logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Balbriggan
ನಾಮವಾಚಕ
(ಕಾಲುಚೀಲ, ಒಳಉಡುಪು, ಮೊದಲಾದವುಗಳಿಗೆ ಬಳಸುವ) ಹೆಣೆದ ಹತ್ತಿಬಟ್ಟೆ.

balconied
ಗುಣವಾಚಕ
  • ಮೊಗಸಾಲೆಯುಳ್ಳ.
  • ಗ್ಯಾಲರಿಯುಳ್ಳ.

  • balcony
    ನಾಮವಾಚಕ
  • (ಮಹಡಿಯ) ಮೊಗಸಾಲೆ; ಉಪ್ಪರಿಗೆಯ ಕಿಟಕಿಯಿಂದ ಪ್ರವೇಶಿಸಬಹುದಾದ, ಕಟಕಟೆಯಿರುವ ಮುಂಚಾಚು. Figure: balcony
  • (ಸಭಾಂಗಣ, ಉಪ್ಪರಿಗೆ, ನಾಟಕಶಾಲೆಗಳಲ್ಲಿ) ಬ್ಯಾಲ್ಕನಿ; ಗ್ಯಾಲರಿ; ಮಹಡಿ ಉಪ್ಪರಿಗೆ.
  • (ಸಿನಿಮಾ ಮೊದಲಾದವುಗಳಲ್ಲಿ) ಬ್ಯಾಲ್ಕನಿ (ಸೀಟುಗಳು); ಮಹಡಿ ಮೇಲಿನ ಆಸನಗಳು.
  • (ಅಮೆರಿಕನ್‍ ಪ್ರಯೋಗ) = >dress circle.

  • bald
    ಗುಣವಾಚಕ
  • (ಪೂರ್ತಿ ಯಾ ಭಾಗಶಃ) ಬಕ್ಕ; ಬೋಳು; ತರಟು; ಪಟ್ಟೆ ತಲೆಯ.
  • (ಪ್ರಾಣಿಗಳ ವಿಷಯದಲ್ಲಿ) ಕೂದಲಿಲ್ಲದ.
  • (ಪಕ್ಷಿಗಳ ವಿಷಯದಲ್ಲಿ) ಗರಿಗಳಿಲ್ಲದ.
  • (ಸಸ್ಯಗಳ ವಿಷಯದಲ್ಲಿ) ಎಲೆಗಳಿಲ್ಲದ.
  • (ಭೂಮಿ, ಬೆಟ್ಟ, ಮೊದಲಾದವುಗಳ ವಿಷಯದಲ್ಲಿ) ಮರಗಿಡಗಳಿಲ್ಲದ; ಸಸ್ಯಗಳಿಲ್ಲದ.
  • (ಬಟ್ಟೆ ಮೊದಲಾದವುಗಳ ವಿಷಯದಲ್ಲಿ) ಜುಂಗಿಲ್ಲದ.
  • (ಕುದುರೆ ಮೊದಲಾದವುಗಳ ವಿಷಯದಲ್ಲಿ, ಮುಖ್ಯವಾಗಿ ಮುಖದ ಮೇಲೆ) ಬಿಳಿ – ಪಟ್ಟೆಯುಳ್ಳ, ಗುರುತಿರುವ, ಮಚ್ಚೆಯುಳ್ಳ.
  • (ಶೈಲಿ ಮೊದಲಾದವುಗಳ ವಿಷಯದಲ್ಲಿ) ಬೋಳುಬೋಳಾದ; ಸಪ್ಪೆ; ನೀರಸ; ನಿರಲಂಕೃತ.
  • (ಮಾತು ಮೊದಲಾದವುಗಳ ವಿಷಯದಲ್ಲಿ) ನೇರವಾದ ಮತ್ತು ಒರಟಾದ; ನಯವಿಲ್ಲದ ಮತ್ತು ಸ್ಪಷ್ಟವಾದ.
  • (ದುರ್ಗುಣಗಳ ವಿಷಯದಲ್ಲಿ) ಸ್ಪಷ್ಟ; ಮುಚ್ಚುಮರೆಯಿಲ್ಲದ.
  • (ಆಡುಮಾತು) (ಟೈರಿನ ವಿಷಯದಲ್ಲಿ) ಸವೆದು ಹೋದ; ಪಟ್ಟೆಯ ಮೇಲಿನ ಉಬ್ಬುಗಳು ಉಜ್ಜಿಹೋದ ಯಾ ಸವೆದು ಹೋದ.

  • bald eagle
    ನಾಮವಾಚಕ
    ಬೋಳು ಹದ್ದು; ಅಮೆರಿಕದ ಲಾಂಛನವಾಗಿ ಬಳಸುತ್ತಿರುವ, ಬಿಳಿ ಶಿಖೆಯುಳ್ಳ, ಅಮೆರಿಕದ ಒಂದು ಬಗೆಯ ಹದ್ದು.

    bald-coot
    ನಾಮವಾಚಕ
  • ಬಕ್ಕಹಕ್ಕಿ; ಬೊಕ್ಕ ತಲೆಯ ಮತ್ತು ಗರಿಗಳಿಲ್ಲದ ಒಂದು ಬ್ರಿಟಿಷ್‍ ಪಕ್ಷಿಜಾತಿ.
  • ಬಕ್ಕ; ಬೋಳ; ಪಟ್ಟೆತಲೆಯವ.

  • bald-faced
    ಗುಣವಾಚಕ
    (ಸಾಮಾನ್ಯವಾಗಿ ಕುದುರೆ, ಹಸು ಮೊದಲಾದ ಪ್ರಾಣಿಗಳ ವಿಷಯದಲ್ಲಿ) ಬಿಳಿಯ ಮುಖವುಳ್ಳ ಯಾ ಮುಖದ ಮೇಲೆ ಬಿಳಿ ಪಟ್ಟೆಯುಳ್ಳ.

    bald-headed
    ಗುಣವಾಚಕ ನುಡಿಗಟ್ಟು
    ಬಕ್ಕ, ಬೋಳು, ಪಟ್ಟೆ – ತಲೆಯ. go bald-headed (ಅಶಿಷ್ಟ)
  • ಎಲ್ಲವನ್ನೂ ಪಣವೊಡ್ಡಿ.
  • ಯಾವ ಪರಿಣಾಮವನ್ನೂ ಲೆಕ್ಕಿಸದೆ.

  • baldachin
    ನಾಮವಾಚಕ
  • (ಹಿಂದೆ) ಕಿಂಕಾಪು; ಹಾಸು ರೇಷ್ಮೆಯಿಂದಲೂ ಹೊಕ್ಕು ಜರತಾರಿಯಿಂದಲೂ ನೇಯುತ್ತಿದ್ದ, ಬೆಲೆ ಬಾಳುವ ಬಟ್ಟೆ.
  • (ಈಗ) (ಪ್ರಾರ್ಥನಾ ವೇದಿಕೆ, ಸಿಂಹಾಸನ, ಮೊದಲಾದವುಗಳ ಮೇಲಣ) ಮೇಲ್ಕಟ್ಟು; ಚಪ್ಪರ; ವಿತಾನ. Figure: baldachin

  • baldaquin
    ನಾಮವಾಚಕ
    = baldachin.


    logo