logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

day-dream
ನಾಮವಾಚಕ
ಹಗಲುಗನಸು; ಗಾಳಿಗೋಪುರ; ಮನೋರಾಜ್ಯ; ಕಲ್ಪನಾರಾಜ್ಯ; ಭ್ರಮಾಪ್ರಪಂಚ.

day-dream
ಅಕರ್ಮಕ ಕ್ರಿಯಾಪದ
ಹಗಲುಗನಸು ಕಾಣು; ಗಾಳಿಗೋಪುರ ಕಟ್ಟು; ಕಲ್ಪಾನಾರಾಜ್ಯ ದಲ್ಲಿ ವಿಹರಿಸು.

day-dreamer
ನಾಮವಾಚಕ
ಹಗಲುಗನಸಿಗ; ಗಾಳಿಗೋಪುರ ಕಟ್ಟುವವನು.

day-fly
ನಾಮವಾಚಕ
ಹಗಲು ಚಿಟ್ಟೆ; ಕೆಲವು ಗಂಟೆಗಳ ಯಾ ಕೆಲವು ದಿನಗಳ ಕಾಲ ಮಾತ್ರ ಬದುಕುವ ಚಿಟ್ಟೆ ಯಾ ಕೀಟ.

day-girl
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಹಗಲು ಹುಡುಗಿ; ಹಗಲು ವಿದ್ಯಾರ್ಥಿನಿ; ಮನೆಯಲ್ಲಿ ವಾಸವಾಗಿರುವ ಬೋರ್ಡಿಂಗ್‍ ಶಾಲೆಯ ವಿದ್ಯಾರ್ಥಿನಿ.

day-labourer
ನಾಮವಾಚಕ
ದಿನಗೂಲಿ; ಚೆಂಗೂಲಿ; ದಿನಗೂಲಿಯ ಮೇಲೆ ಕೆಲಸಕ್ಕೆ ನೇಮಿಸಿ ಕೊಂಡಿರುವವನು.

day-long
ಗುಣವಾಚಕ
ಇಡೀದಿನದ; ದಿನವೆಲ್ಲ ನಡೆಯುವ; ದಿನಪೂರ್ತಿಯ.

day-long
ಕ್ರಿಯಾವಿಶೇಷಣ
ದಿನವಿಡೀ; ದಿನವೆಲ್ಲ; ದಿವಸಪೂರ್ತಿ.

day-owl
ನಾಮವಾಚಕ
ಹಗಲು ಗೂಬೆ; ಹಗಲಿನಲ್ಲಿ ಬೇಟೆಯಾಡುವ ಸ್ವಲ್ಪಮಟ್ಟಿಗೆ ಗಿಡುಗವನ್ನು ಹೋಲುವ ಗೂಬೆ.

day-return
ನಾಮವಾಚಕ
ದಿನದ ಟಿಕೆಟ್ಟು; ಒಂದು ದಿನದಲ್ಲಿಯೇ ಹೋಗಿ ಬರಲು ಅವಕಾಶವಿರುವ ಕಡಿಮೆ ದರದ ಟಿಕೆಟ್ಟು.


logo