logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

maladaptive
ಗುಣವಾಚಕ
ಹೊಂದಿಕೊಳ್ಳದ; ಸಾಮರಸ್ಯವಿಲ್ಲದ; (ವ್ಯಕ್ತಿ, ಪ್ರಾಣಿಜಾತಿ, ಸಸ್ಯಜಾತಿ, ಮೊದಲಾದವುಗಳ ವಿಷಯದಲ್ಲಿ) ಪರಿಸರಕ್ಕೆ ಹೊಂದಿಕೊಳ್ಳಲಾಗದ ಮತ್ತು ಭಾವುಕವಾಗಿ, ವರ್ತನೆಯಲ್ಲಿ, ಭೌತಿಕವಾಗಿ ಮತ್ತು ಮಾನಸಿಕವಾಗಿ ಏರಿಳಿತಗಳನ್ನು ಹೊಂದುವ.

maladjusted
ಗುಣವಾಚಕ
  • ತಪ್ಪು ಹೊಂದಾಣಿಕೆಯ; ಅಸಮನ್ವಿತ; ಸರಿಯಾದ ಹೊಂದಾಣಿಕೆಯಿಲ್ಲದ.
  • (ವ್ಯಕ್ತಿಯ ವಿಷಯದಲ್ಲಿ) ಸಾಮರಸ್ಯರಹಿತ; ಸಾಮಾಜಿಕ ಪರಿಸರದೊಡನೆ ಹೊಂದಿಕೊಳ್ಳಲಾಗದ, ಸಾಮರಸ್ಯ ಹೊಂದಿರದ.

  • maladjustment
    ನಾಮವಾಚಕ
  • ತಪ್ಪು ಹೊಂದಾಣಿಕೆ; ಅಸಮನ್ವಯತೆ; ಹೊಂದಿಕೆ ಯಾ ಹೊಂದಾವಣೆ ಇಲ್ಲದಿರುವುದು; ಸಾಮಂಜಸ್ಯ ಯಾ ಸಾಮರಸ್ಯ ಇಲ್ಲದಿರುವುದು; ಸಮರಸತೆ ಇಲ್ಲದಿರುವುದು; ಅವ್ಯವಸ್ಥೆ.
  • ವ್ಯಕ್ತಿಗೂ ಪರಿಸರಕ್ಕೂ ಹೊಂದಿಕೆ ಇಲ್ಲದಿರುವುದು; ಅಸಾಮರಸ್ಯ; ಸಮರಸತೆಯಿಲ್ಲದ ಸ್ಥಿತಿ.

  • maladminister
    ಸಕರ್ಮಕ ಕ್ರಿಯಾಪದ
    ಕೆಟ್ಟದಾಗಿ ಆಡಳಿತ ನಡೆಸು; ಅಸಮರ್ಥವಾಗಿ, ಕೆಟ್ಟದಾಗಿ ಯಾ ಅಪ್ರಾಮಾಣಿಕವಾಗಿ – ಕಾರುಬಾರು ನಡೆಸು.

    maladministration
    ನಾಮವಾಚಕ
    ದುರಾಡಳಿತ; ಕೆಟ್ಟ ಆಡಳಿತ; ಕುಲಗೆಟ್ಟ ಆಡಳಿತ; ಅವಿವೇಕದ ಕಾರುಬಾರು; ಅಸಮರ್ಥ ಯಾ ಅಪ್ರಾಮಾಣಿಕ ಆಡಳಿತ.

    maladroit
    ಗುಣವಾಚಕ
  • ನಯನಾಜೂಕಿಲ್ಲದ; ಒಡ್ಡೊಡ್ಡಾದ; ಚಾತುರ್ಯವಿಲ್ಲದ; ಅಕುಶಲ.
  • ವಿವೇಚನೆಯಿಲ್ಲದ; ಅವಿವೇಕದಿಂದ ಕೂಡಿದ; ವಿಚಕ್ಷಣೆಯಿಲ್ಲದ: maladroit propaganda ವಿವೇಚನೆಯಿಲ್ಲದ ಪ್ರಚಾರ.

  • maladroitly
    ಕ್ರಿಯಾವಿಶೇಷಣ
  • ನಯನಾಜೂಕಿಲ್ಲದೆ; ಒಡ್ಡೊಡ್ಡಾಗಿ; ಚಾತುರ್ಯವಿಲ್ಲದೆ; ಅಕುಶಲವಾಗಿ.
  • ವಿವೇಚನೆಯಿಲ್ಲದೆ; ಅವಿವೇಕದಿಂದ; ವಿಚಕ್ಷಣೆಯಿಲ್ಲದೆ.

  • maladroitness
    ನಾಮವಾಚಕ
  • ನಯನಾಜೂಕಿಲ್ಲದಿರುವಿಕೆ; ಚಾತುರ್ಯ ರಹಿತತೆ; ಅಕುಶಲತೆ.
  • ವಿವೇಚನಶೂನ್ಯತೆ; ಅವಿವೇಕದ ವರ್ತನೆ; ವಿಚಕ್ಷಣೆಯಿಲ್ಲದಿರುವಿಕೆ.

  • malady
    ನಾಮವಾಚಕ
    ಬೇನೆ; ರೋಗ; ಕಾಯಿಲೆ; ವ್ಯಾಧಿ; ಉಪದ್ರವ; ಪೀಡೆ; ಸಂಕಟ; ಕುತ್ತು (ರೂಪಕವಾಗಿ ಸಹ).

    Malaga
    ನಾಮವಾಚಕ
    ಮ್ಯಾಲಗ (ವೈನು); ದಕ್ಷಿಣ ಸ್ಪೇನ್‍ ದೇಶದ ಮ್ಯಾಲಗ ಪಟ್ಟಣದಲ್ಲಿ ತಯಾರಿಸುವ ಒಂದು ಬಗೆಯ, ಸಿಹಿಯಾದ ಬಿಳಿ ವೈನು.


    logo