logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lancinating
ಗುಣವಾಚಕ
(ನೋವಿನ ವಿಷಯದಲ್ಲಿ) ತೀವ್ರವಾದ; ತೀಕ್ಷ್ಣವಾದ; ಇರಿಯುವ; ಚುಚ್ಚುವ; ಚಳುಕುಂಟುಮಾಡುವ.

Lancs.
ಸಂಕ್ಷಿಪ್ತ
Lancashire.

land
ನಾಮವಾಚಕ ಪದಗುಚ್ಛ ನುಡಿಗಟ್ಟು
  • ಭೂಭಾಗ; ಸಮುದ್ರ, ನೀರು, ಎಂಬುವಕ್ಕೆ ಪ್ರತಿಯಾಗಿ ಭೂಮಿಯ ಮೇಲ್ಮೈಯ ಗಟ್ಟಿಭಾಗ.
    1. ನೆಲ; ಭೂಮಿ; ಜಮೀನು; ಭೂಪ್ರದೇಶ; ದೇಶದ ವಿಸ್ತಾರ, ಹರವು.
    2. (ಬಳಕೆ, ಗುಣಮಟ್ಟ, ಮೊದಲಾದವುಳ್ಳ) ಭೂಮಿ; ಜಮೀನು: arable land ಸಾಗುವಳಿ ಮಾಡಬಹುದಾದ ಜಮೀನು; ವ್ಯವಸಾಯ ಯೋಗ್ಯ ಜಮೀನು. building land ಕಟ್ಟಡದ ಜಮೀನು.
  • ದೇಶ; ನಾಡು; ರಾಜ್ಯ; ರಾಷ್ಟ್ರ: a land of dreams ಕನಸುಗಳ ನಾಡು.
  • ಭೂಸ್ವತ್ತು; ಭೂಸ್ಥಿತಿ.
  • (ಬಹುವಚನದಲ್ಲಿ) ಭೂಮಿಕಾಣಿ; ಜಮೀನುಗಳು; ಹೊಲಗದ್ದೆ; ಎಸ್ಟೇಟುಗಳು.
  • ಕೋವಿಯ ಒಳಗಂಡಿಯಲ್ಲಿ ಗುಂಡು ಹೋಗಲು ಮಾಡಿರುವ ಜಾಡುಗಳನ್ನು ಬಿಟ್ಟು ಉಳಿದ ಭಾಗ, ಮೈ
  • (ಸ್ಕಾಟ್ಲಂಡ್‍) ಹಲವಾರು ಮನೆಗಳುಳ್ಳ ಕಟ್ಟಡ; ಬಹುಗೃಹ ಸೌಧ.
  • (ದಕ್ಷಿಣ ಆಹ್ರಿಕ) (ಬೇಲಿಯಿಂದ ಸುತ್ತುವರಿದ) ಸಾಗುವಳಿ ಜಮೀನು; ಕೃಷಿಭೂಮಿ.
  • (ನೀರ್ಗಾಲುವೆಗಳಿಂದ ಬೇರ್ಪಡಿಸಿದ) ಸಾಗುವಳಿ ಜಮೀನಿನ ಯಾ ಹುಲ್ಲುಗಾವಲಿನ ಪಟ್ಟಿ ಯಾ ಪ್ರದೇಶ.

  • land
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
  • (ಹಡಗು ಮೊದಲಾದವನ್ನು) ದಡ – ಸೇರಿಸು, ಮುಟ್ಟಿಸು.
  • (ವಿಮಾನ, ಅದರ ಪ್ರಯಾಣಿಕರು, ಮೊದಲಾದವನ್ನು) ಕೆಳಕ್ಕಿಳಿಸು; ಕೆಳಗಿಳಿಸು; ಧರೆಗಿಳಿಸು; ಭೂಮಿ ಯಾ ನೀರಿನ ಮೇಲೆ ಇಳಿಸು.
  • (ಮೀನನ್ನು) ದಡಕ್ಕೆ ತರು.
  • (ಆಡುಮಾತು) (ಒಂದು ಸ್ಥಳಕ್ಕೆ, ದೆಶೆಗೆ, ಸ್ಥಾನಕ್ಕೆ) ತರು: landed her in trouble ಅವಳನ್ನು ತೊಂದರೆಗೆ ಸಿಕ್ಕಿಹಾಕಿಸಿತು.
  • (ಆಡುಮಾತು) (ವ್ಯಕ್ತಿ ಮೊದಲಾದವರಿಗೆ ಏಟು ಮೊದಲಾದವನ್ನು) ಹೊಡೆ; ಕೊಡು: landed him one in the eye ಕಣ್ಣಿಗೆ ಹೊಡೆದನು.
  • (ಆಡುಮಾತು) (ಸಮಸ್ಯೆ ಮೊದಲಾದವನ್ನು) ಒಡ್ಡು; ನೀಡು.
  • (ಹಡಗು, ವಾಹನ, ಮೊದಲಾದವುಗಳಿಂದ, ವ್ಯಕ್ತಿ, ಸರಕು, ಮೊದಲಾದವನ್ನು) ಇಳಿಸು; ಕೆಳಕ್ಕಿಳಿಸು.
  • (ಆಡುಮಾತು) (ಹುದ್ದೆ, ಬಹುಮಾನ, ಮೊದಲಾದವನ್ನು, ಮುಖ್ಯವಾಗಿ ತೀವ್ರ ಸ್ಪರ್ಧೆಯನ್ನು ಎದುರಿಸಿ) ಗೆಲ್ಲು; ಗಳಿಸು; ಸಂಪಾದಿಸು; ಗಿಟ್ಟಿಸು; ಪಡೆ: land a good contract ಒಳ್ಳೆ ಗುತ್ತಿಗೆ ಗಳಿಸು, ಗಿಟ್ಟಿಸು.
  • (ಜಾಕಿಯು ಕುದುರೆಯನ್ನು) ಮೊದಲನೆಯದಾಗಿ, ಪ್ರಥಮ ಸ್ಥಾನದಲ್ಲಿ ಬರುವಂತೆ – ತರು, ಮಾಡು.

  • Land
    ನಾಮವಾಚಕ
    (ಬಹುವಚನ Lander ಉಚ್ಚಾರಣೆ ಲೆಂಡರ್‍). ಲಂಟ್‍:
  • ಜರ್ಮನಿ ಸಂಯುಕ್ತ ಗಣರಾಜ್ಯದ ಪ್ರಾಂತ.
  • ಆಸ್ಟ್ರಿಯದ ಪ್ರಾಂತ.

  • land breeze
    ನಾಮವಾಚಕ
    ನೆಲವಾಯು; ನೆಲಗಾಳಿ; ಭೂಮಾರುತ; ನೆಲದ ಕಡೆಯಿಂದ ಸಮುದ್ರದ ಕಡೆಗೆ, ಮುಖ್ಯವಾಗಿ ರಾತ್ರಿ ವೇಳೆ ಬೀಸುವ ಗಾಳಿ.

    land force
    ನಾಮವಾಚಕ
    = land forces.

    land forces
    ನಾಮವಾಚಕ
    ನೆಲಪಡೆ(ಗಳು); ಭೂಸೈನ್ಯ(ಗಳು).

    land grant
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಭೂಮಾನ್ಯ; ಭೂದತ್ತಿ; ಸಾರ್ವಜನಿಕ ಭೂಮಿ ಯಾ ಜಮೀನನ್ನು ದತ್ತಿಯಾಗಿ ಕೊಡುವುದು.

    land mass
    ನಾಮವಾಚಕ
    ಭೂರಾಶಿ; ವಿಶಾಲವಾದ ಭೂಪ್ರದೇಶ.


    logo