ಹಗಲು ಕೋಣೆ; ಹಗಲು ಹೊತ್ತು ಮಾತ್ರ ಎಲ್ಲರೂ ಬಳಸುವ ಕೋಣೆ(ಮುಖ್ಯವಾಗಿ ಬೋರ್ಡಿಂಗ್ ಶಾಲೆಗಳಲ್ಲಿ ಇರುವ ಹಜಾರ ಯಾ ದೊಡ್ಡ ಕೋಣೆ).
day-school
ನಾಮವಾಚಕ
ಹಗಲು ಶಾಲೆ; ವಾರದ ದಿನಗಳಲ್ಲಿ, ಅಂದರೆ ಭಾನುವಾರ ಬಿಟ್ಟು ಉಳಿದ ದಿನಗಳಲ್ಲಿ, ಹಗಲು ಹೊತ್ತು ನಡೆಯುವ ಶಾಲೆ.
day-spring
ನಾಮವಾಚಕ
(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಮುಂಜಾನೆ; ಉಷಃಕಾಲ; ಅರುಣೋದಯ; ಪ್ರಭಾತ; ಸೂರ್ಯೋದಯ; ಪ್ರಾತಃಕಾಲ.
day-star
ನಾಮವಾಚಕ
ಬೆಳ್ಳಿ (ಚುಕ್ಕಿ); ಸೂರ್ಯೋದಯಕ್ಕೆ ಮುಂಚೆ ಪೂರ್ವದಲ್ಲಿ ಕಾಣುವ ಶುಕ್ರಗ್ರಹ ಯಾ ಬೇರೆ ಗ್ರಹ ಯಾ ಉಜ್ಜ್ವಲ ನಕ್ಷತ್ರ.
ಸೂರ್ಯ; ದಿನಮಣಿ.
day-ticket
ನಾಮವಾಚಕ
ದಿನದ ಟಿಕೆಟ್ಟು; ಒಂದೇ ದಿನದಲ್ಲಿ ಹೋಗಿಬರಲು ಅನುಕೂಲಿಸುವ ಪ್ರಯಾಣದ ಟಿಕೆಟ್ಟು.
day-women
ನಾಮವಾಚಕ
ಹೈನುಗಿತ್ತಿ; ಡೇರಿಯಲ್ಲಿ ಕೆಲಸ ಮಾಡುವವಳು.
Dayak
ನಾಮವಾಚಕ
= Dyak.
daybreak
ನಾಮವಾಚಕ
ಬೆಳಗು; ಮುಂಜಾವು; ಹೊತ್ತಾರೆ; ಉಷಃಕಾಲ.
daylight
ನಾಮವಾಚಕ
ನುಡಿಗಟ್ಟು
ಹಗಲ ಬೆಳಕು; ಸೂರ್ಯಪ್ರಕಾಶ.
ಬೆಳಕು; ಪ್ರಕಾಶ ; ಬಹಿರಂಗ; ಪ್ರಕಟ: it did not come to daylight ಅದು ಬೆಳಕಿಗೆ ಬರಲಿಲ್ಲ.
ಮುಂಬೆಳಕು; ಉಷಃಕಾಲ; ಬೆಳಗು: before daylight ಉಷಃಕಾಲಕ್ಕೆ ಮೊದಲು.
ಗೋಚರಾಂತರ; ದೃಶ್ಯತೆರಪು; ದೋಣಿ ಜೂಜಿನಲ್ಲಿ ಒಂದು ದೋಣಿಗೂ ಇನ್ನೊಂದು ದೋಣಿಗೂ ಇರುವ, ಕುದುರೆ ಸವಾರನಿಗೂ ಜೀನಿಗೂ ನಡುವೆ ಬಿಟ್ಟಿರುವ, ಮದ್ಯದ ಗಾಜುಬಟ್ಟಲಿನಲ್ಲಿ ಮದ್ಯದ ಮಟ್ಟಕ್ಖೂ ಬಟ್ಟಲಿನ ಅಂಚಿಗೂ ನಡುವೆ ಕಣ್ಣಿಗೆ ಕಾಣುವಂತಿರುವ – ತೆರಪು, ಅಂತರ, ಅವಕಾಶ.
(ಬಹುವಚನದಲ್ಲಿ ಅಶಿಷ್ಟ) ಒಳ ಅವಯವಗಳು; ಒಳಾಂಗಗಳು; ಅಂತರಾಂಗಳು: scare the daylights out of ಒಬ್ಬನ ಒಳಾಂಗಗಳು ಹೊರಬರುವಂತೆ – ಬೆದರಿಸು, ಹೆದರಿಸು.