(ಜಾತ್ಯೇಕವಚನದಲ್ಲಿ) ಪ್ರತಿಮೆಗಳು; ವಿಗ್ರಹಗಳು; ಮೂರ್ತಿಗಳು: a statue which the enemies of imagery have thrown down ವಿಗ್ರಹಶತ್ರುಗಳು ಕೆಳಗೆ ಕೆಡವಿರುವ ಒಂದು ಪ್ರತಿಮೆ.
ಪ್ರತಿಮಾಶಿಲ್ಪ; ಮೂರ್ತಿಶಿಲ್ಪ; ವಿಗ್ರಹಕೆತ್ತನೆ: godlike works in imagery ಪ್ರತಿಮಾಶಿಲ್ಪದ ದಿವ್ಯ ಕೃತಿಗಳು.
(ಜಾತ್ಯೇಕವಚನದಲ್ಲಿ) (ಮಾನಸಿಕ) ಪ್ರತಿಮೆಗಳು; ಕಲ್ಪನೆಗಳು.
(ಸಾಹಿತ್ಯ ಯಾ ಕಾವ್ಯದಲ್ಲಿನ) ಪ್ರತಿಮೆ; ಅಲಂಕಾರ; ಆಲಂಕಾರಿಕ – ನಿರೂಪಣೆ, ಚಿತ್ರಣ: the whole of it is rich in thought and imagery ಅದೆಲ್ಲವೂ ವಿಚಾರ ಮತ್ತು ಅಲಂಕಾರಗಳಿಂದ ಶ್ರೀಮಂತವಾಗಿದೆ.
imaginable
ಗುಣವಾಚಕ
ಊಹನೀಯ; ಊಹಿಸಬಲ್ಲ; ಭಾವಿಸಬಹುದಾದ; ಕಲ್ಪಿಸಿಕೊಳ್ಳಬಲ್ಲ: the greatest difficulty imaginable ಊಹಿಸಬಹುದಾದ ಅತ್ಯಂತ ದೊಡ್ಡ ತೊಂದರೆ. took all the trouble imaginable ಎಷ್ಟು ಕಲ್ಪಿಸಿಕೊಳ್ಳಬಹುದೋ ಅಷ್ಟೂ ತೊಂದರೆಯನ್ನು ತೆಗೆದುಕೊಂಡ.
imaginably
ಕ್ರಿಯಾವಿಶೇಷಣ
ಊಹಿಸಬಹುದಾದಂತೆ.
imaginal
ಗುಣವಾಚಕ
ಪ್ರತಿಮೆಯ ಯಾ ಪ್ರತಿಮೆಗಳ.
(ಕೀಟವಿಜ್ಞಾನ) (ವಿವಿಧ ಅವಸ್ಥೆಗಳಾದ ತರುವಾಯ ಅಂತ್ಯದಲ್ಲಿ ರೂಪುಗೊಳ್ಳುವ) ಪರಿಪೂರ್ಣ ಕೀಟದ; ಕೀಟದ ಅಂತಿಮ ಸಂಪೂರ್ಣ ಸ್ಥಿತಿಯ.
imaginarily
ಕ್ರಿಯಾವಿಶೇಷಣ
(ಕೇವಲ) ಕಾಲ್ಪನಿಕವಾಗಿ; ಭಾವನೆಯಲ್ಲಿ ಮಾತ್ರ.
imaginary
ಗುಣವಾಚಕ
ಕಲ್ಪಿತ; ಕೇವಲ ಕಾಲ್ಪನಿಕ, ಕಲ್ಪನೆಯ, ಊಹೆಯ; ಕಲ್ಪನಾ ಮಾತ್ರದ; ಭಾವನಾ ಮಾತ್ರದ; ಕಲ್ಪನೆಯಲ್ಲಿ ಯಾ ಭಾವನೆಯಲ್ಲಿ ಮಾತ್ರ ಇರುವ: an imaginary illness ಕಾಲ್ಪನಿಕ ಕಾಯಿಲೆ.
(ಗಣಿತ) ಕಾಲ್ಪನಿಕ; ಯಾವುದೇ ಋಣ ಸಂಖ್ಯೆಯ ವರ್ಗಮೂಲವಾಗಿರುವ (ಗ್ರಾಹಿನಲ್ಲಿ ಇದನ್ನು ನೈಜ ಸಂಖ್ಯೆಯ ಅಕ್ಷಕ್ಕೆ ಸಾಮಾನ್ಯವಾಗಿ ಲಂಬವಾಗಿರುವಂತೆ ತೋರಿಸಲಾಗುತ್ತದೆ.).
imagination
ನಾಮವಾಚಕ
ಭಾವಿಸಿಕೊಳ್ಳುವುದು; ಕಲ್ಪಿಸಿಕೊಳ್ಳುವುದು.
ಕಲ್ಪನಾಶಕ್ತಿ; ಭಾವನಾ ಶಕ್ತಿ; ಎದುರಿಗಿರದ ವಸ್ತುಗಳ ಚಿತ್ರಗಳನ್ನು ಯಾ ಭಾವನೆಗಳನ್ನು ಕಲ್ಪಿಸಿಕೊಳ್ಳುವ ಮನಶ್ಯಕ್ತಿ.
ಕಲ್ಪನಾ ವಿಲಾಸ; ಚಿತ್ರವಿಚಿತ್ರ ಕಲ್ಪನೆ, ಭಾವನೆ.
ಭಾವನೆ; ಕಲ್ಪನೆ; ಮನಸ್ಸಿನಲ್ಲಿ ಭಾವಿಸಿಕೊಂಡಿದ್ದು: the ghost was but your imagination ಆ ಭೂತ ಕೇವಲ ನಿನ್ನ ಕಲ್ಪನೆ.
ವಿಭಾವನೆ; ಪ್ರತಿಭೆ; ಬುದ್ಧಿಯ – ಕಲ್ಪನಾ ಶಕ್ತಿ, ಸೃಜನ ಶಕ್ತಿ, ಸೃಷ್ಟಿ ಶಕ್ತಿ.