ಸಂಪ್ರದಾಯವಾದಿ: ತತ್ತ್ವಶಾಸ್ತ್ರ, ಕಲೆ ಯಾ ಸಾಹಿತ್ಯದಲ್ಲಿ ಸಂಪ್ರದಾಯವನ್ನು ಪಾಲಿಸುವವನು ಯಾ ಸಮರ್ಥಿಸುವವನು.
academicism
ನಾಮವಾಚಕ
(ಕಲೆ, ಸಾಹಿತ್ಯ, ಮೊದಲಾದವುಗಳಲ್ಲಿ) ಸಾಂಪ್ರದಾಯಿಕತೆ.
academics
ನಾಮವಾಚಕ
ಜಿಜ್ಞಾಸೆ; ಕೇವಲ ತಾತ್ತ್ವಿಕ, ಚಿಂತನರೂಪದ ಚರ್ಚೆ, ವಾದ.
=academicals.
academism
ನಾಮವಾಚಕ
=academicism.
(ತತ್ತ್ವಶಾಸ್ತ್ರ)ಪ್ಲೇಟೋ ಪಂಥದ ಸಿದ್ಧಾಂತ; ಪ್ಲೇಟೋ ಸ್ಥಾಪಿಸಿದ ವಿದ್ಯಾ ಸಂಸ್ಥೆಯ ದಾರ್ಶನಿಕ ಸಿದ್ಧಾಂತ.
Academy
ನಾಮವಾಚಕ
ಅಕಾದಮಿ; ಪ್ಲೇಟೋ ಎಂಬಾತನು ಅಥೆನ್ಸ್ ಪಟ್ಟಣದ ಸಮೀಪದಲ್ಲಿ ಬೋಧಿಸುತ್ತಿದ್ದ ತೋಟ.
ಪ್ಲೇಟೋ ಸಿದ್ಧಾಂತ.
ಪ್ಲೇಟೋವಿನ ಅನುಯಾಯಿಗಳು.
(ಮುಖ್ಯವಾಗಿ ಸ್ಕಾಟ್ಲಂಡಿನ) ಪ್ರೌಢಶಾಲೆ; (ಅಮೆರಿಕನ್ ಪ್ರಯೋಗ) ಮಾಧ್ಯಮಿಕ ಯಾ ಪ್ರೌಢ ಶಾಲೆ: ಪ್ರಾಥಮಿಕ ಶಾಲೆಗೂ, ವಿಶ್ವವಿದ್ಯಾನಿಲಯಕ್ಕೂ ನಡುವೆ ಇರುವ ಶಿಕ್ಷಣ ಯಾ ತರಪೇತಿನ ವಿದ್ಯಾಸಂಸ್ಥೆ: Royal Military Academy ರಾಯಲ್ ಮಿಲಿಟರಿ ಅಕ್ಯಾಡೆಮಿ; ಇಂಗ್ಲೆಂಡಿನ ವಿಶೇಷ ಸೈನಿಕ ಶಿಕ್ಷಣಶಾಲೆ.
ಅಕಾಡೆಮಿ; ಪಂಡಿತ ಪರಿಷತ್ತು; ವಿದ್ವನ್ಮಂಡಲ; ಸಾಹಿತ್ಯ, ವಿಜ್ಞಾನ, ಶಾಸ್ತ್ರ ಯಾ ಕಲೆಗಳ ಅಭಿವೃದ್ಧಿ ಪ್ರೋತ್ಸಾಹಗಳಿಗಾಗಿ ಏರ್ಪಟ್ಟಿರುವ ಪರಿಣತರ ಒಂದು ಸಂಸ್ಥೆ.
(a Academy) ಅಕಾದಮಿ; ಅಧ್ಯಯನ–ಕೇಂದ್ರ, ಸ್ಥಳ.
Acadian
ಗುಣವಾಚಕ
ಅಕೇಡಿಯದ ಯಾ ಅಕೇಡಿಯಕ್ಕೆ ಸಂಬಂಧಿಸಿದ.
Acadian
ನಾಮವಾಚಕ
ಅಕೇಡಿಯನ್; ಕೆನಡದ ಈಶಾನ್ಯ ಭಾಗದಲ್ಲಿರುವ ನೋವ ಸ್ಕೋಷಿಯದ ನಿವಾಸಿ.