logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

effaceable
ಗುಣವಾಚಕ
  • (ರೂಪಕವಾಗಿ ಸಹ) ಅಳಿಸಿಹಾಕಬಲ್ಲ; ತೊಡೆದುಹಾಕಬಲ್ಲ; ಉಜ್ಜಿಬಿಡಬಹುದಾದ.
  • ನಾಶಗೊಳಿಸಬಹುದಾದ; ನಿರ್ನಾಮಮಾಡಬಹುದಾದ.

  • effacement
    ನಾಮವಾಚಕ
  • (ರೂಪಕವಾಗಿ ಸಹ) ಅಳಿಸಿಹಾಕಿಬಿಡುವಿಕೆ; ತೊಡೆದುಬಿಡುವುದು; ಉಜ್ಜಿಬಿಡುವುದು; ನಾಶ; ನಿರ್ನಾಮ.
  • ಕಡೆಗಣಿಸಿಕೊಳ್ಳುವಿಕೆ; ಅಲ್ಪನೆಂದು ಭಾವಿಸುವಿಕೆ.

  • effect
    ನಾಮವಾಚಕ ಪದಗುಚ್ಛ ನುಡಿಗಟ್ಟು
  • ಫಲ; ಫಲಿತಾಂಶ; ಪರಿಣಾಮ; ಕಾರ್ಯ.
  • ಪರಿಣಾಮಕಾರಿತ್ವ; ಪ್ರಭಾವ; ಪರಿಣಾಮ; ಫಲ; ಉಪಯೋಗ; ಪ್ರಯೋಜನ: of no effect ಪರಿಣಾಮ ಮಾಡದ; ಉಪಯೋಗವಿಲ್ಲದ; ಪ್ರಯೋಜನರಹಿತ.
  • (ಚಿತ್ರ ಮೊದಲಾದವುಗಳಲ್ಲಿ ವರ್ಣಗಳ ಯಾ ಆತಿಗಳ) ಸಂಯೋಜನೆ; ಹೊಂದಾವಣೆ; ಹೊಂದಿಕೆ; ಸಾಮರಸ್ಯ: a pretty effect ಸುಂದರವಾದ ಹೊಂದಾವಣೆ.
  • (ಬಹುವಚನದಲ್ಲಿ) ಆಸ್ತಿ; ಚರ ಆಸ್ತಿ; ಬ್ಯಾಂಕಿನಲ್ಲಿರುವ (ಸ್ವಂತ) ಹಣ: personal effects ಸ್ವಂತ ಆಸ್ತಿ.
  • ಪರಿಣಾಮ; ಪ್ರಭಾವ; ಪ್ರೇಕ್ಷಕ ಯಾ ಶ್ರೋವಿನ ಮೇಲೆ ಆಗುವ ಪರಿಣಾಮ: calculated for effect ಪರಿಣಾಮವನ್ನುಂಟು ಮಾಡಲು ಉದ್ದೇಶಿಸಿದ.
  • ವಿಶೇಷ ಪರಿಣಾಮ; ನಾಟಕ, ಸಿನಿಮಾ ಯಾ ರೇಡಿಯೋ ಪ್ರಸರಣಗಳ ಜೊತೆಯಲ್ಲಿ ಬಳಸುವ ಮಿಂಚು, ಗುಡುಗು, ಧ್ವನಿಗಳು, ಮೊದಲಾದವು.
  • (ಭೌತವಿಜ್ಞಾನ) ಪರಿಣಾಮ; ಯಾವುದೇ ಕಾರ್ಯಕಾರಣ ಸಂಬಂಧವನ್ನು ನಿರೂಪಿಸುವ (ಸಾಮಾನ್ಯವಾಗಿ ಕಂಡುಹಿಡಿದ ವಿಜ್ಞಾನಿಯ ಹೆಸರಿನಿಂದ ಕರೆದಿರುವ) ಸಂಗತಿ: Doppler effect ಡಾಪ್ಲರ್‍ ಪರಿಣಾಮ.
  • ಕಾರ್ಯಕಾರಿತ್ವ; ಜಾರಿ; ಚಲಾವಣೆ; ಕಾರ್ಯಗತಗೊಳಿಸುವುದು; ಕಾರ್ಯರೂಪಕ್ಕೆ, ಜಾರಿಗೆ ತರುವುದು: the committees’s recommendations were quickly given effect ಸಮಿತಿಯ ಶಿಫಾರಸ್ಸುಗಳನ್ನು ಬೇಗ ಕಾರ್ಯಗತಗೊಳಿಸಲಾಯಿತು, ಜಾರಿಗೆ ತರಲಾಯಿತು.

  • effect
    ಸಕರ್ಮಕ ಕ್ರಿಯಾಪದ ಪದಗುಚ್ಛ
    effect a policy of insurance ವಿಮೆ ಮಾಡು; ಒಂದು ವಿಮೆ ಪಾಲಿಸಿ ತೆಗೆದುಕೊ.
  • ಆಗಿಸು; ಉಂಟುಮಾಡು; ಆಗಮಾಡು.
  • ಸಾಧಿಸು; ನೆರವೇರಿಸು.
  • ಕಾರ್ಯರೂಪಕ್ಕೆ ತರು; ಕಾರ್ಯಗತಮಾಡು; ಜಾರಿಗೊಳಿಸು; ಆಚರಣೆಗೆ ತರು.

  • effective
    ಗುಣವಾಚಕ ಪದಗುಚ್ಛ
    effective range (of weapon) (ಬಂದೂಕು ಮೊದಲಾದ ಆಯುಧದ) ವ್ಯಾಪ್ತಿ; ಕಾರ್ಯಕ್ಷೇತ್ರ; ಗುರಿತಾಗುವ ದೂರ.
  • ಪರಿಣಾಮಕಾರಿ; ಪ್ರಭಾವಶಾಲಿ: effective measures to solve unemployment ನಿರುದ್ೋಗ ನಿವಾರಿಸಲು ಪರಿಣಾಮಕಾರಿಯಾದ ಕ್ರಮಗಳು.
  • ಪ್ರಬಲ ಪ್ರಭಾವದ.
  • ಆಕರ್ಷಕ; ಗಮನ ಸೆಳೆಯುವ; ಆಸಾಧಾರಣ.
  • ಜಾರಿಗೆ ಬರುವ; ಕಾರ್ಯಗತವಾಗುವ: effective from (-ಇಂದ) ಜಾರಿಗೆ ಬರುವ.
  • ಅಸ್ತಿತ್ವದಲ್ಲಿರುವ; ಚಾಲ್ತಿಯಲ್ಲಿರುವ: effective members of the union ಸಂಘದ ಚಾಲ್ತಿ ಸದಸ್ಯರು.
  • ಕಾರ್ಯತಃ ಬಳಸಬಹುದಾದ, ಉಪಯೋಗಿಸಬಹುದಾದ.
  • ಪರಿಣಾಮದಲ್ಲಿ ಸಮಾನವಾದ; ಒಂದೇ ಪರಿಣಾಮದ; ಅದೇ ಪ್ರಭಾವದ.
  • ಕಾರ್ಯಕಾರಿ; ಫಲಕಾರಿ; ಕಾರ್ಯಸಾಧಕ.
  • (ಸೈನಿಕರು ಮೊದಲಾದವರ ವಿಷಯದಲ್ಲಿ) ಕಾರ್ಯದಕ್ಷ; ಕಾರ್ಯಸಮರ್ಥ; ಕೆಲಸಕ್ಕೆ ಯೋಗ್ಯವಾಗಿರುವ: the effective strength ಕಾರ್ಯಸಮರ್ಥ ಶಕ್ತಿ.

  • effective
    ನಾಮವಾಚಕ
    ಕಾರ್ಯಸಮರ್ಥ ಸೈನಿಕ ಮೊದಲಾದವರು; ಸರಿಯಾದ ಸ್ಥಿತಿಯಲ್ಲಿರುವ, ಕೆಲಸಕ್ಕೆ ಯೋಗ್ಯನಾದ ಸೈನಿಕ, ನಾವಿಕ, ಮೊದಲಾದವರು.

    effective current
    ನಾಮವಾಚಕ
    (ವಿದ್ಯುದ್ವಿಜ್ಞಾನ) ಪರಿಣಾಮಕ (ವಿದ್ಯುತ್‍) ಪ್ರವಾಹ; ದ್ವಿಮುಖ ಪ್ರವಾಹ ಯಾ ಇನ್ನಾವುದೇ ವ್ಯತ್ಯಾಸವಾಗುತ್ತಿರುವ ಪ್ರವಾಹವು ಎಷ್ಟು ಶಾಖ ಉತ್ಪತ್ತಿ ಮಾಡಬಲ್ಲುದೋ ಅಷ್ಟೇ ಶಾಖ ಉತ್ಪತ್ತಿ ಮಾಡಬಲ್ಲ ಏಕಮುಖ ಪ್ರವಾಹ.

    effective resistance
    ನಾಮವಾಚಕ
    (ವಿದ್ಯುದ್ವಿಜ್ಞಾನ) ಪರಿಣಾಮಕ ರೋಧತೆ; ಉತ್ಪತ್ತಿಯಾಗುತ್ತಿರುವ ಸರಾಸರಿ ಶಾಖಕ್ಕೂ ಪರಿಣಾಮಕ ಪ್ರವಾಹದ ವರ್ಗಕ್ಕೂ ಇರುವ ಪ್ರಮಾಣ.

    effective temperature
    ನಾಮವಾಚಕ
    (ಖಗೋಳ ಭೌತವಿಜ್ಞಾನ) ಪರಿಣಾಮಕ ತಾಪ; (ನಕ್ಷತ್ರದ ವಿಷಯದಲ್ಲಿ) ಅದು ಹೊರ ಸೂಸುತ್ತಿರುವಷ್ಟು ಶಕ್ತಿಯನ್ನು ಹೊರಸೂಸುವ ಕಪ್ಪುಕಾಯದ ತಾಪ.

    effectively
    ಕ್ರಿಯಾವಿಶೇಷಣ
  • ಪರಿಣಾಮಕಾರಿಯಾಗಿ; ಕಾರ್ಯಕಾರಿಯಾಗಿ; ಪ್ರಭಾವಶಾಲಿಯಾಗಿ.
  • ಬಲವಾಗಿ; ಪೂರ್ತಿಯಾಗಿ; ಸಂಪೂರ್ಣವಾಗಿ: the rain effectively blotted out the landscape ಮಳೆ ಅಲ್ಲಿನ ಭೂಶ್ಯವನ್ನು ಸಂಪೂರ್ಣವಾಗಿ ಮರೆಮಾಡಿತು.
  • ದಕ್ಷವಾಗಿ; ಸಮರ್ಥವಾಗಿ.


  • logo