logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lampshade
ನಾಮವಾಚಕ
ದೀಪದ ಮುಸುಕು; ದೀಪದ ಮರೆ; ದೀಪದ ತೀವ್ರತೆಯನ್ನು ತಗ್ಗಿಸಲು ಯಾ ಅದರ ಬೆಳಕನ್ನು ಒಂದೆಡೆಗೆ ನಿರ್ದೇಶಿಸಲು ಬಳಸುವ ಅರೆಪಾರಕ ಮರೆ, ಮುಸುಕು.

Lancastrian
ನಾಮವಾಚಕ
  • (ವಾಯುವ್ಯ ಇಂಗ್ಲೆಂಡಿನ) ಲ್ಯಾಂಕಷೈರ್‍ನವನು; ಲ್ಯಾಂಕ್ಯಾಸ್ಟರಿನವನು ಯಾ ಅಲ್ಲಿ ಹುಟ್ಟಿದವನು.
  • (ಚರಿತ್ರೆ) ಲ್ಯಾಂಕ್ಯಾಸ್ಟರ್‍ ಪಕ್ಷದವನು; ಇಂಗ್ಲೆಂಡಿನ ಗುಲಾಬಿ ಯುದ್ಧಗಳಲ್ಲಿ, ಕೆಂಪುಗುಲಾಬಿ ಪಕ್ಷಕ್ಕೆ ಯಾ ಲ್ಯಾಂಕಾಸ್ಟರ್‍ ಡ್ಯೂಕನಾದ ಜಾನ್‍ ಆಹ್‍ ಗಾಂಟ್‍ ಎಂಬುವವನ ಪಕ್ಷಕ್ಕೆ ಸೇರಿದವನು.

  • Lancastrian
    ಗುಣವಾಚಕ
  • (ಇಂಗ್ಲೆಂಡಿನ) ಲ್ಯಾಂಕಷೈರಿನ; ಲ್ಯಾಂಕಾಸ್ಟರಿನ.
  • ಇಂಗ್ಲೆಂಡಿನ ಗುಲಾಬಿ ಯುದ್ಧಗಳಲ್ಲಿ (ವಾರ್‍ ಆಹ್‍ ದಿ ರೋಸಸ್‍) ಕೆಂಪು ಗುಲಾಬಿ (ರೆಡ್‍ ರೋಸ್‍) ಪಕ್ಷಕ್ಕೆ ಯಾ ಜಾನ್‍ ಆಹ್‍ ಗಾಂಟ್‍ ಎಂಬುವನ ಪಕ್ಷದ ಯಾ ಪಕ್ಷಕ್ಕೆ ಸೇರಿದ.

  • lance
    ನಾಮವಾಚಕ ನುಡಿಗಟ್ಟು
    break a lance with (ಸಾಮಾನ್ಯವಾಗಿ for ಯಾ with ಒಡನೆ) ವಾದಿಸು; ವಾದ ಮಾಡು.
  • ಈಟಿ; ಭಲ್ಲೆ; ಭರ್ಜಿ; ಶೂಲ; ಭಲ್ಲೆಯ.
  • (ಮೀನನ್ನು ತಿವಿದು ಕೊಲ್ಲಲು ಯಾ ಈಟಿಗಾಳದಿಂದ ಹಿಡಿದು ತಿಮಿಂಗಿಲವನ್ನು ಕೊಲ್ಲಲು ಬಳಸುವ) ಶೂಲ; ಭಲ್ಲೆಯಂಥ ಆಯುಧ.
  • (ಲೋಹವನ್ನು ಸುಡಲು ಆಮ್ಲಜನಕವನ್ನು ಒದಗಿಸುವ) ಲೋಹದ ಕೊಳವೆ.
  • = lancer.

  • lance
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಭೇದಿಸಿ ಮುಂದೆ ಹೋಗು; ಕತ್ತರಿಸಿ ಮುನ್ನುಗ್ಗು: bombers buzz and lance towards the shore ಬಾಂಬರ್‍ ವಿಮಾನಗಳು ರೊಯ್‍ ಗುಡುತ್ತಾ ತೀರದ ಕಡೆಗೆ ಭೇದಿಸಿ ಮುನ್ನುಗ್ಗುವುವು.
  • (ಶಸ್ತ್ರವೈದ್ಯ)
    1. ಶೂಲದಿಂದ ಚುಚ್ಚು; ಈಟಿಶಸ್ತ್ರದಿಂದ ಇರಿ.
    2. ಶೂಲದಿಂದ ಛೇದಿಸು; ಶೂಲದಿಂದ ಚುಚ್ಚಿ, ಕೊಯ್ದು ಯಾ ಕತ್ತರಿಸಿ – ತೆರೆ, ತೆರೆಸು.
  • ಭಲ್ಲೆಯಿಂದ – ತಿವಿ, ಇರಿ, ಚುಚ್ಚು.
  • (ಕಾವ್ಯಪ್ರಯೋಗ) ಎಸೆ; ಬೀರು; ಬಿಸಾಡು.

  • lance-bombardier
    ನಾಮವಾಚಕ
    ಲಾನ್ಸ್‍ ಬಾಂಬರ್ಡಿಯರ್‍; ಪದಾತಿ ಸೈನ್ಯದ ಲಾನ್ಸ್‍ ಕಾರ್ಪೊರಲ್‍ಗೆ ಸಂವಾದಿಯಾದ, ಇಂಗ್ಲೆಂಡಿನ ರಾಯಲ್‍ ಆರ್ಟಿಲರಿಯ ಒಂದು ಹುದ್ದೆ.

    lance-corporal
    ನಾಮವಾಚಕ
    ಲಾನ್ಸ್‍ಕಾರ್ಪೊರಲ್‍; ಸಾಮಾನ್ಯ ಸಿಪಾಯಿಯ ಸಂಬಳದ ಮೇಲೆ ಹಂಗಾಮಿಯಾಗಿ ಕಾರ್ಪೊರಲ್‍ ಕೆಲಸ ಮಾಡುತ್ತಿರುವ ನಾನ್‍ ಕಮಿಷನ್ಡ್‍ ಅಧಿಕಾರಿ.

    lance-fish
    ನಾಮವಾಚಕ
    = launce.

    lance-jack
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)

    lance-sergeant
    ನಾಮವಾಚಕ
    ಲಾನ್ಸ್‍ ಸಾರ್ಜಂಟ್‍; (ಹಂಗಾಮಿಯಾಗಿ) ಸಾರ್ಜಂಟ್‍ ಕೆಲಸ ನೋಡುತ್ತಿರುವ ಕಾರ್ಪೊರಲ್‍.


    logo