logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

balance sheet
ನಾಮವಾಚಕ
(ಮುಖ್ಯವಾಗಿ ಸಾರ್ವಜನಿಕ ಕಂಪನಿಗಳ) ಜಮಾಖರ್ಚುಪಟ್ಟಿ; ಆಯವ್ಯಯ ತಃಖ್ತೆ; ನಿರ್ದಿಷ್ಟ ದಿನಾಂಕದಲ್ಲಿ ವ್ಯಕ್ತಿಯ ಯಾ ವ್ಯಾಪಾರ ಸಂಸ್ಥೆಯ ಆಸ್ತಿಪಾಸ್ತಿ, ಸಾಲಸೋಲ, ಜಮಾಖರ್ಚು ಮತ್ತು ನಿವ್ವಳ ಮೌಲ್ಯಗಳನ್ನು ತೋರಿಸುವ ಪಟ್ಟಿ.

balance spring
ನಾಮವಾಚಕ
ಗಡಿಯಾರದ ಸುರುಳಿ; ಹೇರ್‍ಸ್ಪ್ರಿಂಗು; ಗಡಿಯಾರದ ತುಲಾಚಕ್ರವನ್ನು ನಿಯಂತ್ರಿಸುವ ಸೂಕ್ಷ್ಮವಾದ ಸುರುಳಿ ತಂತಿ.

balance-wheel
ನಾಮವಾಚಕ
(ಗಡಿಯಾರದ) ತೂಗ್ಗಾಲಿ; ತುಲಾಚಕ್ರ; ಗತಿ – ನಿಯಂತ್ರಕ, ಚಕ್ರ.

balanced
ಗುಣವಾಚಕ
(ಪ್ರಮಾಣ ಮೊದಲಾದವುಗಳಲ್ಲಿ) ಸಮತೂಕದ; ಸಮತೋಲದ: balanced diet ಸಮಪ್ರಮಾಣದ ಯಾ ಸಮತೂಕದ ಆಹಾರ.

balancer
ನಾಮವಾಚಕ
  • ಸಮತೂಕ; ಸಮನಾಗಿಸುವ ವ್ಯಕ್ತಿ ಯಾ ವಸ್ತು.
  • ಡೊಂಬ; ದೊಂಬರಾಟದವನು; ಗಣೆಯಾಡಿ.

  • balas
    ನಾಮವಾಚಕ
    (ಭೂವಿಜ್ಞಾನ) ಕೆಂಪು ಸ್ಪಿನಲ್‍; ತಿಳಿಗುಲಾಬಿ ವರ್ಣದ ಮಾಣಿಕ್ಯದಂಥ ಕಲ್ಲು.

    balata
    ನಾಮವಾಚಕ
    (ಸಸ್ಯವಿಜ್ಞಾನ)
  • ಬಲಾಟ (ಮರ); ಬಲಾಟಾವನ್ನು ಕೊಡುವ, ಮಧ್ಯ ಅಮೆರಿಕದ ಮರ.
  • ಬಲಾಟ; ಯಂತ್ರ ಪಟ್ಟಿಗಳು, ಗಾಲ್‍ ಚೆಂಡು, ಮೊದಲಾದವುಗಳನ್ನು ತಯಾರಿಸಲು ಬಳಸುವ, ರಬ್ಬರಿನಂಥ, ‘ಗಟಪರ್ಚ’ದ ಬದಲು ಬಳಸಬಹುದಾದ, ಬಲಾಟ ಮರದ ಒಣಗಿಸಿದ ಹಾಲು ಯಾ ರಸ.

  • balausta
    ನಾಮವಾಚಕ
    ದಾಳಿಂಬೆ ಹಣ್ಣು.

    balaustine
    ನಾಮವಾಚಕ
    (ಔಷಧಿಯಲ್ಲಿ ಬಳಸುವ) ಕಾಡು ದಾಳಿಂಬೆಯ ಒಣಗಿದ ಹೂಗಳು.

    balaustine
    ಗುಣವಾಚಕ
    ದಾಳಿಂಬೆಯ; ದಾಳಿಂಬೆಗೆ ಸಂಬಂಧಿಸಿದ.


    logo