logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tank top
ನಾಮವಾಚಕ
ತೋಳಿಲ್ಲದ, ಬಿಗಿಯಾದ ದುಂಡುಕತ್ತಿನ, ಗಿಡ್ಡನೆಯ ಮೇಲುಡುಗೆ, ಕವಚ.

tank-car
ನಾಮವಾಚಕ
ರೈಲ್ವೆ ನೀರುಗಾಡಿ; ದ್ರವವಸ್ತುಗಳನ್ನು ಕೊಂಡೊಯ್ಯುವ ದೊಡ್ಡ ಟ್ಯಾಂಕುಗಳನ್ನುಳ್ಳ ರೈಲುಗಾಡಿ.

tank-farm
ನಾಮವಾಚಕ
ಪೆಟ್ರೋಲಿಯಂ ದಾಸ್ತಾನು ಮಾಡಿದ ಟ್ಯಾಂಕ್‍ಗಳನ್ನು ಇಟ್ಟ ಪ್ರದೇಶ.

tank-farming
ನಾಮವಾಚಕ
ತೊಟ್ಟಿ ಕೃಷಿ; ಟ್ಯಾಂಕ್‍ ಸಾಗುವಳಿ; ಟ್ಯಾಂಕಿನ ನೀರಿನಲ್ಲಿ, ಮಣ್ಣಿನ ಸಂಪರ್ಕವಿಲ್ಲದೆ, ಗಿಡ ಬೆಳೆಸುವುದು.

tank-trap
ನಾಮವಾಚಕ
ಟ್ಯಾಂಕ್‍ತಡೆ; ಶಸ್ತ್ರಸಜ್ಜಿತ ಟ್ಯಾಂಕನ್ನು ಮುಂದೆ ಹೋಗದಂತೆ ನಿಲ್ಲಿಸಬಲ್ಲ ಅಡಚಣೆ.

tanka
ನಾಮವಾಚಕ
(ಪಾನಿ) ಚುಟಕ ಪದ್ಯ; ಮುಕ್ತಕ; ಒಟ್ಟು ಮೂವತ್ತೊಂದು ಉಚ್ಚಾರಾಂಶಗಳಿದ್ದು, ಐದು ಸಾಲಿನಲ್ಲಿ ಒಂದು ಸಂಪೂರ್ಣ ಘಟನೆ ಯಾ ಮನಃಸ್ಥಿತಿಯನ್ನು ಚಿತ್ರಿಸುವ ಸಣ್ಣ ಕವನ.

tankage
ನಾಮವಾಚಕ
  • ಕಡಾಯಿ ಯಾ ತೊಟ್ಟಿಗಳಲ್ಲಿ ತುಂಬಿಡುವುದು.
  • ಈ ಶೇಖರಣೆಗೆ ಕೊಡಬೇಕಾದ ರುಸುಮು.
  • ಕಡಾಯಿ ಯಾ ತೊಟ್ಟಿಯ ಘನ ಅಳತೆ, ಒಳಪಿಡಿ.
  • ಬಿಸಾಡಿದ ಮೂಳೆ ಮೊದಲಾದವುಗಳಿಂದ ತಯಾರಿಸಿದ ಗೊಬ್ಬರ.

  • tankard
    ನಾಮವಾಚಕ
  • (ಬೆಳ್ಳಿ, ಪೂಟರ್‍ ಮಿಶ್ರಲೋಹ, ಮೊದಲಾದವುಗಳಿಂದ ಮಾಡಿದ, ಬಿಯರಿಗೆ ಬಳಸುವ, ಸಾಮಾನ್ಯವಾಗಿ ಹಿಡಿ ಮತ್ತು ಕೆಲವೊಮ್ಮೆ ಕೀಲಿ, ಮುಚ್ಚಳವಿರುವ)ಜಾಡಿಪಾತ್ರೆ; ಜಾಡಿ (ಯಾಕಾರದ) ಕೊಳಗ. Figure: Tankard
  • ಒಂದು ಜಾಡಿಪಾತ್ರೆ ತುಂಬಉವಷ್ಟು ಅಳತೆಯ ಮದ್ಯ, ಪಾನೀಯ, ಮೊದಲಾದವು: a tankard of ale ಒಂದು ಜಾಡಿ ತುಂಬಉವಷ್ಟು ಮದ್ಯ.

  • tanker
    ನಾಮವಾಚಕ
    ಟ್ಯಾಂಕರು:
  • (ಪೆಟ್ರೋಲಿಯಂ ಮೊದಲಾದವನ್ನು ದೊಡ್ಡ ಪ್ರಮಾಣದಲ್ಲಿ ಸಾಗಿಸುವ) ತೊಟ್ಟಿ ಯಾ ಟ್ಯಾಂಕು (ಇರುವ) ಹಡಗು ಯಾ ವಿಮಾನ.
  • (ಹಾಲು ಮೊದಲಾದವನ್ನು ಸಾಗಿಸಲು) ದೊಡ್ಡ ಟ್ಯಾಂಕುಳ್ಳ ಮೋಟಾರು ವಾಹನ.

  • tankful
    ನಾಮವಾಚಕ
    ತೊಟ್ಟಿ ತುಂಬ; ಕಡಾಯಿ ತುಂಬ; ಟ್ಯಾಂಕು ಭರ್ತಿ.


    logo