logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calmative
ನಾಮವಾಚಕ
(ವೈದ್ಯಶಾಸ್ತ್ರ) ಶಾಮಕ; ಶಮನಕಾರಿ(ಔಷಧ); ಉಪಶಾಮಕ.

calmly
ಕ್ರಿಯಾವಿಶೇಷಣ
  • ಶಾಂತಿಯಿಂದ; ಶಾಂತವಾಗಿ; ಸಮಾಧಾನವಾಗಿ.
  • ಪ್ರಶಾಂತವಾಗಿ.

  • calmness
    ನಾಮವಾಚಕ
  • ಗಾಳಿಯಿಲ್ಲದಿರುವಿಕೆ; ನಿರ್ವಾತಸ್ಥಿತಿ.
  • (ಹವ, ಗಾಳಿ, ಸಮುದ್ರ ಮೊದಲಾದವುಗಳ) ಶಾಂತಸ್ಥಿತಿ; ನಿಶ್ಚಲತೆ; ಸ್ತಬ್ಧತೆ.
  • (ಮನಸ್ಸು, ಭಾವನೆ, ರಾಜಕೀಯ ಪರಿಸ್ಥಿತಿ ಮೊದಲಾದವುಗಳ) ಶಾಂತತೆ; ಸಮಾಧಾನ ಸ್ಥಿತಿ.

  • calomel
    ನಾಮವಾಚಕ
    (ರಸಾಯನವಿಜ್ಞಾನ) ಕ್ಯಾಲಮೆಲ್‍; ರಸವಿರೇಚಕ; ವಿರೇಚಕವಾಗಿಯೂ ಬೂಷ್ಟು ಹಾಗೂ ಕ್ರಿಮಿಗಳ ನಾಶಕವಾಗಿಯೂ ಬಳಸುವ, ಮರ್ಕ್ಯುರಸ್‍ ಕ್ಲೋರೈಡು ಎಂಬ, ರುಚಿಯಿರದ, ಬಿಳಿಯ ಪಾದರಸ ಕ್ಲೋರೀನುಗಳ ಸಂಯುಕ್ತ, ${\rm Hg}_2{\rm Cl}_2$.

    Calor
    ನಾಮವಾಚಕ
    ಕ್ಯಾಲರು; ಗೃಹಬಳಕೆಗಾಗಿ ಸಿಲಿಂಡರು ಮೊದಲಾದವುಗಳಲ್ಲಿ ಸಂಮರ್ದಿಸಿ ತುಂಬಿದ, ಮುಖ್ಯವಾಗಿ ಬ್ಯೂಟೇನಿನ ದ್ರವೀಕೃತ ಅನಿಲ.

    Calor gas
    ನಾಮವಾಚಕ
    =Calor.

    Calorescence
    ನಾಮವಾಚಕ
    (ಭೌತವಿಜ್ಞಾನ) ಶಾಖಬೆಳಗಿಕೆ; ಉಷ್ಣದೀಪ್ತಿ; ಶಾಖದ ರಶ್ಮಿಗಳನ್ನು ಹೀರಿಕೊಂಡ ಕಾಯವು ಪ್ರಜ್ವಲಿಸಿ ಬೆಳಕಿನ ರಶ್ಮಿಗಳನ್ನು ಸೂಸುವುದು; ಉಷ್ಣಕಿರಣಗಳು ದೀಪಕಿರಣಗಳಾಗಿ ಮಾರ್ಪಡುವಿಕೆ.

    calori-
    ಸಮಾಸ ಪೂರ್ವಪದ
    (ಭೌತವಿಜ್ಞಾನ, ಶರೀರ ವಿಜ್ಞಾನ) ಶಾಖಕ್ಕೆ ಸಂಬಂಧಿಸಿದ ಎಂಬರ್ಥ ಸೂಚಿಸುವ ಪೂರ್ವಪ್ರತ್ಯಯ.

    caloric
    ನಾಮವಾಚಕ
    ಶಾಖ; ಕ್ಯಾಲೊರಿಕ್‍; ಮುಖ್ಯವಾಗಿ ಶಾಖವೆಂಬುದು ದ್ರವಸ್ವಭಾವವುಳ್ಳ ಒಂದು ಪದಾರ್ಥವೆಂದು ಹಿಂದೆ ಭಾವಿಸಿದ್ದಾಗ, ಅದಕ್ಕಿದ್ದ ಹೆಸರು.

    caloric
    ಗುಣವಾಚಕ
    ಕ್ಯಾಲರಿಗಳಿಗೆ ಯಾ ಶಾಖಕ್ಕೆ–ಸಂಬಂಧಿಸಿದ.


    logo