logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

effeminate
ಸಕರ್ಮಕ ಕ್ರಿಯಾಪದ
ದುರ್ಬಲಗೊಳಿಸು; ಪೌರುಷವಿಲ್ಲದಂತೆ ಮಾಡು; ಹೆಣ್ಣಿನಂತಾಗಿಸು; ಹೆಣ್ಣಿಗನಂತೆ ಮಾಡು.

effeminately
ಕ್ರಿಯಾವಿಶೇಷಣ
ಹೆಂಗಸಿನಂತೆ; ಹೆಣ್ಣಿಗನಂತೆ; ದುರ್ಬಲನಾಗಿ.

effendi
ನಾಮವಾಚಕ
  • (ಚರಿತ್ರೆ) (ತುರ್ಕಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ವಿದ್ವಾಂಸರಿಗೆ ಸಂಬೋಧನೆಯಲ್ಲಿ ಬಳಸುವ ಔಪಚಾರಿಕ ಬಿರುದಾದ) ಸ್ವಾಮಿ; ಹುಜೂರ್‍; ಒಡೆಯ; ಬುದ್ದಿ.
  • (ಪೂರ್ವ ಮೆಡಿಟರೇನಿಯನ್‍ ಮತ್ತು ಅರಬ್‍ ದೇಶಗಳಲ್ಲಿ) ವಿದ್ವಾಂಸ; ಪಂಡಿತ.

  • efferent
    ಗುಣವಾಚಕ
    (ಶರೀರ ವಿಜ್ಞಾನ) ಅಪವಾಹಿ; ಬಹಿರ್ವಾಹಿ; ಹೊರಕ್ಕೆ ಒಯ್ಯುವ: efferent nerves, vessels, valves ಅಪವಾಹಿ ನರಗಳು, ರಕ್ತನಾಳಗಳು, ಕವಾಟಗಳು.

    effervesce
    ಅಕರ್ಮಕ ಕ್ರಿಯಾಪದ
  • (ರಸಾಯನವಿಜ್ಞಾನ) ಬುದ್ಬುದಿಸು; ಉಕ್ೇಳು; ಗುಳ್ಳೆ ಏಳು.
  • (ಸಾಮಾನ್ಯವಾಗಿ ದ್ರವದ ವಿಷಯದಲ್ಲಿ) ಅನಿಲದ ಗುಳ್ಳೆಗಳನ್ನು ಹೊರಡಿಸು.
  • (ರೂಪಕವಾಗಿ) (ವ್ಯಕ್ತಿಯ ವಿಷಯದಲ್ಲಿ) ಉಬ್ಬು; ಉತ್ಸಾಹ ತೋರು; ಹುಮ್ಮಸ್ಸು ತೋರು; ಹುರುಪು ತೋರು.
  • (ಅನಿಲದ ವಿಷಯದಲ್ಲಿ) ಬುದ್ಬುದಿಸು; (ದ್ರವದಿಂದ) ಗುಳ್ಳೆಗುಳ್ಳೆಯಾಗಿ ಏಳು, ಹೊರಬರು.

  • effervescence
    ನಾಮವಾಚಕ
  • (ರಸಾಯನವಿಜ್ಞಾನ) ಬುದ್ಬುದಿಕೆ; ಉಕ್ಕು; ಗುಳ್ಳೆ ಏಳುವಿಕೆ.
  • ಉತ್ಸಾಹ; ಹುಮ್ಮಸ್ಸು; ಹುರುಪು.

  • effervescency
    ನಾಮವಾಚಕ
    = effervescence.

    effervescent
    ಗುಣವಾಚಕ
  • (ರಸಾಯನವಿಜ್ಞಾನ) ಬುದ್ಬುದಿಸುವ; ಉಕ್ಕೇಳುವ; ಗುಳ್ಳೆ ಬರುವ.
  • ಉತ್ಸಾಹದ; ಹುಮ್ಮಸಿನ; ಹುರುಪಿನ.

  • effete
    ಗುಣವಾಚಕ
  • ಬಳಲಿದ; ಸೋತುಹೋದ; ಸುಸ್ತಾದ.
  • ಶಕ್ತಿ ಇಲ್ಲದ; ನಿತ್ರಾಣ; ಬಲಹೀನ; ದುರ್ಬಲ; ಸತ್ತ್ವಹೀನ.
  • (ಪ್ರಾಣಿ, ಮರುಭೂಮಿ, ಮೊದಲಾದವುಗಳ ವಿಷಯದಲ್ಲಿ) ನಿಷ್ಫಲವಾದ; ಗೊಡ್ಡಾದ; ಬಂಜೆ; ಬೀಳುಬಿದ್ದ.

  • effeteness
    ನಾಮವಾಚಕ
  • ಬಳಲಿದ ಸ್ಥಿತಿ; ಜೀರ್ಣಸ್ಥಿತಿ; ಸುಸ್ತು.
  • ಶಕ್ತಿಹೀನತೆ; ನಿತ್ರಾಣಸ್ಥಿತಿ; ಬಲಹೀನತೆ.
  • (ಪ್ರಾಣಿ, ಮರುಭೂಮಿ, ಮೊದಲಾದವುಗಳ ವಿಷಯದಲ್ಲಿ) ನಿಷ್ಫಲತೆ; ಗೊಡ್ಡುತನ; ಸತ್ತ್ವಹೀನತೆ; ಬೀಳು; ಬಂಜರು.


  • logo