logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

malachite
ನಾಮವಾಚಕ
ಮ್ಯಾಲಕೈಟ್‍; ಖನಿಜವಾಗಿ ದೊರೆಯುವ, ಹಸುರು ಬಣ್ಣದ, ಪ್ರತ್ಯಾಮ್ಲೀಯ ತಾಮ್ರದ ಕಾರ್ಬೊನೇಟು.

malaco-
ಸಮಾಸ ಪೂರ್ವಪದ
ಮೆತು; ಮೆದು; ಮೃದು: malacoderm ಮೃದುಚರ್ಮಿ.

malacoderm
ನಾಮವಾಚಕ
ಮೃದುಚರ್ಮಿ; ಮೃದ್ವಂಗಿ; ಮೆತ್ತನೆಯ ಚರ್ಮವುಳ್ಳ ಪ್ರಾಣಿ, ಮುಖ್ಯವಾಗಿ ಸಮುದ್ರದ ಆನಿಮನಿ ಮತ್ತು ಸರೀಸೃಪಗಳ ಒಂದು ಪಂಗಡ.

malacologist
ನಾಮವಾಚಕ
ಮೃದ್ವಂಗಿ ಶಾಸ್ತ್ರಜ್ಞ; ಮೆದುಚರ್ಮಿ ಪ್ರಾಣಿಗಳನ್ನು ಕುರಿತು ಅಧ್ಯಯನ ಮಾಡುವವ.

malacology
ನಾಮವಾಚಕ
ಮೃದ್ವಂಗಿ ಶಾಸ್ತ್ರ; ಮೃದ್ವಂಗಿ ಪ್ರಾಣಿಗಳ ಅಧ್ಯಯನ ನಡೆಸುವ ಪ್ರಾಣಿಶಾಸ್ತ್ರ ವಿಭಾಗ.

malacopterygian
ಗುಣವಾಚಕ
(ಪ್ರಾಣಿವಿಜ್ಞಾನ) ಮ್ಯಾಲಕಾಪ್ಟರಿಜೀಯನ್‍; ಟೆಲಿ ಆಸ್ಟ್‍ ಉಪವರ್ಗದ ಮೀನುಗಳಲ್ಲಿ ಮೃದುವಾದ ಈಜುರೆಕ್ಕೆಗಳಿರುವ ಮೀನುಗಳನ್ನೊಳಗೊಂಡ, ಮ್ಯಾಲಕಾಪ್ಟರಿಜೀಐ ಎಂಬ ವಿಭಾಗದ ಯಾ ಅದಕ್ಕೆ ಸೇರಿದ.

malacopterygian
ನಾಮವಾಚಕ
ಮ್ಯಾಲಕಾಪ್ಟರಿಜೀಐ (ವಿಭಾಗಕ್ಕೆ ಸೇರಿದ) ಮೀನು.

malacostracan
ನಾಮವಾಚಕ
ಮ್ಯಾಲಕಾಸ್ಟ್ರಕ ವರ್ಗಕ್ಕೆ ಸೇರಿದ, ನಳ್ಳಿಯೇ ಮೊದಲಾದ ಚಿಪ್ಪು ಜೀವಿ ಯಾ ವಲ್ಕವಂತ ಪ್ರಾಣಿ.

malacostracan
ಗುಣವಾಚಕ
ಮ್ಯಾಲಕಾಸ್ಟ್ರಕ ವರ್ಗಕ್ಕೆ ಸೇರಿದ ಯಾ ಅದಕ್ಕೆ ಸಂಬಂಧಿಸಿದ.

maladaptation
ನಾಮವಾಚಕ
ಅಸಾಮರಸ್ಯತೆ; ಅಸಮರಸತೆ; ಹೊಂದಿಕೊಳ್ಳದಿಕೆ; (ವ್ಯಕ್ತಿ, ಪ್ರಾಣಿಜಾತಿ, ಸಸ್ಯಜಾತಿ, ಮೊದಲಾದವುಗಳ ವಿಷಯದಲ್ಲಿ) ಪರಿಸರಕ್ಕೆ ಹೊಂದಿಕೊಳ್ಳಲಾಗದಿರುವಿಕೆ ಮತ್ತು ಭಾವುಕವಾಗಿ, ವರ್ತನೆಯಲ್ಲಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಏರಿಳಿತಗಳಿಗೆ ಒಳಗಾಗುವಿಕೆ.


logo