logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mako
ನಾಮವಾಚಕ
ಒಂದು ಬಗೆಯ ನೀಲಿ ಷಾರ್ಕ್‍ ಮೀನು.

mako
ನಾಮವಾಚಕ
ಮ್ಯಾಕೋ; ಅರಿಸ್ಟೊಟಲಿಯ ಸೆರಾಟ ಕುಲದ, ಕಡು ಕೆಂಪು ಬಣ್ಣದ ಕಾಯಿಗೊಂಚಲುಗಳನ್ನೂ ಕಡು ಕೆಂಪು ಬಣ್ಣದ ದೊಡ್ಡ ಹೂಗೊಂಚಲುಗಳನ್ನೂ ಬಿಡುವ, ನ್ಯೂಸಿಲೆಂಡಿನ ಒಂದು ಸಣ್ಣ ಮರ.

mal de mer
ನಾಮವಾಚಕ
ಕಡಲಬೇನೆ; ಸಮುದ್ರ ರೋಗ; ಸಮುದ್ರಯಾನದಲ್ಲಿ ಉಂಟಾಗುವ ಓಕರಿಕೆ ಯಾ ಪಿತ್ತೋಲ್ಬಣ.

mal-
ಸಮಾಸ ಪೂರ್ವಪದ
  • ಕೆಟ್ಟ; ದುರ್‍-; ಕೆಟ್ಟದಾಗಿ: maltreat.
  • (= $^1$un-), ಅ-; ನಿರ್‍-; -ಇಲ್ಲದ; -ರಹಿತ; ಶೂನ್ಯ; -ಅಭಾವ: maladroit.
  • ದೋಷಪೂರಿತ(ವಾಗಿ): malfunction.

  • Mal.
    ಸಂಕ್ಷಿಪ್ತ
    Malachi (ಬೈಬಲಿನ ಹಳೆಯ ಒಡಂಬಡಿಕೆ).

    mala fide
    ಕ್ರಿಯಾವಿಶೇಷಣ
    ದುರುದ್ದೇಶದಿಂದ; ದುರಭಿಪ್ರಾಯದಿಂದ; ದುರಭಿಸಂಧಿಯಿಂದ; ಕೇಡಿಗ ಬುದ್ಧಿಯಿಂದ; ದುರ್ಬುದ್ಧಿಯಿಂದ.

    mala fide
    ಗುಣವಾಚಕ
    ದುರುದ್ದೇಶದ; ದುರುದ್ದೇಶದಿಂದ ಕೂಡಿದ; ಕೇಡಿಗ ಬುದ್ಧಿಯಿಂದ ಮಾಡಿದ; ದುರ್ಬುದ್ಧಿಯ; ದುರಭಿಪ್ರಾಯದ; ದುರಭಿಸಂಧಿಯ.

    malabsorption
    ನಾಮವಾಚಕ
    ಅರೆಜೀರ್ಣತೆ; ಅಪೂರ್ಣಜೀರ್ಣಿಕೆ; ಚಿಕ್ಕ ಕರುಳಿನಲ್ಲಿ ಆಹಾರ ಪದಾರ್ಥ ಸಂಪೂರ್ಣವಾಗಿ ಜೀರ್ಣವಾಗದಿರುವಿಕೆ.

    malacca
    ನಾಮವಾಚಕ
    ಮಲಾಕ ಬೆತ್ತ; ಮಲಾಕ ದ್ವೀಪದಲ್ಲಿ ಬೆಳೆಯುವ ತಾಳೆಯ ಕಾಂಡದಿಂದ ಮಾಡಿದ, ಅಚ್ಚಕಂದು ಬಣ್ಣದ ಕೈ ಬೆತ್ತ.

    malacca cane
    ನಾಮವಾಚಕ
    = malacca.


    logo