logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

callow
ಗುಣವಾಚಕ
  • (ಹಕ್ಕಿಯ ವಿಷಯದಲ್ಲಿ) ಗರಿಗಳಿರದ; ಗರಿ ಮೂಡಿರದ.
  • (ರೂಪಕವಾಗಿ) ಎಳಕು; ಎಳಸು; ಅಪಕ್ವ; ಅನುಭವ, ವಿವೇಚನೆ, ಗ್ರಹಣಶಕ್ತಿ ಮೊದಲಾದವುಗಳಿಲ್ಲದ.
  • (ಐರಿಷ್‍) ಜವುಗಿನ; ಜವುಗಾದ; ತಗ್ಗಿನಲ್ಲಿದ್ದು ನೀರು ನಿಂತಿರುವ.

  • callow
    ನಾಮವಾಚಕ
    (ಐರಿಷ್‍) ಜವುಗು ಮೈದಾನ; ತಗ್ಗಿನಲ್ಲಿದ್ದು ನೀರು ನಿಂತಿರುವ ಹುಲ್ಲುಗಾವಲು.

    callowly
    ಕ್ರಿಯಾವಿಶೇಷಣ
  • (ಹಕ್ಕಿಯ ವಿಷಯದಲ್ಲಿ) ಗರಿಗಳಿಲ್ಲದಂತೆ.
  • (ರೂಪಕವಾಗಿ) ಎಳಸಾಗಿ; ಅನುಭವವಿಲ್ಲದೆ; ಅಪಕ್ವವಾಗಿ; ಪ್ರೌಢತೆಯಿಲ್ಲದೆ.

  • callowness
    ನಾಮವಾಚಕ
  • (ಹಕ್ಕಿಯ ವಿಷಯದಲ್ಲಿ) ಗರಿಗಳಿಲ್ಲದಿರುವಿಕೆ.
  • (ರೂಪಕವಾಗಿ) ಅಪಕ್ವತೆ; ಅನುಭವರಾಹಿತ್ಯ; ಎಳಸಾಗಿರುವಿಕೆ; ಪ್ರೌಢತೆಯಿಲ್ಲದಿರುವಿಕೆ.

  • calluna
    ನಾಮವಾಚಕ
    ಕಲೂನ ಕುಲದ ಕುರುಚಲು ಗಿಡ.

    callus
    ನಾಮವಾಚಕ
  • (ರೋಗಶಾಸ್ತ್ರ) ಜಡ್ಡು; ದಡ್ಡು; ಕಿಣ; ಗೆಡ್ಡೆ; ಗಂಟು; ಚರ್ಮದ ಯಾ ಮೃದು ಊತಕದ ಗಾಯ ಮಾಗುವಾಗ ಗಡಸುಗಟ್ಟಿದ ಭಾಗ.
  • (ಶರೀರ ವಿಜ್ಞಾನ) ಗಂಟುಮೂಳೆ; ಮುರಿದ ಮೂಳೆಗಳು ಕೂಡಿಕೊಳ್ಳುವಾಗ ರೂಪುಗೊಳ್ಳುವ ಮೂಳೆಯಂಥ ವಸ್ತು.
  • (ಸಸ್ಯವಿಜ್ಞಾನ) ಗಾಯವಾದ ಭಾಗದಲ್ಲಿ ಬೆಳೆಯುವ ಹೊಸ ಊತಕ.

  • calm
    ನಾಮವಾಚಕ
  • (ಹವೆ, ಗಾಳಿ, ಸಮುದ್ರ, ಮನಸ್ಸು, ಸಾಮಾಜಿಕ ಯಾ ರಾಜಕೀಯ ಸ್ಥಿತಿ ಮೊದಲಾದವುಗಳ) ನಿಶ್ಚಲತೆ; ಸ್ತಬ್ಧತೆ; ಅಚಲತೆ; ಶಾಂತಿ; ಪ್ರಶಾಂತತೆ.
  • ಗಾಳಿಯಿಲ್ಲದ ಸಮಯ; ನಿರ್ವಾತ ಕಾಲ.

  • calm
    ಗುಣವಾಚಕ
    (ರೂಪಕವಾಗಿ ಸಹ) ನಿಶ್ಚಲ; ಸ್ತಬ್ಧ; ಅಚಲ; ಪ್ರಶಾಂತವಾದ.
  • ನಿರ್ವಾತ; ಗಾಳಿಯಿಲ್ಲದ.
  • (ಆಡುಮಾತು) ಆತ್ಮವಿಶ್ವಾಸದ; ಆತ್ಮಪ್ರತಿಷ್ಠೆಯ; ಧಾರ್ಷ್ಟ್ಯದ: pretty calm of him! ಅವನಿಗೆಷ್ಟು ಧಾರ್ಷ್ಟ್ಯ!

  • calm
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    calm down = 3calm (ಅಕರ್ಮಕ ಕ್ರಿಯಾಪದ).
  • (ಗಾಳಿ, ಸಮುದ್ರ ಮೊದಲಾದವನ್ನು) ಶಾಂತಗೊಳಿಸು; ಸ್ತಬ್ಧಗೊಳಿಸು; ನಿಶ್ಚಲಗೊಳಿಸು.
  • (ಮನಸ್ಸು, ರಾಜಕೀಯಸ್ಥಿತಿ ಮೊದಲಾದವನ್ನು) ಪ್ರಶಾಂತಗೊಳಿಸು; ಸಮಾಧಾನಗೊಳಿಸು; ಶಮನ ಮಾಡು.

  • calmative
    ಗುಣವಾಚಕ
    (ವೈದ್ಯಶಾಸ್ತ್ರ) (ಔಷಧ ಮೊದಲಾದವುಗಳ ವಿಷಯದಲ್ಲಿ) ಶಾಮಕ; ಶಮನಕಾರಿ; ತಣಿಸುವ.


    logo