logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unbridgeable
ಗುಣವಾಚಕ
  • ಸೇತುವೆಯಾಗದ; ಸೇತುವೆ ಕಟ್ಟಲಾಗದ.
  • ಕೂಡಿಸಲಾಗದ; ಸೇರಿಸಲಾಗದ; ಸಂಪರ್ಕ ಕಲ್ಪಿಸಲಾಗದ.

  • unbridle
    ಸಕರ್ಮಕ ಕ್ರಿಯಾಪದ
  • (ಕುದುರೆಯ) ಲಗಾಮು – ತೆಗೆದುಬಿಡು, ಕಳಚು.
  • (ವ್ಯಕ್ತಿ, ಮನುಷ್ಯರ ನಾಲಿಗೆ, ಮೊದಲಾದವುಗಳನ್ನು) ಸಡಿಲಿಸು; ಸ್ವಾತಂತ್ರ ಕೊಡು; ನಿರ್ಬಂಧ ತೆಗೆ.

  • unbridled
    ಗುಣವಾಚಕ
    (ಮುಖ್ಯವಾಗಿ ನಾಲಿಗೆ, ಅಹಂಕಾರ ಪ್ರವೃತ್ತಿ, ಮೊದಲಾದವುಗಳ ವಿಷಯದಲ್ಲಿ, ರೂಪಕವಾಗಿ) ಕಡಿವಾಣವಿಲ್ಲದ; ಲಂಗುಲಗಾಮಿಲ್ಲದ; ಅಂಕೆಯಿಲ್ಲದ; ನಿಯಂತ್ರಣ, ಸಂಯಮ ಇಲ್ಲದ: an unbridled tongue ಲಂಗುಲಗಾಮಿಲ್ಲದ – ನಾಲಿಗೆ. unbridled insolence ಕಡಿವಾಣವಿಲ್ಲದ ಸೊಕ್ಕು.

    unbroken
    ಗುಣವಾಚಕ
  • ಒಡೆಯದ; ಒಡೆದಿಲ್ಲದ.
  • ಪಳಗಿಸಿಲ್ಲದ; ಬಗ್ಗದ: unbroken horse ಪಳಗಿಸದ ಕುದುರೆ.
  • ವಿಚ್ಫಿತ್ತಿಯಿಲ್ಲದ; ಒಂದೇ ಸಮನಾದ; ಅವಿಚ್ಫಿನ್ನವಾದ; ನಿರಂತರವಾದ: unbroken sleep ನಿರಂತರ ನಿದ್ದೆ. unbroken peace ಅವಿಚ್ಫಿನ್ನವಾದ ಶಾಂತಿ.
  • ಮೀರಿಲ್ಲದ; ಮೀರಿಸಿಲ್ಲದ; ಮುರಿಯದ: unbroken record (ಹಿಂದೆಂದೂ) ಮೀರಿಸದ, ಮುರಿಯದ – ವಿಕ್ರಮ, ದಾಖಲೆ.

  • unbrokenly
    ಕ್ರಿಯಾವಿಶೇಷಣ
    ಅವಿಚ್ಫಿನ್ನವಾಗಿ; ನಿರಂತರವಾಗಿ; ಒಂದೇ ಸಮನಾಗಿ.

    unbrokenness
    ನಾಮವಾಚಕ
  • ಅಖಂಡತೆ; ಒಡೆಯದಿರುವುದು.
  • ಪಳಗಿಸಿಲ್ಲದಿರುವಿಕೆ.
  • ಅವಿಚ್ಫಿನ್ನತೆ; ಒಂದೇ ಸಮನಾದ ಸ್ಥಿತಿ.

  • unbruised
    ಗುಣವಾಚಕ
    ಗಾಯವಾಗಿಲ್ಲದ; ಪೆಟ್ಟು ಬಿದ್ದಿಲ್ಲದ.

    unbuckle
    ಸಕರ್ಮಕ ಕ್ರಿಯಾಪದ
    (ಪಟ್ಟಿ, ಪಾದರಕ್ಷೆ, ಮೊದಲಾದವುಗಳ) ಚಿಲುಕು ಕಟ್ಟನ್ನು ಸಡಿಲಿಸು, ಬಿಚ್ಚು; ‘ಬಕಲ್‍’ – ತೆಗೆ, ಸಡಿಲಿಸು.

    unbuild
    ಸಕರ್ಮಕ ಕ್ರಿಯಾಪದ
    (ಕಟ್ಟಡ, ಸಿದ್ಧಾಂತ, ವ್ಯವಸ್ಥೆ, ಮೊದಲಾದವನ್ನು) ಒಡೆದುರುಳಿಸು; ಕೆಡಹು; ನಾಶಪಡಿಸು (ರೂಪಕವಾಗಿ ಸಹ).

    unbuilt
    ಗುಣವಾಚಕ
    ಅನಿರ್ಮಿತ; ಇನ್ನೂ ಕಟ್ಟಿಲ್ಲದ, ರಚಿಸಿಲ್ಲದ.


    logo