(ಬಹುವಚನ octonarii ಉಚ್ಚಾರಣೆ, ಆಕ್ಟನೇರಿಐ). (ಛಂದಸ್ಸು) ಅಷ್ಟಗಣಿ; ಎಂಟು ಗಣಗಳುಳ್ಳ ಪದ್ಯಪಂಕ್ತಿ.
octonary
ಗುಣವಾಚಕ
= octonal.
octonary
ನಾಮವಾಚಕ
ಅಷ್ಟಕ; ಎಂಟರ ತಂಡ.
ಅಷ್ಟಪದಿ; ಎಂಟು ಸಾಲುಗಳುಳ್ಳ ಪದ್ಯ.
octopod
ನಾಮವಾಚಕ
ಅಷ್ಟಪಾದಿ; ಆಕ್ಟೊಪಾಡ್; ಆಕ್ಟಾಪೊಡ ಗಣಕ್ಕೆ ಸೇರಿದ, ಸಾಮಾನ್ಯವಾಗಿ ಚೂಷ್ಮಾಂಗ (suckers)ಗಳುಳ್ಳ ಎಂಟು ಬಾಹುಗಳಿರುವ ಮತ್ತು ಚೀಲದಂಥ ಗುಂಡಾದ ದೇಹವುಳ್ಳ, ಅಷ್ಟಪಾದಿಗಳನ್ನೂ ಒಳಗೊಂಡ, ಯಾವುದೇ ಶಿರ್ಷಪಾದಿ, ಚಿಪ್ಪುಜೀವಿ.
octopus
ನಾಮವಾಚಕ
(ಬಹುವಚನ octopuses).
ಆಕ್ಟಪಸ್; ಅಷ್ಟಪಾದಿ:
ಬಾಯಿಯ ಸುತ್ತಲೂ ಚೂಷ್ಮಾಂಗಗಳುಳ್ಳ ಎಂಟು ಉದ್ದವಾದ ಬಾಹುಗಳಿರುವ; ಆಕ್ಟಪೊಡ ಗಣಕ್ಕೆ ಸೇರಿದ ಮೃದುವಾದ ಚೀಲದಂಥ ದೇಹವುಳ್ಳ, ಬಲವಾದ ಕೊಕ್ಕಿನಂಥ ದವಡೆಗಳುಳ್ಳ, ಅಪಾಯಕಾರಿಯಾದ, ಶೀರ್ಷಪಾದಿ ಕಡಲಜೀವಿಗಳ ಕುಲ.
ಈ ಕುಲಕ್ಕೆ ಸೇರಿದ ಶೀರ್ಷಪಾದಿ ಚಿಪ್ಪುಜೀವಿ, ಮೃದ್ವಂಗಿ
ಸಂಹತಾಧಿಕಾರ ಯಾ ಸಂಘಟಿತ ಪ್ರಭಾವ; ಸಂಘಟಿತವಾದ, ಬಹುಮುಖವಾದ, ಸಾಮಾನ್ಯವಾಗಿ ಹಾನಿಕರವಾದ–ಅಧಿಕಾರ ಯಾ ಪ್ರಭಾವ.
octoroon
ನಾಮವಾಚಕ
ಅಷ್ಟಮಾಂಶ ನೀಗ್ರೋ ರಕ್ತೀಯ ; ಚತುರ್ಥಾಂಶ ನೀಗ್ರೋ ರಕ್ತವುಳ್ಳ ವ್ಯಕ್ತಿ ಮತ್ತು ಶ್ವೇತವರ್ಣೀಯ ವ್ಯಕ್ತಿ–ಇವರಿಗೆ ಹುಟ್ಟಿದವನು; ಅಷ್ಟಾಮಾಂಶ ನೀಗ್ರೋ ರಕ್ತವುಳ್ಳವನು.
octosyllabic
ಗುಣವಾಚಕ
ಎಂಟಕ್ಷರದ; ಅಷ್ಟಾಕ್ಷರೀಯ; ಎಂಟು ಅಕ್ಷರ ಯಾ ಉಚ್ಚಾರಾಂಶಗಳುಳ್ಳ.