logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

illustriousness
ನಾಮವಾಚಕ
ಸುಪ್ರಸಿದ್ಧಿ; ಪ್ರಖ್ಯಾತಿ.

Illyrian
ಗುಣವಾಚಕ
ಇಲಿರಿಯನ್‍; ಏಡ್ರಿಯಾಟಿಕ್‍ ಸಮುದ್ರ ತೀರದಲ್ಲಿರುವ ಪ್ರಾಚೀನ ಇಲಿರಿಯಾ ದೇಶದ, ಜನರ, ಭಾಷೆಯ ಯಾ ಭಾಷಾವರ್ಗದ.

Illyrian
ನಾಮವಾಚಕ
ಇಲಿರಿಯನ್‍:
  • ಇಲಿರಿಯ ದೇಶದಲ್ಲಿ ಹುಟ್ಟಿದವ ಯಾ ವಾಸಿಸುವ.
  • ಇಲಿರಿಯಾ ಭಾಷೆ ಯಾ (ಆಧುನಿಕ ಆಲ್ಬೇನಿಯನ್‍ ಪ್ರತಿನಿಧಿಸುವ ಆ) ಭಾಷಾವರ್ಗ.

  • ilmenite
    ನಾಮವಾಚಕ
    ಇಲ್ಮನೈಟ್‍; ಕಬ್ಬಿಣ ಮತ್ತು ಟೈಟೇನಿಯಂಗಳ ಒಂದು ಆಕ್ಸೈಡು.

    ILO
    ಸಂಕ್ಷಿಪ್ತ
    International Labour Organisation.

    im-
    ಪೂರ್ವಪ್ರತ್ಯಯ
    b, m, p ಗಳ ಹಿಂದೆ ಬರುವ in, in- ಪೂರ್ವಪ್ರತ್ಯಯಗಳ ಭಿನ್ನರೂಪ: imbalance, immoral, imperishable, impassion.

    image
    ನಾಮವಾಚಕ
  • (ಮುಖ್ಯವಾಗಿ ಪೂಜಾವಸ್ತುವಾಗಿಟ್ಟುಕೊಂಡಿರುವ, ಸಂತರು ಮೊದಲಾದವರ) ಪ್ರತಿಮೆ; ವಿಗ್ರಹ; ಪ್ರತೀಕ; ಮೂರ್ತಿ.
  • ಬಿಂಬ; ಪ್ರತಿಬಿಂಬ; ಕನ್ನಡಿ ಯಾ ಮಸೂರಗಳ ನೆರವಿನಿಂದ ಮೂಡಿಸಬಹುದಾದ (ವಸ್ತುವಿನ) ಪ್ರತಿರೂಪ.
  • ರೂಪ; ಆಕೃತಿ; ಆಕಾರ: God created man in his own image ದೇವರು ತನ್ನ ಆಕಾರದಲ್ಲಿಯೇ ಮಾನವನನ್ನು ಸೃಷ್ಟಿಸಿದನು.
  • ಪ್ರತಿಬಿಂಬ; ಪ್ರತಿರೂಪ; ಪ್ರತಿಕೃತಿ; ಪಡಿಯಚ್ಚು; ಪಡಿರೂಪ; ತದ್ರೂಪ: he is the very image of his father ಅವನು ತನ್ನ ತಂದೆಯ ಪಡಿಯಚ್ಚು, ತದ್ರೂಪ.
  • ಮಾದರಿ; ನಮೂನೆ; ಮೂರ್ತಿ; ಮೂರ್ತ ಸ್ವರೂಪ; ಸಾಕಾರ ರೂಪ; ನಿದರ್ಶನ: he was the image of frustration ಅವನು ವಿಫಲತೆಯ ಸಾಕಾರ ರೂಪವಾಗಿದ್ದನು.
  • ಸಾದೃಶ್ಯ; ಉಪಮೆ; ಉಪಮಾನ; ರೂಪಕ: to speak of death as a sleep, is an image common to all languages ಮರಣವನ್ನು ಒಂದು ನಿದ್ರೆಯೆನ್ನುವುದು ಎಲ್ಲಾ ಭಾಷೆಗಳಿಗೂ ಸಮಾನವಾಗಿರುವ ರೂಪಕ.
  • ಮಾನಸಿಕ ಚಿತ್ರ, ಕಲ್ಪನೆ.
  • ಭಾವನೆ; ಕಲ್ಪನೆ; ಮನಸ್ಸಿನಲ್ಲಿ ಮೂಡಿದ ಅಭಿಪ್ರಾಯ: the current of images that daily sweep through consciousness ಅರಿವಿನ ಮೂಲಕ ದಿನಂಪ್ರತಿ ಹಾದುಹೋಗುವ ಭಾವನೆಗಳ ಪ್ರವಾಹ.
  • ಚಿತ್ರ; ಭಾವನೆ; ಕಲ್ಪನೆ; ಒಬ್ಬನ ಯಾ ಒಂದರ ವಿಷಯವಾಗಿ ವ್ಯಕ್ತಿ, ಸಂಸ್ಥೆ ಯಾ ಜನತೆಯ ಮನಸ್ಸಿನಲ್ಲಿ ಮೂಡಿರುವ ಅಭಿಪ್ರಾಯ: public image ಸಾರ್ವಜನಿಕ ಕಲ್ಪನೆ; ಜನಾಭಿಪ್ರಾಯ. living image ಸಜೀವ ಚಿತ್ರ; ಜೀವಂತಮೂರ್ತಿ.
  • (ಸಾಹಿತ್ಯ, ಕಲೆ, ಮೊದಲಾದವುಗಳಲ್ಲಿ) ಪ್ರತಿಮೆ; ಪ್ರತೀಕ; ಸಂಕೇತ.
  • (ಗಣಿತ) ಬಿಂಬ; ಬಿಂಬನದ ಪರಿಣಾಮವಾಗಿ ರೂಪುಗೊಳ್ಳುವ ಗಣ.

  • image
    ಸಕರ್ಮಕ ಕ್ರಿಯಾಪದ
  • ವಿಗ್ರಹಮಾಡು; ಪ್ರತಿಮೆ – ಮಾಡು, ತಯಾರಿಸು, ಕಡೆ: a hero imaged in bronze ಕಂಚಿನಲ್ಲಿ ಮಾಡಿದ ವೀರ(ನ ಪ್ರತಿಮೆ).
  • ಚಿತ್ರಿಸು; ವರ್ಣಿಸು; ಒಂದರ ಚಿತ್ರ ಬರೆ ಯಾ ವರ್ಣನೆ ನೀಡು (ರೂಪಕವಾಗಿ ಸಹ).
  • (ಮನಸ್ಸಿನಲ್ಲಿ) ಚಿತ್ರಿಸಿಕೊ; ಕಲ್ಪಿಸಿಕೊ: image to yourselves the scenery of rivers and lakes ನಿಮ್ಮ ಮನಸ್ಸಿನಲ್ಲೇ ನದಿ, ಸರೋವರಗಳ ದೃಶ್ಯವನ್ನು ಚಿತ್ರಿಸಿಕೊಳ್ಳಿ.
  • ಕಣ್ಣಿಗೆ ಕಟ್ಟುವಂತೆ – ವರ್ಣಿಸು, ಬಣ್ಣಿಸು; ಸುಸ್ಪಷ್ಟವಾಗಿ, ವಿಶದವಾಗಿ – ವಿವರಿಸು: Satan’s approach is finely imaged ಸೈತಾನನ ಆಗಮನವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದೆ.
  • ಸಂಕೇತಿಸು; ಸಂಕೇತರೂಪವಾಗಿ ಯಾ ಪ್ರತೀಕವಾಗಿ ನಿರೂಪಿಸು; ಮಾದರಿಯಾಗಿ ತೋರು: the heathen deities imaged human virtues ‘ಅಕ್ರೈಸ್ತ’ ದೇವತೆಗಳು ಮಾನವನ ಸದ್ಗುಣಗಳನ್ನು ಸಂಕೇತಿಸಿದವು.
  • ಪ್ರತಿಈಕರಿಸು; ಪ್ರತಿಮಾ ವಿಧಾನದಲ್ಲಿ ನಿರೂಪಿಸು.

  • imageable
    ಗುಣವಾಚಕ
    (ಮುಖ್ಯವಾಗಿ ಮನಸ್ಸಿನಲ್ಲಿ) ಕಲ್ಪಿಸಿಕೊಳ್ಳಬಲ್ಲ; ಚಿತ್ರಿಸಿಕೊಳ್ಳಬಲ್ಲ.

    imageless
    ಗುಣವಾಚಕ
  • ಪ್ರತಿಮಾರಹಿತ; ವಿಗ್ರಹವಿಲ್ಲದ; ಮೂರ್ತಿಯಿಲ್ಲದ: imageless shrines ವಿಗ್ರಹಶೂನ್ಯ ದೇವಾಲಯಗಳು.
  • ಆಕೃತಿ ರಹಿತ; ಆಕಾರರಹಿತ; ರೂಪವಿಲ್ಲದ; ಅಮೂರ್ತ; ನಿರಾಕಾರ; ನೀರೂಪ: the deep truth is imageless ಗಹನವಾದ ಸತ್ಯವು ಅಮೂರ್ತವಾದುದು.


  • logo