logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unblock
ಸಕರ್ಮಕ ಕ್ರಿಯಾಪದ
  • (ಮುಖ್ಯವಾಗಿ ಕೊಳವೆ, ಚರಂಡಿ, ಮೊದಲಾದವುಗಳಲ್ಲಿನ) ಅಡೆತಡೆಗಳನ್ನು ತೆಗೆದುಹಾಕು.
  • (ಇಸ್ಪೀಟು)(ಜೊತೆಗಾರನ ಒಂದೇ ರಂಗಿನ ಎಲೆಗಳ ದೊಡ್ಡ ಸರಣಿಯನ್ನು ಕೆಡಿಸದಿರುವುದಕ್ಕಾಗಿ) ಹೆಚ್ಚು ಬೆಲೆಯ ಎಲೆ ಇಳಿ, ಹಾಕು ( ಅಕರ್ಮಕ ಕ್ರಿಯಾಪದ ಸಹ).

  • unblown
    ಗುಣವಾಚಕ
  • ಊದದ; ಉಬ್ಬಿಸದ.
  • (ಪ್ರಾಚೀನ ಪ್ರಯೋಗ) (ಹೂವಿನ ವಿಷಯದಲ್ಲಿ) ಅರಳಿಲ್ಲದ; ಅವಿಕಸಿತವಾದ.

  • unblushing
    ಗುಣವಾಚಕ
  • ನಿರ್ಲಜ್ಜ; ಲಜ್ಜೆಗೆಟ್ಟ: the unblushing corruption of some politicians ಕೆಲವು ರಾಜಕಾರಣಿಗಳ ನಿರ್ಲಜ್ಜ ಭ್ರಷ್ಟಾಚಾರ.
  • ಮುಖ ಕೆಂಪೇರದ; ವಿವರ್ಣವಾಗದ.
  • ನಾಚದ; ನಾಚಿಕೆಯಿಲ್ಲದ.

  • unbolt
    ಸಕರ್ಮಕ ಕ್ರಿಯಾಪದ
    (ಬಾಗಿಲಿನ) ತಾಪಾಳು ಮೊದಲಾದವನ್ನು ಸಡಿಲಿಸು; ಚಿಲಕ, ಅಗಳಿ – ತೆಗೆ.

    unbolted
    ಗುಣವಾಚಕ
  • ತಾಪಾಳು, ಚಿಲಕ – ಹಾಕದ; ಅಗಳಿ ಹಾಕಿ ಬಂಧಿಸದ.
  • (ಹಿಟ್ಟು ಮೊದಲಾದವುಗಳ ವಿಷಯದಲ್ಲಿ) ಜರಡಿ, ಒಂದರಿ – ಆಡದ; ಸೋಸಿಲ್ಲದ.

  • unbonnet
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಮೇಲ್ಮುಚ್ಚಳ ತೆಗೆ; ಮುಚ್ಚಳ, ಬಾನೆಟ್‍ – ತೆಗೆದುಬಿಡು. (ಪ್ರಾಚೀನ ಪ್ರಯೋಗ) ಮುಖ್ಯವಾಗಿ ಗೌರವ ಸೂಚಿಸಲು ಟೋಪಿ ತೆಗೆ.

    unbookish
    ಗುಣವಾಚಕ
  • ಕೇವಲ ಗ್ರಾಂಥಿಕವಲ್ಲದ; ಪುಸ್ತಕೀಯವಲ್ಲದ; ಕೇವಲ ‘ಪುಸ್ತಕದ ಬದನೆಕಾಯಿ’ ಅಲ್ಲದ; ಶುಷ್ಕಪಾಂಡಿತ್ಯವಲ್ಲದ.
  • ಪುಸ್ತಕಜ್ಞಾನವಿಲ್ಲದ; ವ್ಯಾಸಂಗಪ್ರಿಯನಲ್ಲದ; ಓದುವ ಒಲವಿಲ್ಲದ.

  • unboot
    ಅಕರ್ಮಕ ಕ್ರಿಯಾಪದ
    (ತನ್ನ ಯಾ ಇನ್ನೊಬ್ಬನ) ಬಊಟು ಕಳಚು; ಬಊಟು ತೆಗೆ ( ಅಕರ್ಮಕ ಕ್ರಿಯಾಪದ ಸಹ).

    unborn
    ಗುಣವಾಚಕ
  • ಅಜಾತ; ಇನ್ನೂ ಹುಟ್ಟದಿರುವ; ಮುಂದೆ ಬರಲಿರುವ, ಹುಟ್ಟಲಿರುವ: unborn generations ಮುಂಬರುವ ಪೀಳಿಗೆಗಳು.
  • ಜನಿಸದ; ಇನ್ನೂ ಗರ್ಭದಲ್ಲಿರುವ: an unborn baby ಇನ್ನೂ ಜನಿಸದ ಕೂಸು.
  • ಹುಟ್ಟೇ ಇಲ್ಲದ; ಎಂದೆಂದಿಗೂ ಹುಟ್ಟು ಪಡೆಯದ: unborn hopes ಹುಟ್ಟೇ ಪಡೆಯದ ನಿರೀಕ್ಷೆಗಳು.

  • unbosom
    ಸಕರ್ಮಕ ಕ್ರಿಯಾಪದ ಪದಗುಚ್ಛ
    (ಮನೋಭಾವ, ಆಲೋಚನೆ, ಮೊದಲಾದವನ್ನು) ತೆರೆದು ಹೇಳು; ವ್ಯಕ್ತಪಡಿಸು; ಪ್ರಕಟಿಸು. unbosom oneself (ಆತ್ಮಾರ್ಥಕ) ಅಂತರಂಗ, ರಹಸ್ಯ, ಹೃದಯ – ಬಿಚ್ಚಿ ಹೇಳಿಕೊ; ಹೃದಯ ಬಿಚ್ಚಿ ಮಾತನಾಡು.


    logo