ಬಿಸಿಗಾಳಿ ಯಂತ್ರ; ಶಾಖದ ಎಂಜಿನ್ನು; ಉಷ್ಣವಾಯುಯಂತ್ರ; ಕಾದ ಗಾಳಿಯಿಂದ ನಡೆವ ಯಂತ್ರ.
calorie
ನಾಮವಾಚಕ
ಪದಗುಚ್ಛ
(ಭೌತವಿಜ್ಞಾನ) ಕ್ಯಾಲೊರಿ; ಶಾಖದ ಮಾನ:
ಗ್ರಾಂಕ್ಯಾಲೊರಿ; ಸಣ್ಣ ಕ್ಯಾಲೊರಿ; ವಾಯುವಿನ ಸಾಮಾನ್ಯ ಒತ್ತಡದಲ್ಲಿ ಒಂದು ಗ್ರಾಂ ನೀರನ್ನು $14.5^\circ{\rm C}$ ತಾಪದಿಂದ $15.5^\circ{\rm C}$ ತಾಪಕ್ಕೆ ಕಾಯಿಸಲು ಬೇಕಾಗುವ ಶಾಖದ ಮೊತ್ತ.
ಕಿಲೊಕ್ಯಾಲೊರಿ; ಕಿಲೊ ಗ್ರಾಂ ಕ್ಯಾಲೊರಿ; ದೊಡ್ಡ ಕ್ಯಾಲೊರಿ; 1000 ಸಣ್ಣ ಕ್ಯಾಲೊರಿ.
ಸರಾಸರಿ ಕ್ಯಾಲೊರಿ; ವಾಯುವಿನ ಸಾಮಾನ್ಯ ಒತ್ತಡದಲ್ಲಿ ಒಂದು ಗ್ರಾಂ ನೀರನ್ನು $0^\circ$ ತಾಪದಿಂದ $100^\circ{\rm C}$ ತಾಪಕ್ಕೆ ಕಾಯಿಸಲು ಬೇಕಾಗುವ ಶಾಖದ $1/100$ ಭಾಗ.
(ಜೀವರಸಾಯನ ವಿಜ್ಞಾನ) ಒಂದು ದೊಡ್ಡ ಕ್ಯಾಲೊರಿ ಶಾಖವನ್ನು ಒದಗಿಸುವಷ್ಟು ಆಹಾರ.
calorifacient
ಗುಣವಾಚಕ
(ಆಹಾರಗಳ ವಿಷಯದಲ್ಲಿ) ಶಾಖೋತ್ಪಾದಕ; ಶಾಖಜನಕ.
calorific
ಗುಣವಾಚಕ
ಶಾಖೋತ್ಪಾದಕ; ಶಾಖಜನಕ.
ಶಾಖದ ಯಾ ಶಾಖಕ್ಕೆ ಸಂಬಂಧಿಸಿದ.
calorific value
ನಾಮವಾಚಕ
ಇಂಧನದ–ಶಾಖಸಾಮರ್ಥ್ಯ, ಶಾಖೋತ್ಪಾದಕ ಸಾಮರ್ಥ್ಯ; ಒಂದು ಏಕಮಾನ ತೂಕದ ಇಂಧನದಿಂದ ಒದಗುವ ಶಾಖದ ಮೊತ್ತ.
calorifically
ಕ್ರಿಯಾವಿಶೇಷಣ
ಶಾಖದಿಂದ; ಕಾಯಿಸುವುದರಿಂದ.
calorification
ನಾಮವಾಚಕ
(ಮುಖ್ಯವಾಗಿ ಜೀವಂತ ಪ್ರಾಣಿಗಳ ದೇಹದಲ್ಲಿ ಉಂಟಾಗುವ) ಶಾಖೋತ್ಪತ್ತಿ; ಉಷ್ಣೋತ್ಪತ್ತಿ; ಉಷ್ಣಜನನ.
calorifier
ನಾಮವಾಚಕ
ಶಾಖಕಾರಿ; ಕ್ಯಾಲೊರಿಕಾರಿ; ಮುಳುಗಿಸಿರುವ ಸುರುಳಿನಾಳದ ಮೂಲಕ ಹಬೆ ಹಾಯಿಸಿ ದ್ರವವನ್ನು ಕಾಯಿಸುವ ಉಪಕರಣ.
calorify
ಸಕರ್ಮಕ ಕ್ರಿಯಾಪದ
(ಮುಖ್ಯವಾಗಿ ಹಾಸ್ಯ ಪ್ರಯೋಗ) ಬಿಸಿಮಾಡು; ಕಾಯಿಸು.
calorimeter
ನಾಮವಾಚಕ
(ಭೌತವಿಜ್ಞಾನ) ಕ್ಯಾಲೊರಿಮಾಪಕ; ಶಾಖಮಾಪಕ; ಯಾವುದೇ ಪ್ರತಿಕ್ರಿಯೆಯಲ್ಲಿ ವಿಸರ್ಜನೆಯಾಗುವ ಯಾ ಹೀರಿಕೊಳ್ಳುವ ಶಾಖದ ಮೊತ್ತವನ್ನು ಅಳೆಯುವ ಉಪಕರಣ.