ಅಷ್ಟಕ ಕೊಳಲು; ಆರ್ಗಾನ್ ವಾದ್ಯದ ಸಾಮಾನ್ಯ ಕೊಳಲಿಗಿಂತ ಒಂದು ಅಷ್ಟಕದಷ್ಟು ಉಚ್ಚಾಸ್ಥಾಯಿಯ ನಾದಕೊಡುವ ಆರ್ಗನ್ ಕೊಳಲು.
octavo
ನಾಮವಾಚಕ
ಅಷ್ಟಪತ್ರ; ಕಾಗದದ ಹಾಳೆಯನ್ನು ಮೂರು ಸಲ, ಎಂದರೆ 8 ಎಲೆಗಳಾಗುವಂತೆ, ಮಡಿಸುವುದರಿಂದ ಆದ ಪುಸ್ತಕದ ಯಾ ಪುಟದ ಅಳತೆ.
ಅಷ್ಟಪತ್ರಾಕಾರದ ಪುಸ್ತಕ ಯಾ ಹಾಳೆ.
octennial
ಗುಣವಾಚಕ
ಅಷ್ಟವರ್ಷಿ; ಎಂಟು ವರ್ಷ ಇರುವ, ಬಾಳುವ.
ಅಷ್ಟವಾರ್ಷಿಕ; ಎಂಟು ವರ್ಷಗಳಿಗೊಮ್ಮೆ ಬರುವ, ಆಗುವ.
octet
ನಾಮವಾಚಕ
(ಸಂಗೀತ)
ಅಷ್ಟಕ ಕೃತಿ; ಎಂಟು ಗಾಯಕರು ಹಾಡಲು ಯಾ ಎಂಟು ವಾದಕರು ನುಡಿಸಲು ರಚಿಸಿದ ಕೃತಿ.
ಎಂಟು ಗಾಯಕರು ಯಾ ಎಂಟು ವಾದಕರು; ಅಷ್ಟಕ ಕೃತಿಯನ್ನು ಹಾಡುವ ಯಾ ನುಡಿಸುವ ಗಾಯಕರು ಯಾ ವಾದಕರು.
ಅಷ್ಟಕ; ಎಂಟು; ಎಂಟರ ಗುಂಪು , ತಂಡ.
ಅಷ್ಟಕ; ಪಂಕ್ತ್ಯಷ್ಟಕ; ಸಾನೆಟ್ಟಿನ ಮೊದಲ ಎಂಟು ಪಂಕ್ತಿಗಳು.
(ರಸಾಯನವಿಜ್ಞಾನ) ಅಷ್ಟಕ; ಪರಮಾಣುವಿನ ಅತ್ಯಂತ ಹೊರ ಚಿಪ್ಪಿನಲ್ಲಿ ರೂಪುಗೊಂಡಾಗ ಸ್ಥಿರತೆ ಒದಗಿ ರಾಸಾಯನಿಕ ಸಂತೃಪ್ತಿ ಉಂಟಾಗುವುದೆಂದು ಪರಿಗಣಿಸಲಾಗಿರುವ ಎಂಟು ಇಲೆಕ್ಟ್ರಾನುಗಳ ತಂಡ.
octette
ನಾಮವಾಚಕ
= octet.
octillion
ನಾಮವಾಚಕ
ಆಕ್ಟಿಲಿಯನ್; ಒಂದು ಮಿಲಿಯದ (ಹತ್ತುಲಕ್ಷದ) ಎಂಟನೆಯ ಘಾತ; ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿಯೂ, ಹ್ರಾನ್ಸಿನಲ್ಲಿಯೂ 1ರ ಮುಂದೆ 27 ಸೊನ್ನೆಗಳು ಬಂದರೆ ಆಗುವ ಸಂಖ್ಯೆ $(10^{ 27})$. ಬ್ರಿಟನ್ ಮತ್ತು ಜರ್ಮನಿಗಳಲ್ಲಿ 1ರ ಮುಂದೆ 48 ಸೊನ್ನೆಗಳು ಬಂದರೆ ಆಗುವ ಸಂಖ್ಯೆ $(10^{ 48})$.