logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tango
ಅಕರ್ಮಕ ಕ್ರಿಯಾಪದ
ಟ್ಯಾಂಗೋ ನೃತ್ಯ ಮಾಡು.

tango
ನಾಮವಾಚಕ
ಕಿತ್ತಳೆ ಬಣ್ಣ; ಕಡು ಹಳದಿಬಣ್ಣ.

tangram
ನಾಮವಾಚಕ
ಏಳು ತುಂಡುಗಳಾಗಿ ಕತ್ತರಿಸಿರುವ, ಪುನಃ ಬೇರೆಬೇರೆ ಚಿತ್ರಗಳಾಗಿ ಕೂಡಿಸಬೇಕಾದ, ಚೀಣೀ ಒಗಟಿನ ಚೌಕ.

tangy
ಗುಣವಾಚಕ
  • ಕಟುವಾಸನೆಯ.
  • (ಯಾವುದೋ ಒಂದರ) ಲಕ್ಷಣವಿರುವ; ಛಾಯೆಯುಳ್ಳ.

  • tanh
    ನಾಮವಾಚಕ
    (ಗಣಿತ) ಟ್ಯಾನ್‍ಗೆ ಅನುರೂಪವಾದ ಮತ್ತು $\tanh = \sinh x / \cosh x$ ಎಂಬ ಸಮೀಕರಣದಿಂದ ನಿರ್ಧರವಾಗುವ ಹೈಪರ್ಬೊಲೀಯ ಫಲನ.

    tanist
    ನಾಮವಾಚಕ
    (ಚರಿತ್ರೆ) ಕೆಲ್ಟ್‍ ಬಉಡಕಟ್ಟು ನಾಯಕನ ಉತ್ತರಾಧಿಕಾರಿ; ಕೆಲ್ಟ್‍ ಬಉಡಕಟ್ಟಿನವರು, ತಮ್ಮ ನಾಯಕನ ಜೀವಿತಕಾಲದಲ್ಲೇ ಅವನ ಉತ್ತರಾಧಿಕಾರಿಯನ್ನಾಗಿ ಆಯ್ಕೆಮಾಡುವ, ಸಾಮಾನ್ಯವಾಗಿ ಅತ್ಯಂತ ಬಲಶಾಲಿಯಾದ, ಅವನದೇ ಸಂಬಂಧಿಯಾದ ಯುವಕ.

    tanistry
    ನಾಮವಾಚಕ
    (ಚರಿತ್ರೆ) (ಕೆಲ್ಟ್‍ ಬಉಡಕಟ್ಟಿನವರ) ಉತ್ತರಾಧಿಕಾರ ನಾಯಕತ್ವದ ವ್ಯವಸ್ಥೆ, ಹಕ್ಕುದಾರಿ ಪದ್ಧತಿ.

    tank
    ನಾಮವಾಚಕ
  • (ದ್ರವ, ಅನಿಲ, ಮೊದಲಾದವನ್ನು ತುಂಬಲು ಮಾಡಿದ) ಟ್ಯಾಂಕು; ದೊಡ್ಡ ತೊಟ್ಟಿ; ಕಡಾಯಿ; ಕೊಪ್ಪರಿಗೆ; ಹಂಡೆ.
  • (ರೈಲ್ವೆ ಎಂಜಿನ್‍ ಬಾಯ್ಲರ್‍ನಲ್ಲಿನ) ನೀರು ತೊಟ್ಟಿ.
  • (ಭಾರತ ಮತ್ತು ಆಸ್ಟ್ರೇಲಿಯ) ಜಲಾಶಯ; ಕುಂಟೆ; ಕೆರೆ; ಕಟ್ಟೆ; ಕೊಳ; ಕಲ್ಯಾಣಿ; ಪುಷ್ಕರಿಣಿ.
  • (ಸೈನ್ಯ) ಫಿರಂಗಿರಥ; ಆಯುಧಸಜ್ಜಿತ ಟ್ಯಾಂಕು.
  • (ಮೋಟಾರು ವಾಹನದಲ್ಲಿರುವ) ಇಂಧನ (ತುಂಬಿದ)ತೊಟ್ಟಿ.
  • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಪ್ರಾಂತೀಯ ಪ್ರಯೋಗ) ಕೊಳ; ಹೊಂಡ.

  • tank
    ಸಕರ್ಮಕ ಕ್ರಿಯಾಪದ
    (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)
  • ವಾಹನದ ಎಣ್ಣೆ ಟ್ಯಾಂಕ್‍ ತುಂಬಉ, ತುಂಬಿಸು, ಭರ್ತಿಮಾಡು.
  • (ಆಡುಮಾತು) (ಕರ್ಮಣಿಪ್ರಯೋಗದಲ್ಲಿ) ಪಟ್ಟಾಗಿ ಕುಡಿ, ಸಿಕ್ಕಾಪಟ್ಟೆ ಕುಡಿ( ಅಕರ್ಮಕ ಕ್ರಿಯಾಪದ ಸಹ).

  • tank engine
    ನಾಮವಾಚಕ
    ನೀರುತೊಟ್ಟಿ, ಟ್ಯಾಂಕು ಎಂಜಿನು; ನೀರು ಮತ್ತು ಕಲ್ಲಿದ್ದಲು ಟ್ಯಾಂಕುಗಳನ್ನು ಅದರೊಳಗೇ ಅಳವಡಿಸಿದ ರೈಲ್ವೆ ಎಂಜಿನು.


    logo