logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

October
ನಾಮವಾಚಕ
  • ಅಕ್ಟೋಬರ್‍; ಇಂಗ್ಲಿಷ್‍ ವರ್ಷದ ಹತ್ತನೆಯ ತಿಂಗಳು.
  • (ಪ್ರಾಚೀನ ಪ್ರಯೋಗ) ಅಕ್ಟೋಬರ್‍ನಲ್ಲಿ ಕುದಿಸಿ ತೆಗೆದ ಬಿಯರ್‍ ಯಾ ಮದ್ಯ.

  • Octobrist
    ನಾಮವಾಚಕ
    (ಚರಿತ್ರೆ) ಅಕ್ಟೋಬರ್‍ ಪಕ್ಷೀಯ; 1905ರ ಅಕ್ಟೋಬರ್‍ 30ನೇ ತಾರೀಖಿನ ಇಂಪೀರಿಯಲ್‍ ಕಾನ್‍ಸ್ಟಿಟ್ಯೂಷನಲ್‍ ಮ್ಯಾನಿಹೆಸ್ಟೋವನ್ನು ಬೆಂಬಲಿಸಿದ, ಡ್ಯೂಮ ಎಂಬ ರಷ್ಯದ ಪಾರ್ಲಿಮೆಂಟಿನ, ಮಂದಗಾಮಿ ಪಕ್ಷದ ಸದಸ್ಯ.

    Octobrist
    ಗುಣವಾಚಕ
    (ಚರಿತ್ರೆ) ಅಕ್ಟೋಬರ್‍ ಪಕ್ಷದ; ಡ್ಯೂಮಾದ ಮಂದಗಾಮಿ ಪಕ್ಷಕ್ಕೆ ಸೇರಿದ.

    octocentenary
    ನಾಮವಾಚಕ
    ಅಷ್ಟಶತಮಾನೋತ್ಸವ; ಅಷ್ಟಶತಾಬ್ದಿ; ಎಂಟುನೂರನೆಯ ವರ್ಷದ ಸಮಾರಂಭ ಯಾ ಉತ್ಸವ.

    octocentenary
    ಗುಣವಾಚಕ
    ಅಷ್ಟಶತಮಾನೋತ್ಸವದ ಯಾ ಅದಕ್ಕೆ ಸಂಬಂಧಿಸಿದ.

    octodecimo
    ನಾಮವಾಚಕ
    (ಸಂಕ್ಷಿಪ್ತ18 mo; ಬಹುವಚನ octodecimos). ಹದಿನೆಂಟು ಪುಟೀಯ; ಅಷ್ಟಾದಶಪತ್ರೀಯ:
  • ಕಾಗದ ಹಾಳೆಗಳನ್ನು 18 ಎಲೆಗಳಾಗುವಂತೆ ಮಡಿಸಿದರೆ ಅಗುವ ಪುಟ ಯಾ ಪುಸ್ತಕದ ಅಳತೆ.
  • ಅಷ್ಟಾದಶ ಪತ್ರಾಕಾರದ ಪುಸ್ತಕ ಯಾ ಹಾಳೆ.

  • octogenarian
    ನಾಮವಾಚಕ
    ಎಂಬತ್ತರ ದಶಕದವನು; ಎಂಬತ್ತರಿಂದ ಎಂಬತ್ತೊಂಬತ್ತು ವರ್ಷದೊಳಗಿನ ವಯಸ್ಸಿನವನು.

    octogenarian
    ಗುಣವಾಚಕ
    ಎಂಬತ್ತರ ದಶಕದ; ಎಂಬತ್ತರಿಂದ ಎಂಬತ್ತೊಂಬತ್ತು ವರ್ಷ ವಯಸ್ಸಿನ.

    octonal
    ಗುಣವಾಚಕ
    (ನಾಣ್ಯ ಪದ್ಧತಿ, ಸಂಖ್ಯಾಪದ್ಧತಿ, ಮೊದಲಾದವುಗಳ ವಿಷಯದಲ್ಲಿ) ಅಷ್ಟಕದ; ಎಂಟರ ಯಾ ಎಂಟೆಂಟರ.

    octonarian
    ಗುಣವಾಚಕ
    (ಛಂದಸ್ಸು) (ಪಂಕ್ತಿಯ ವಿಷಯದಲ್ಲಿ) ಎಂಟು ಗಣಗಳುಳ್ಳ.


    logo