ಅಸಮರ್ಥತೆ; ಅಶಕ್ತತೆ: imbecility of judgement ವಿವೇಚನೆಯ ಅಸಮರ್ಥತೆ.
ತಿಳಿಗೇಡಿತನ; ಪೆದ್ದತನ; ಹುಚ್ಚುತನ; ಅವಿವೇಕ; ಅಸಮಂಜಸತೆ, ಮುಖ್ಯವಾಗಿ ಕಾರ್ಯಗಳಲ್ಲಿ ಕಂಡುಬರುವ ಬುದ್ಧಿಯ ಯಾ ಮನಸ್ಸಿನ ದೌರ್ಬಲ್ಯ.
imbed
ಸಕರ್ಮಕ ಕ್ರಿಯಾಪದ
= embed.
imbibe
ಸಕರ್ಮಕ ಕ್ರಿಯಾಪದ
( ಅಕರ್ಮಕ ಕ್ರಿಯಾಪದ ಸಹ) (ಭಾವನೆಗಳು ಮೊದಲಾದವನ್ನು) ಗ್ರಹಿಸು; ಜೀರ್ಣಿಸಿಕೊ; ಮೈಗೂಡಿಸಿಕೊ; ರಕ್ತಗತ ಮಾಡಿಕೊ; ಆತ್ಮಸಾತ್ ಮಾಡಿಕೊ: imbibe moral principles ನೈತಿಕ ತತ್ತ್ವಗಳನ್ನು ಮೈಗೂಡಿಸಿಕೊ.
(ದ್ರವವನ್ನು, ಮುಖ್ಯವಾಗಿ ಆಲ್ಕಹಾಲ್ ಪಾನೀಯವನ್ನು) ಕುಡಿ: he imbibed great quantities of tea ಅವನು ವಿಪರೀತ ಚಹಾ ಕುಡಿದನು.
(ಗಾಳಿ ಮೊದಲಾದವನ್ನು) ಎಳೆದುಕೊ; ಸೇದಿಕೊ.
(ತೇವ ಮೊದಲಾದವನ್ನು) ಹೀರು; ಹೀರಿಕೊ plants imbibe moisture from the soil ಸಸ್ಯಗಳು ನೆಲದಿಂದ ತೇವವನ್ನು ಹೀರಿಕೊಳ್ಳುತ್ತವೆ.
imbibition
ನಾಮವಾಚಕ
ಗ್ರಹಿಕೆ; (ಭಾವನೆ ಮೊದಲಾದವನ್ನು) ಗ್ರಹಿಸುವಿಕೆ.
(ದ್ರವದ) ಪಾನ; ಕುಡಿತ.
(ಗಾಳಿ ಮೊದಲಾದವುಗಳನ್ನು) ಸೇದಿಕೊಳ್ಳುವಿಕೆ.
(ತೇವ ಮೊದಲಾದವುಗಳ) ಹೀರಿಕೆ; ಹೀರಿಕೊಳ್ಳುವುದು.
imbricate
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಎಲೆಗಳು, ಈನಿನ ಪೊರೆಗಳು, ಮೊದಲಾದವನ್ನು) ಹೆಂಚಿನಂತೆ ಹೊದಿಸು; ಹೆಂಚು ಹೊದಿಸಿದಂತೆ ಒಂದರ ಮೇಲೊಂದು ಕೂಡುವ ಹಾಗೆ ಪೇರಿಸು, ಜೋಡಿಸು. ಹೆಂಚಿನಂತೆ ಹೊದಿ; ಹೆಂಚು ಹೊದಿಸಿದಂತೆ ಜೋಡಣೆಯಾಗು, ಅಳವಟ್ಟಿರು.
imbricate
ಗುಣವಾಚಕ
ಹೆಂಚು ಹೊದಿಸಿದಂತಿರುವ; ಹೆಂಚುಗಳಂತೆ (ಪದರ ಪದರವಾಗಿ) ಜೋಡಿಸಿರುವ; ಒಂದರ ಮೇಲೊಂದು ಪೇರಿಸಿರುವ.
ಹೆಂಚು ಹೊದಿಕೆ ಅಲಂಕರಣದ; ಅಲಂಕಾರ, ಚಿತ್ರಣ ಮೊದಲಾದವುಗಳಲ್ಲಿ ಒಂದರ ಮೇಲೊಂದು ಹೊದಿಸಿದ ಹೆಂಚಿನಂತಿರುವ ಯಾ ಅವುಗಳನ್ನು ಹೋಲುವ.
imbrication
ನಾಮವಾಚಕ
ಹೆಂಚು ಹೊದಿಕೆ:
ಹೆಂಚುಗಳಂತೆ, ಒಂದರ ಮೇಲೊಂದರಂತೆ ಜೋಡಿಸಿರುವ – ಹೊದಿಕೆ ಯಾ ಮೇಲುಸೇರುವೆ.
ಹೆಂಚು ಹೊದಿಕೆಯಂಥ ಅಲಂಕಾರ ಯಾ ಚಿತ್ರ ನಮೂನೆ.
imbricative
ಗುಣವಾಚಕ
ಹೆಂಚು ಹೊದಿಕೆಯಂಥ; ಒಂದರ ಮೇಲೊಂದರಂತೆ ಹೊದಿಸಿರುವ ಹೆಂಚುಗಳಂತಿರುವ ಪೊರೆಗಳಿಂದ ಮುಚ್ಚಿದ ಯಾ ಮಾಡಿದ.
imbroglio
ನಾಮವಾಚಕ
ಅಸ್ತವ್ಯಸ್ತ ರಾಶಿ; ಚೆಲ್ಲಾಪಿಲ್ಲಿ ಬಿದ್ದಿರುವ ರಾಶಿ: an imbroglio of papers and books ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಾಗದಗಳ ಮತ್ತು ಪುಸ್ತಕಗಳ ರಾಶಿ.
(ಮುಖ್ಯವಾಗಿ ರಾಜಕೀಯದಲ್ಲಿ ಯಾ ನಾಟಕದಲ್ಲಿ) ತೊಡಕು (ಸಂದರ್ಭ); ಅಸ್ತವ್ಯಸ್ತತೆ; ಬಿಕ್ಕಟ್ಟು; ಮುಗ್ಗಟ್ಟು; ಜಟಿಲ ಪರಿಸ್ಥಿತಿ; ಗೋಟಾಳಿ: the play is clever in its intrigue and imbroglio ನಾಟಕವು ತನ್ನ ಪಿತೂರಿ ಮತ್ತು ಜಟಿಲ ಸನ್ನಿವೇಶಗಳಿಂದ ಚಮತ್ಕಾರವಾಗಿದೆ.
(ವ್ಯಕ್ತಿಗಳ ಯಾ ದೇಶಗಳ ಮಧ್ಯೆ ಉಂಟಾಗುವ ತೊಡಕಿನ ಯಾ ಕಹಿಯ) ಮನಸ್ತಾಪ; ಭಿನ್ನಾಭಿಪ್ರಾಯ: an imbroglio between foreign ministers ವಿದೇಶಾಂಗ ಮಂತ್ರಿಗಳ ನಡುವಣ ಮನಸ್ತಾಪ.