logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lance-snake
ನಾಮವಾಚಕ
= fer de lance.

lancelet
ನಾಮವಾಚಕ
ಲಾನ್ಸ್‍ಲಿಟ್‍; 2ರಿಂದ 4 ಅಂಗುಲ ಉದ್ದವಿರುವ, ಬ್ರ್ಯಾಂಕಿಯೊಸ್ಟಮಿಡೀ ವಂಶಕ್ಕೆ ಸೇರಿದ, ತೀರಪ್ರದೇಶಗಳ ಮರಳಿನಲ್ಲಿ ಬಿಲ ಕೊರೆಯುವ, ಮೀನಿನಂಥ, ಚಿಕ್ಕ ಅಕಶೇರುಕ ಕಡಲ ಜೀವಿ.

lanceolate
ಗುಣವಾಚಕ
ಶೂಲಶಿರದ; ಈಟಿ ತಲೆಯ; ಈಟಿಯ ತಲೆಯ ಆಕಾರವುಳ್ಳ; ಏಣುಗಳು ಎರಡು ಕಡೆಗೂ ತುದಿ ಮೊನೆಗೂಡುವಂತೆ ಹೋಗುವ; ಎರಡು ತುದಿಗಳೂ ಈಟಿಯ ತಲೆಯಂತೆ ಮೊನಚಾಗುವ.

lancer
ನಾಮವಾಚಕ
  • (ಚರಿತ್ರೆ) ಈಟಿರಾವುತ; ಭಲ್ಲೆ ಅಶ್ವಾರೋಹಿ; ಹಿಂದೆ ಭಲ್ಲೆಯನ್ನು ಧರಿಸುತ್ತಿದ್ದ ರಾವುತದಳದ ಸೈನಿಕ.
  • (ಬಹುವಚನ ದಲ್ಲಿ)
    1. 8 ಯಾ 15 ಜೋಡಿಗಳು ಕುಣಿಯುವ ಒಂದು ಬಗೆಯ ಚೌಕ ಕುಣಿತ.
    2. ಈ ಕುಣಿತಕ್ಕೆ ಹೊಂದಿಸಿದ ಸಂಗೀತ.

  • lancet
    ನಾಮವಾಚಕ
    ಶೂಲ; ಈಟಿಕೆ; ಶಸ್ತ್ರಕ್ರಿಯೆಯಲ್ಲಿ ಬಳಸುವ, ರಕ್ತ ಹೊರಡಿಸಲು, ಚುಚ್ಚಲು ಅನುಕೂಲಿಸುವಂತೆ, ಸಾಮಾನ್ಯವಾಗಿ ಇಕ್ಕಡೆ ಹರಿತದ ಏಣುಳ್ಳ ಮತ್ತು ಮೊನಚಾದ ತುದಿಯುಳ್ಳ ಈಟಿಯಂಥ ಒಂದು ಶಸ್ತ್ರ.

    lancet arch
    ನಾಮವಾಚಕ
    ಈಟಿ ಕಮಾನು; ಈಟಿಯ ತುದಿಯಂತಿರುವ ಚೂಪು ಕಮಾನು; ಮೊನಚಾದ ನೆತ್ತಿಯುಳ್ಳ ಕಮಾನು.

    lancet light
    ನಾಮವಾಚಕ
    ಈಟಿ ಬೆಳಕು; ಈಟಿಯಂತಿರುವ ಕಿಟಕಿಯಿಂದ ತೂರಿಬರುವ ಬೆಳಕು.

    lancet window
    ನಾಮವಾಚಕ
    ಈಟಿಕಿಟಕಿ; ಶೂಲಗವಾಕ್ಷಿ; ಈಟಿಯಂತೆ ಚೂಪಾದ ನೆತ್ತಿಯುಳ್ಳ ಕಿಟಕಿ.

    lanceted
    ಗುಣವಾಚಕ
  • (ಕಿಟಕಿಯ ವಿಷಯದಲ್ಲಿ) ಮೊನಚು ನೆತ್ತಿಯ ಯಾ ಮೊನಚು ಕಮಾನಿರುವ; ಈಟಿನೆತ್ತಿಯುಳ್ಳ.
  • (ಚರ್ಚಿನ ವಿಷಯದಲ್ಲಿ) ಈಟಿಕಿಟಕಿಗಳುಳ್ಳ; ಶೂಲಗವಾಕ್ಷಗಳುಳ್ಳ.

  • lancewood
    ನಾಮವಾಚಕ
    ಲಾನ್ಸ್‍ – ದಾರು, ಮರ; ಗಾಡಿಯ ಈಚು, ಮೀನುಗೋಲು, ಮೊದಲಾದವುಗಳಿಗೆ ಬಳಸುವ, ಸುಲಭವಾಗಿ ಮುರಿಯದ, ಬಾಗಿಬೀಗುವ, ಆಕ್ಸಂಡ್ರ ಲಾನ್ಸಿಯಲಟ ಕುಲದ ವೆಸ್ಟ್‍ ಇಂಡೀಸ್‍ನ ಒಂದು ಮರ ಯಾ ಅದರ ದಾರು.


    logo