logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

make
ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
  • (ಭಾಗಗಳನ್ನು ಸೇರಿಸಿ ಯಾ ಇತರ ಪದಾರ್ಥಗಳಿಂದ) ಮಾಡು; ನಿರ್ಮಿಸು; ಕಟ್ಟು; ತಯಾರಿಸು; ನಿರ್ಮಾಣ ಮಾಡು; ರಚಿಸು; ಸೃಷ್ಟಿಸು; ಸೃಜಿಸು: bees make cells of wax ಜೇನುನೊಣಗಳು ಮೇಣದಿಂದ ಗೂಡುಗಳನ್ನು ಕಟ್ಟುತ್ತವೆ. God made man ದೇವರು ಮಾನವನನ್ನು ಸೃಷ್ಟಿಸಿದ.
  • (ಪುಸ್ತಕ ಮೊದಲಾದವನ್ನು) ಬರೆ; ರಚಿಸು.
  • (ಉಯಿಲು ಮೊದಲಾದವನ್ನು) ರಚಿಸು; ತಯಾರಿಸು; ಬರೆ: make your will ನಿನ್ನ ಉಯಿಲು ಬರೆ. make film about India ಭಾರತವನ್ನು ಕುರಿತು ಒಂದು ಚಿತ್ರ ತಯಾರಿಸು.
  • (ಟೀ, ಕಾಹೀ, ಮೊದಲಾದವನ್ನು) ತಯಾರಿಸು; ಮಾಡು.
  • (ಹಾಸಿಗೆಯನ್ನು) ಹಾಸು; ಸಿದ್ಧಗೊಳಿಸು.
  • (ಗಲಭೆ, ಗದ್ದಲ, ತಮಾಷೆ) ಮಾಡು; ಉಂಟುಮಾಡು.
  • (ಒಂದು ಪರಿಣಾಮವನ್ನು) ಉಂಟುಮಾಡು: it maks a difference ಅದು ಒಂದು ವ್ಯತ್ಯಾಸವನ್ನುಂಟು ಮಾಡುತ್ತದೆ; ಅದರಿಂದ ಒಂದು ವ್ಯತ್ಯಾಸವುಂಟಾಗುತ್ತದೆ.
  • (ಗೌರವದ ಹುದ್ದೆಗಳು, ನಿಯಮಗಳು, ಕಾನೂನುಗಳು, ಮೊದಲಾದವನ್ನು) ಮಾಡು; ಸ್ಥಾಪಿಸು; ಕಲ್ಪಿಸು.
  • ಸೇರಿಸು; ಕೂಡಿಸು; ಒಟ್ಟುಗೂಡಿಸು: make a quorum ಕೋರಂ ಸೇರಿಸು. make a house (ಶಾಸನ)ಸಭೆ ಕೂಡಿಸು.
  • (ಸಂದೇಹವನ್ನು, ಶಂಕೆಯನ್ನು) ತಳೆ; ತಾಳು.
  • ಆಗಿಸು; ಆಗುವಂತೆ ಯಾ ಅಂತೆ ಕಾಣುವಂತೆ ಮಾಡು: make an exhibition of person or oneself ತನ್ನ ಪ್ರದರ್ಶನ ಮಾಡಿಕೊ.
  • (ಆಡುಮಾತು) (ಸಕಾಲಕ್ಕೆ ಬಂದು ರೈಲು ಮೊದಲಾದವುಗಳನ್ನು) ಹಿಡಿ.
  • (ಹಣ, ಜೀವನೋಪಾಯ, ಐಶ್ವರ್ಯ, ಮೊದಲಾದವನ್ನು) ಗಳಿಸು; ಪಡೆ; ಹೊಂದು; ಸಂಪಾದಿಸು: made 50,000 Rs. on the deal ಆ ವ್ಯವಹಾರದಲ್ಲಿ 50,000 ರೂಪಾಯಿಗಳನ್ನು ಗಳಿಸಿದ. make money ಹಣ ಗಳಿಸು. make a living ಜೀವನೋಪಾಯ ಸಂಪಾದಿಸು.
  • (ಇಸ್ಪೀಟು)
    1. (ಪಟ್ಟು) ಗೆದ್ದುಕೊ.
    2. ಗೆಲ್ಲುವಂತೆ ಎಲೆ – ಇಳಿ, ಹಾಕು, ಆಟವಾಡು.
    3. ಇಸ್ಪೀಟೆಲೆಗಳನ್ನು ಕಲೆಸು.
    4. ಘೋಷಿಸಿದಷ್ಟು ಪಟ್ಟುಗಳನ್ನು ಗೆದ್ದುಕೊ.
  • ಏಳಿಗೆಯನ್ನು, ಪುರೋಭಿವೃದ್ಧಿಯನ್ನು ಸಾಧಿಸು, ಸಾಧಿಸಿಕೊ.
  • ನೇಮಕಮಾಡು; ನೇಮಿಸು; ಸ್ಥಾನಕ್ಕೆ ಹೆಸರಿಸು; ಮಾಡು: make him a governor ಅವನನ್ನು ಒಬ್ಬ ರಾಜ್ಯಪಾಲನನ್ನಾಗಿ (ನೇಮಕ) ಮಾಡು.
  • (ಒಂದು ರೂಪಕ್ಕೆ, ಸ್ಥಿತಿಗೆ) ಪರಿವರ್ತಿಸು; ಬದಲಾಯಿಸು.
  • ಅಂದುಕೊ; ಭಾವಿಸು; ತಿಳಿ: what do you make the time? ಈಗ ಹೊತ್ತು ಎಷ್ಟೆಂದು ತಿಳಿದುಕೊಂಡಿದ್ದೀಯೆ? what animal do you make that to be? ಅದು ಯಾವ ಪ್ರಾಣಿಯೆಂದು ಅಂದುಕೊಂಡಿದ್ದೀಯೆ? I make it 2 miles ಅದು 2 ಮೈಲಿಗಳೆಂದು ಅಂದುಕೊಳ್ಳುತ್ತೇನೆ.
  • ಮಾಡಿಸು; ಮಾಡುವಂತೆ ಪ್ರೇರಿಸು, ಬಲಾತ್ಕರಿಸು, ಒತ್ತಾಯ ಮಾಡು: make him repeat it ಅವನು ಅದನ್ನು ಪುನಃ ಹೇಳುವಂತೆ ಯಾ ಮಾಡುವಂತೆ ಮಾಡು.
  • (ಯುದ್ಧ) ಮಾಡು.
  • (ದೇಹದ ಅಂಗಾಂಗಗಳನ್ನು ನಿರ್ದಿಷ್ಟ ರೀತಿಯಲ್ಲಿ) ಆಡಿಸು; ಚಲನಮಾಡು: make a face ಅಣಕಿಸು; ಮುಖ ಸೊಟ್ಟಗೆ ಮಾಡು. make a bow ತಲೆಬಾಗು; ನಮಸ್ಕರಿಸು.
  • (ಪ್ರಯಾಣ ಮೊದಲಾದವನ್ನು ಮತ್ತು ಅನೇಕ ಕೃನ್ಮಾಮಗಳೊಡನೆ) ಮಾಡು: make a journey ಯಾತ್ರೆಮಾಡು. make an attempt ಪ್ರಯತ್ನ ಮಾಡು; ಪ್ರಯತ್ನಿಸು. make a start ಶುರುಮಾಡು; ಪ್ರಾರಂಭಿಸು.
  • (ಊಟ) ಮಾಡು; ತಿನ್ನು: ಉಣ್ಣು: make a good breakfast ಬೆಳಗಿನೂಟವನ್ನು, ನಾಷ್ಟವನ್ನು, ಉಪಾಹಾರವನ್ನು ಚೆನ್ನಾಗಿ, ಪುಷ್ಕಳವಾಗಿ ಮಾಡು.
  • (ಮೈಲಿಗಳನ್ನು, ದೂರವನ್ನು) ಕ್ರಮಿಸು; ಸಾಗು; ನಡೆ: made ten miles ಅವನು ಹತ್ತು ಮೈಲಿ ಸಾಗಿದನು.
  • (ಜಾಗ) ತಲುಪು: the ship was able to make port ಹಡಗು ರೇವನ್ನು ತಲುಪಲು ಸಾಧ್ಯವಾಯಿತು.
  • ಬರಲು, ಹಾಜರಾಗಲು, ಭಾಗವಹಿಸಲು – ಸಾಧ್ಯವಾಗು, ಆಗು; ನಿರ್ದಿಷ್ಟ ದಿನ ಯಾ ನಿರ್ದಿಷ್ಟ ಸಮಯದಲ್ಲಿ ಬರಲು ಆಗು: couldn’t make the meeting last week ಕಳೆದ ವಾರ ಸಭೆಗೆ ಬರಲಾಗಲಿಲ್ಲ. can make any day except Friday ಶುಕ್ರವಾರ ಬಿಟ್ಟು ಬೇರೆ ಯಾವ ದಿವಸ ಬೇಕಾದರೂ ಬರಬಲ್ಲೆ.
  • (ತಂಡ, ಬಹುಮಾನದ ಪಟ್ಟಿ, ಪದವಿ, ಮೊದಲಾದವುಗಳಲ್ಲಿ) ಸ್ಥಾನ ಪಡೆ; ಸಾಧಿಸು: made the first eleven ಮೊದಲ ಹನ್ನೊಂದರಲ್ಲಿ ಸ್ಥಾನ ಪಡೆದ. made the six o’clock news ಆರು ಗಂಟೆ ಸುದ್ದಿಯಲ್ಲಿ ಸ್ಥಾನ ಪಡೆದ, ಸಿಕ್ಕಿತು. made the colonel in three years ಮೂರು ವರ್ಷಗಳಲ್ಲಿ ಕರ್ನಲ್‍ ಪದವಿ ಪಡೆದ.
  • ಯಶಸ್ಸು ಯಾ ಪ್ರಗತಿ ಸಾಧಿಸುವಂತೆ ಮಾಡು: his mother made him ಅವನ ತಾಯಿ ಅವನು ಯಶಸ್ವಿಯಾಗುವಂತೆ ಮಾಡಿದಳು; ಅವನ ತಾಯಿ ಅವನ ಯಶಸ್ಸಿಗೆ ಕಾರಣ.
  • ಬೆಳೆದು ಯಾ ಶಿಕ್ಷಣದಿಂದ – ಆಗು: made a great leader ಬೆಳೆದು ದೊಡ್ಡ ನಾಯಕನಾಗಿ ರೂಪುಗೊಂಡ. she will make a good wife ಅವಳು ಒಳ್ಳೆಯ ಹೆಂಡತಿ ಆಗುತ್ತಾಳೆ.
  • – ಆಗಿ ಕೆಲಸಕ್ಕೆ ಬರು, ಉಪಯೋಗಕ್ಕೆ ಬರು; ಆಗು: a log makes a useful seat ಮರದ ದಿಮ್ಮಿ ಕುಳಿತುಕೊಳ್ಳಲು ಒಳ್ಳೆಯ ಆಸನವಾಗಿ ಉಪಯೋಗವಾಗುತ್ತದೆ.
  • ನಿರೂಪಿಸು; ಚಿತ್ರಿಸು; ಕಾಣುವಂತೆ ಮಾಡು: makes him out a liar ಅವನನ್ನು ಸುಳ್ಳನಾಗಿ ಕಾಣಿಸುವಂತೆ ಮಾಡುತ್ತದೆ.
  • ಮನಸ್ಸಿನಲ್ಲಿ ರೂಪಿಸಿಕೊ; ಅಂದುಕೊ: I make no judgement ನಾನು ಮನಸ್ಸಿನಲ್ಲಿ ಯಾವ ತೀರ್ಮಾನ ರೂಪಿಸಿಕೊಳ್ಳುವುದಿಲ್ಲ.
  • (ಆರಿಸಿದ ಮೌಲ್ಯ, ಸಂಖ್ಯೆ, ಮೊದಲಾದವುಗಳಿಗೆ) ತರು; ಮಾಡು: decided to make it a dozen ಒಂದು ಡಜನ್‍ ಮಾಡಲು ತೀರ್ಮಾನಿಸಿದ.
  • (ಅಶಿಷ್ಟ) ಸಂಭೋಗಿಸು; ಕೇಯು; ಮಾಡು.
  • (ವಿದ್ಯುದ್ವಿಜ್ಞಾನ) ಮಂಡಲವನ್ನು ಪೂರ್ಣಗೊಳಿಸು; ಸಂಪೂರ್ಣವಾಗಿಸು; ರಚಿಸು; ಪೂರ್ತಿಮಾಡು.
  • (ಕ್ರಿಕಟ್‍) (ರನ್ನುಗಳನ್ನು) ಮಾಡು; ಹೊಡೆ.
  • (ಬೆಂಕಿ ಮಾಡಲು) ಉರುವಲು ಮೊದಲಾದವನ್ನು ಒಟ್ಟಿ ಹೊತ್ತಿಸು.
  • (ಪರಿಣಾಮವಾಗಿ) ಆಗು; ಉಂಟಾಗು: ‘find’ makes ‘found’ in the past tense ‘ಹೈಂಡ್‍’ ಎಂಬುದು ಭೂತಕಾಲದಲ್ಲಿ ‘ಹೌಂಡ್‍’ ಎಂದು ಆಗುತ್ತದೆ.
  • (ನೌಕಾಯಾನ) ಕಾಣು; ನೋಡು: we made the coast of India ನಾವು ಭಾರತದ ತೀರವನ್ನು ಕಂಡೆವು.
  • ಮೊತ್ತವಾಗು: 2 and 2 make four ಎರಡು ಮತ್ತು ಎರಡು ಸೇರಿ ಮೊತ್ತ 4 ಆಗುತ್ತದೆ.
  • ಭಾಗವಾಗು; ಅಂಶವಾಗು; (ಅಂಶವಾಗಿ) ಸೇರು; ಸೇರಿಕೊ: will you make one of the party? ನೀನೂ ಈ ಗುಂಪಿನಲ್ಲಿ ಒಬ್ಬನಾಗುತ್ತೀಯಾ?
  • (ದೂರ, ವೇಗ, ಅಂಕ, ಮೊದಲಾದವನ್ನು) ಸಾಧಿಸು: make 60 m.p.h. on the motorway ಮೋಟಾರು ಹಾದಿಯಲ್ಲಿ ಗಂಟೆಗೆ 60 ಮೈಲಿ ವೇಗದಲ್ಲಿ ಹೋದ.
  • ಫಲವಾಗಿ, ಪರಿಣಾಮವಾಗಿ – ಹೊಂದು, ಪಡೆ: made a loss on the transaction ಆ ವ್ಯವಹಾರದ ಪರಿಣಾಮವಾಗಿ ನಷ್ಟ ಹೊಂದಿದ.
  • ಆಗಿಸು; ಆಗುವಂತೆ ಮಾಡು: make it hot ಅದನ್ನು ಬಿಸಿಯಾಗಿಸು. make it plain ಅದನ್ನು ವಿಶದವಾಗಿಸು. make him rich ಅವನನ್ನು ಶ್ರೀಮಂತನನ್ನಾಗಿಸು.

  • make
    ನಾಮವಾಚಕ ಪದಗುಚ್ಛ
  • (ಒಂದು ಸ್ವಾಭಾವಿಕವಾದ ಯಾ ತಯಾರಿಸಿದ ವಸ್ತುವಿನ) ರಚನೆ; ವಿನ್ಯಾಸ; ರಚನೆಯ ರೀತಿ, ವಿಧಾನ.
  • ಸ್ವಭಾವ; ಪ್ರಕೃತಿ; ಮನೋಧರ್ಮ; ಮಾನಸಿಕ ಯಾ ನೈತಿಕ ಪ್ರವೃತ್ತಿ.
  • (ವಿದ್ಯುತ್‍)
    1. ಸಂಪರ್ಕ ಕಲ್ಪಿಸುವುದು.
    2. ಸಂಪರ್ಕ ಸ್ಥಾನ (ಮುಖ್ಯವಾಗಿ at make).
  • (ಮುಖ್ಯವಾಗಿ ಒಂದು ಉತ್ಪನ್ನದ ವಿಷಯದಲ್ಲಿ ತಯಾರಿಕೆಯ ನಿರ್ದಿಷ್ಟ) ಮಾದರಿ; ಮೂಲ; ನಮೂನೆ; ರಖಮು; ಛಾಪು; ತಯಾರಿ; ನಿರ್ದಿಷ್ಟ ಮುದ್ರೆಯದು; American make ಅಮೆರಿಕದಲ್ಲಿ ತಯಾರಾದದ್ದು. our own make ಸ್ವಂತ ತಯಾರಿ.
  • ಇಸ್ಪೀಟೆಲೆಗಳನ್ನು ಕಲಸುವುದು.

  • make-belief
    ನಾಮವಾಚಕ
  • ಸೋಗು; ನಟನೆ.
  • ಕಲ್ಪನೆ; ವಾಸ್ತವಿಕವಾಗಿರದೆ ಕಲ್ಪಿಸಿ ಕೊಂಡದ್ದು.

  • make-believe
    ನಾಮವಾಚಕ
    = make-belief.

    make-believe
    ಗುಣವಾಚಕ
  • ನಟನೆಯ; ಸೋಗಿನ.
  • ಕಲ್ಪನೆಯ; ಕಾಲ್ಪನಿಕ.

  • maker
    ನಾಮವಾಚಕ ಪದಗುಚ್ಛ
    our, the, etc. Maker ದೇವರು; ಭಗವಂತ.
  • ಕರ್ತೃ; ಕರ್ತ; ಕರ್ತಾರ; ನಿರ್ಮಾತ; ತಯಾರಕ; ಮಾಡುವವನು; ನಿರ್ಮಿಸುವವನು; ತಯಾರಿಸುವವನು; ರಚಿಸುವವನು; ಸೃಷ್ಟಿಸುವವನು.
  • (ಪ್ರಾಚೀನ ಪ್ರಯೋಗ) ಕವಿ; ಪದ್ಯಗಳನ್ನು ರಚಿಸುವವನು.

  • makeshift
    ಗುಣವಾಚಕ
    ತಾತ್ಕಾಲಿಕ; ತತ್ಕಾಲದ: a makeshift arrangement ತಾತ್ಕಾಲಿಕ ವ್ಯವಸ್ಥೆ.

    makeshift
    ನಾಮವಾಚಕ
    ತಾತ್ಕಾಲಿಕ ವ್ಯವಸ್ಥೆ ಯಾ ಸಾಧನ; ತತ್ಕಾಲಕ್ಕೆ ಹೇಗೋ ಸರಿಹೊಂದುವ ಸಾಧನ ಯಾ ವ್ಯವಸ್ಥೆ.

    makeweight
    ನಾಮವಾಚಕ
  • ತೂಕಭರ್ತಿ; ಪೂರ್ಣ ತೂಕವಾಗುವಂತೆ ಸೇರಿಸಿದ, ಅಲ್ಪ ಪ್ರಮಾಣದ ಹೆಚ್ಚಿನ ತೂಕ.
  • ಅಮುಖ್ಯನಾದ ಹೆಚ್ಚುವರಿ ವ್ಯಕ್ತಿ.
  • ಅಧಿಕಾಂಶ; ವಾದವು ಬಲವಾಗುವಂತೆ ಅದಕ್ಕೆ ಸೇರಿಸುವ ಅಮುಖ್ಯ ವಿವರ, ಅಂಶ.

  • making
    ನಾಮವಾಚಕ ಪದಗುಚ್ಛ
  • ಮಾಟ; ಮಾಡುವುದು; ನಿರ್ಮಿಸುವುದು; ನಿರ್ಮಾಣ; ಸೃಷ್ಟಿಸುವುದು; ರಚಿಸುವುದು; ನಿರ್ಮಾಣ; ಸೃಷ್ಟಿಸುವುದು; ರಚಿಸುವುದು; ಸೃಷ್ಟಿ; ರಚನೆ.
  • (ಉಯಿಲು, ಟೀ, ಮೊದಲಾದವನ್ನು) ತಯಾರಿಸುವುದು; ತಯಾರಿಕೆ.
  • ಮಾಡಿಸುವುದು; ಆಗಿಸುವುದು; ಆಗುವಂತೆ ಯಾ ಮಾಡುವಂತೆ ಮಾಡುವುದು.
  • ತಯಾರಿ; ಸಿದ್ಧತೆ; ನಿರ್ಮಾಣ; ರಚನೆ (ಸ್ಥಿತಿ); ಆಗುತ್ತಿರುವ ಯಾ ಮಾಡುತ್ತಿರುವ ಅವಸ್ಥೆ, ಘಟ್ಟ, ಸ್ಥಿತಿ: the laws are in the making ಕಾನೂನುಗಳು ತಯಾರಾಗುತ್ತಿರುವ ಸ್ಥಿತಿಯಲ್ಲಿವೆ, ಇನ್ನೂ ಸಿದ್ಧವಾಗುತ್ತಿವೆ.
  • ಹುಟ್ಟು; ಜನನ; ಉದಯ: the modern age of science and technology was in making ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕ ಯುಗವು ಇನ್ನೂ ಉದಯವಾಗುತ್ತಿತ್ತು.
  • ಮಾಡಿದ್ದು; ತಯಾರಿಸಿದ್ದು; ತಯಾರಿಕೆ; ಉತ್ಪಾದನೆ; ಉತ್ಪನ್ನ; ಉತ್ಪತ್ತಿ: making of bread ಬ್ರೆಡ್ಡಿನ ತಯಾರಿಕೆ.
  • (ಬಹುವಚನದಲ್ಲಿ)
    1. ಗಳಿಕೆ; ಸಂಪಾದನೆ; ವರಮಾನ; ಆದಾಯ; ಲಾಭ; ನಫೆ.
    2. (makings of) ಅಗತ್ಯವಾದ ಯೋಗ್ಯತೆ, ಶಕ್ತಿ, ಅರ್ಹತೆ, ಸಾಮರ್ಥ್ಯ ಯಾ ಗುಣ ಲಕ್ಷಣಗಳು: he has the makings of a general ಅವನಲ್ಲಿ ಸೇನಾಧಿಪತಿಯಾಗಲು ಅಗತ್ಯವಾದ ಗುಣಲಕ್ಷಣಗಳಿವೆ.
    3. (ಅಮೆರಿಕನ್‍ ಪ್ರಯೋಗ ಮತ್ತು ಆಸ್ಟ್ರೇಲಿಯ) (ಆಡುಮಾತು) ಸಿಗರೇಟನ್ನು ಸುತ್ತಲು ಬೇಕಾದ ಕಾಗದ ಮತ್ತು ತಂಬಾಕು.


  • logo