logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

academic
ನಾಮವಾಚಕ
  • ಪ್ರಾಚೀನ ಪ್ಲೇಟೋಪಂಥಿ; ಪ್ಲೇಟೋ ಮತಾನುಯಾಯಿಗಳಲ್ಲಿ ಪ್ರಾಚೀನ ಸಂಪ್ರದಾಯದವನು.
  • ಕಾಲೇಜು ಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಯಾ ಅಧ್ಯಾಪಕ.

  • academic dress
    ನಾಮವಾಚಕ
    ಶಾಲೆ ಉಡುಪು; ಶಾಲೆ ಸಮವಸ್ತ್ರ; ವಿದ್ಯಾಸಂಸ್ಥೆಯ ಲಾಂಛನವಾದ ಉಡುಪು.

    academic freedom
    ನಾಮವಾಚಕ
  • ಅಧ್ಯಾಪನ ಸ್ವಾತಂತ್ರ್ಯ; ಬೋಧನ ಸ್ವಾತಂತ್ರ್ಯ; ಸತ್ಯವೆಂದು ಕಂಡದ್ದನ್ನು ಯಾವುದೇ ರೀತಿಯ ಅಡ್ಡಿ, ಸ್ಥಾನ ಹಾನಿ ಯಾ ವಿರುದ್ಧ ಕ್ರಮಗಳ ಹೆದರಿಕೆಯಿಲ್ಲದೆ ಅಧ್ಯಾಪಕರು ಬೋಧಿಸುವ ಸ್ವಾತಂತ್ರ್ಯ.
  • ಶಿಕ್ಷಣ ಸ್ವಾತಂತ್ರ್ಯ; ಅಧ್ಯಯನ ಸ್ವಾತಂತ್ರ್ಯ; ಯಾವುದೇ ರೀತಿಯ ಅಡ್ಡಿ ಅಡಚಣೆಗಳಿಲ್ಲದೆ ತನಗೆ ಬೇಕಾದ ವಿಷಯವನ್ನು ಕಲಿಯಲು ವಿದ್ಯಾರ್ಥಿಗೆ ಇರುವ ಸ್ವಾತಂತ್ರ್ಯ.

  • academic preparation
    ನಾಮವಾಚಕ
    = academic training.

    academic training
    ನಾಮವಾಚಕ
    ಶೈಕ್ಷಣಿಕ–ತರಬೇತು, ತಯಾರಿ; ಮುಖ್ಯವಾಗಿ ಕಾಲೇಜು ಯಾ ವಿಶ್ವವಿದ್ಯಾನಿಲಯದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪಡೆದ ಶಿಕ್ಷಣ, ತರಬೇತು, ಸಿದ್ಧತೆ.

    academic year
    ನಾಮವಾಚಕ
    ಶೈಕ್ಷಣಿಕ ವರ್ಷ; ಶಾಲೆ ಯಾ ಶಿಕ್ಷಣ ಸಂಸ್ಥೆಗಳ ವರ್ಷ ಯಾವುದೇ ಶಿಕ್ಷಣ ಸಂಸ್ಥೆಯು ಒಂದು ವರ್ಷದಲ್ಲಿ ಕೆಲಸ ಮಾಡುವ ಅವಧಿ.

    academical
    ಗುಣವಾಚಕ
    = academic(8).

    academical
    ನಾಮವಾಚಕ
    = academicals.

    academically
    ಕ್ರಿಯಾವಿಶೇಷಣ
  • ವಿದ್ವತ್ಪೂರ್ಣವಾಗಿ; ಪಾಂಡಿತ್ಯಪೂರ್ಣವಾಗಿ.
  • ಅವ್ಯಾವಹಾರಿಕವಾಗಿ.

  • academicals
    ನಾಮವಾಚಕ
    ವಿಶ್ವವಿದ್ಯಾನಿಲಯದ ಸಮವಸ್ತ್ರ; ವಿಶ್ವವಿದ್ಯಾನಿಲಯದ (ಲಾಂಛನವಾದ) ಉಡುಪು.


    logo