logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lampion
ನಾಮವಾಚಕ
(ಅಲಂಕಾರವಾದ ಗಾಜಿನ) ದೀಪದ ಬುರುಡೆ; ದೀಪಾಲಂಕಾರಗಳಲ್ಲಿ ಬಳಸುವ ಎಣ್ಣೆ ಬತ್ತಿಗಳುಳ್ಳ (ಸಾಮಾನ್ಯವಾಗಿ ಬಣ್ಣದ) ಗಾಜಿನ – ಬುಡ್ಡಿ, ಬುರುಡೆ.

lampless
ಗುಣವಾಚಕ
  • ಲಾಂದ್ರವಿಲ್ಲದ; ದೀಪವಿಲ್ಲದ.
  • ಬೆಳಕಿಲ್ಲದ; ಕತ್ತಲೆಯ; ಕತ್ತಲಾದ.

  • lamplight
    ನಾಮವಾಚಕ
    ದೀಪ – ಪ್ರಕಾಶ, ಕಾಂತಿ, ಜ್ಯೋತಿ; ದೀಪದ ಯಾ ದೀಪಗಳ ಬೆಳಕು.

    lamplighter
    ನಾಮವಾಚಕ ನುಡಿಗಟ್ಟು
    like a lamplighter ವೇಗವಾಗಿ; ಬೇಗನೆ; ಕ್ಷಿಪ್ರವಾಗಿ; ತ್ವರೆಯಿಂದ.
  • (ಚರಿತ್ರೆ) ಬೀದಿದೀಪಗಳನ್ನು ಹೊತ್ತಿಸುವವ.
  • (ಅಮೆರಿಕನ್‍ ಪ್ರಯೋಗ) ದೀಪಜ್ವಾಲಕ; ದೀಪದ ಕಡ್ಡಿ; ದೀಪ ಹೊತ್ತಿಸಲು ಬಳಸುವ ಕಡ್ಡಿ.

  • lampoon
    ನಾಮವಾಚಕ
    (ವ್ಯಕ್ತಿ ಮೊದಲಾದವರ ಮೇಲಿನ) ನಿಂದಾಲೇಖನ; ತೀಕ್ಷ್ಣ ವಿಡಂಬನ; ಕಟು ಕಟಕಿ ಬರೆಹ; ಲೇವಡಿ ಬೈಗುಳ ಬರೆಹ.

    lampoon
    ಸಕರ್ಮಕ ಕ್ರಿಯಾಪದ
    (ಒಬ್ಬನನ್ನು ಕುರಿತು) ನಿಂದಾಲೇಖನ ಬರೆ; ಉಗ್ರ ವಿಡಂಬನೆ ರಚಿಸು; ಕಟು ಕಟಕಿಯನ್ನಾಡು; (ಬರೆಹದಲ್ಲಿ) ಲೇವಡಿ, ಗೇಲಿ, ಕುಚೋದ್ಯ – ಮಾಡು.

    lampooner
    ನಾಮವಾಚಕ
    = lampoonist.

    lampoonery
    ನಾಮವಾಚಕ
  • ನಿಂದಾಲೇಖನಾಭ್ಯಾಸ; ಕಟಕಿಯ ಅಭ್ಯಾಸ; ಕಟು ವಿಡಂಬನ ಬರೆಯುವ ಅಭ್ಯಾಸ.
  • ಕಟಕಿಯ ಗುಣ; ಲೇವಡಿ ಮನೋಭಾವ.

  • lampoonist
    ನಾಮವಾಚಕ
    ನಿಂದಾಲೇಖಕ; ಬೈಗುಳ ಬರೆಹಗಾರ.

    lamprey
    ನಾಮವಾಚಕ
    ಲ್ಯಾಂಪ್ರಿ; ಪೆಟ್ರೊಮಿಸನಿಡೇ ವಂಶಕ್ಕೆ ಸೇರಿದ, ಶಲ್ಕಗಳಾಗಲಿ ಜೋಡಿ ಈಜುರೆಕ್ಕೆಗಳಾಗಲಿ, ದವಡೆಗಳಾಗಲಿ ಇಲ್ಲದ, ಚೂಪಾದ ಹಲ್ಲುಗಳೂ, ಒರಟಾದ ನಾಲಗೆಯೂ ಇರುವ ಹೀರುವ ಬಾಯಿಯುಳ್ಳ, ಸಮಶೀತೋಷ್ಣವಲಯ ಸಮುದ್ರಗಳಲ್ಲಿ ದೊರೆಯುವ ಹಾವುಮೀನಿನಂಥ ಒಂದು ಬಗೆಯ ಕಶೇರುಕ.


    logo