿಕಪ್ರಸಂಗಿತನದವು. uncalled-for insults ಅನಾವಶ್ಯಕವಾದ ಅವಮಾನಕರ ಮಾತುಗಳು.


    logo