ಪ್ರತಿಮಾವಾದ; ಬಿಂಬವಾದ; ಖಚಿತವಾದ ಪ್ರತಿಮೆಗಳ ಮೂಲಕ ಅಭಿವ್ಯಕ್ತಿಯ ಸ್ಪಷ್ಟತೆಯನ್ನು ಸಾಧಿಸಲು ಹೊರಟ 20ನೆ ಶತಮಾನದ ಆದಿಭಾಗದ ಒಂದು ಸಾಹಿತ್ಯಕ ಚಳವಳಿ.
imagist
ನಾಮವಾಚಕ
ಪ್ರತಿಮಾಕಾರ; ಬಿಂಬವಾದಿ; ಪ್ರತಿಮಾ ಕವಿ; ರೊಮ್ಯಾಂಟಿಕ್ ಸಿದ್ಧಾಂತವನ್ನು ಪ್ರತಿಭಟಿಸಿ, ಖಚಿತ ಪ್ರತಿಮೆಗಳ ಮೂಲಕ ಅಭಿವ್ಯಕ್ತಿಯನ್ನು ಸಾಧಿಸಲು ಪ್ರಯತ್ನಿಸಿದ, 20ನೇ ಶತಮಾನದ ಆದಿಭಾಗದ ಕವಿಪಂಗಡಕ್ಕೆ ಸೇರಿದವನು.
imago
ನಾಮವಾಚಕ
(ಎಲ್ಲ ಅವಸ್ಥೆಗಳನ್ನೂ ದಾಟಿ, ಅಂತ್ಯಾವಸ್ಥೆಯನ್ನು ತಲುಪಿದ) ಪರಿಪೂರ್ಣ ಕೀಟ.
(ಮನಶ್ಶಾಸ್ತ್ರ) ಸ್ವಕಲ್ಪಿತ ಆದರ್ಶ ರೂಪ; ಆದರ್ಶ ವ್ಯಕ್ತಿಕಲ್ಪನೆ; ಬಾಲ್ಯದಲ್ಲಿ ರೂಪಿಸಿಕೊಂಡು ವಯಸ್ಸಾದ ಮೇಲೂ ತಿದ್ದದೆ ಹಾಗೆಯೇ ಉಳಿಸಿಕೊಂಡು ಬಂದ, ತನ್ನದೇ ಯಾ ತನಗೆ ಪ್ರಿಯನಾದ ವ್ಯಕ್ತಿ (ಮುಖ್ಯವಾಗಿ ತಂದೆ ತಾಯಿ)ಯ ಯಾವುದೇ ಆದರ್ಶೀಕೃತ ಕಲ್ಪನೆ, ಭಾವನೆ: father imago ತಂದೆಯ ಆದರ್ಶ ಕಲ್ಪನೆ, ರೂಪ.
imam
ನಾಮವಾಚಕ
ಇಮಾಮ್:
ಮಸೀದಿಯ ಆಗಮಿಕ; ಮಸೀದಿಯಲ್ಲಿ ಪ್ರಾರ್ಥನೆ ನಡೆಸುವವ.
ಹಲವು ವರ್ಗದ ಮುಸಲ್ಮಾನ ಪ್ರಮುಖರ ಬಿರುದು.
imamate
ನಾಮವಾಚಕ
ಇಮಾಮ್‍ಗಿರಿ; ಇಮಾಮ್‍ಪದವಿ.
imbalance
ನಾಮವಾಚಕ
ಅಸಮತೆ; ಅಸಮತೋಲ: the country’s imbalance of payments ದೇಶದ ಹಣಸಂದಾಯದ ಅಸಮತೋಲ, ವ್ಯತ್ಯಾಸ; ದೇಶದ ರಫ್ತಿನಿಂದ ಬಂದ ಆದಾಯಕ್ಕೂ ಆಮದಿಗೆ ತೆತ್ತ ಮೊತ್ತಕ್ಕೂ ನಡುವಣ ಅಂತರ, ವ್ಯತ್ಯಾಸ.
ವಿಷಮತೆ; ಏರುಪೇರು; ಅಸಮತೆ.
imbecile
ಗುಣವಾಚಕ
ದುರ್ಬಲ ಮನಸ್ಸಿನ, ಬುದ್ಧಿಯ; ಪೆದ್ದತನದ; ದಡ್ಡತನದ; ಮಂಕುತನದ.